ಕ್ವಿಟ್ ಇಂಡಿಯಾ ಅಂಗವಾಗಿ ರಾಷ್ಟ್ರಧ್ವಜ – ರಾಷ್ಟ್ರಗೀತೆ ಮಾಹಿತಿ ಶಿಬಿರ
ಸಂಜೆವಾಣಿ ವಾರ್ತೆ
ಚಿತ್ರದುರ್ಗ ಆ 14;  ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ದಿನಾಚರಣೆಯ ಅಂಗವಾಗಿ ಭಾರತ ಸೇವಾದಳ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವರ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಹಾಸ್ಟೆಲ್  ವಾರ್ಡನ್ ಗಳಿಗೆ  ದೇವರಾಜ ಅರಸ್ ಭವನದಲ್ಲಿ  ರಾಷ್ಟ್ರಧ್ವಜ ರಾಷ್ಟ್ರಗೀತೆ ಧ್ವಜವಂದನೆ ಕುರಿತ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿತ್ತು.   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ: ಆರ್.ಸುಬ್ರ ನಾಯಕ್ ಕಾರ್ಯಗಾರವನ್ನು ಉದ್ಘಾಟಿಸಿದರು.  ನಂತರ ಮಾತನಾಡಿದ ಅವರು ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜ ವಂದನೆ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಸರಿಯಾಗಿ ಕಟ್ಟದೆ ರಾಷ್ಟ್ರಧ್ವಜವು ತಲೆಕೆಳಗಾಗಿರುವ ಸ್ಥಿತಿಯನ್ನು ನಾವು ನೋಡಿರುತ್ತೇವೆ ಇದು ರಾಷ್ಟ್ರಕ್ಕೆ ಅಗೌರವವಾಗುತ್ತದೆ ಎಂದರು.  ಜಿಲ್ಲೆಯ ಎಲ್ಲಾ ಹಾಸ್ಟೆಲ್ಗಳಲ್ಲಿ ರಾಷ್ಟ್ರೀಯ ಹಬ್ಬ ವ್ಯವಸ್ಥೆತವಾಗಿ ನಡೆಯಬೇಕಾಗಿರುವುದರಿಂದ ಇಂದು ಭಾರತ ಸೇವಾದಳ ಸಹಯೋಗದಲ್ಲಿ ರಾಷ್ಟ್ರಧ್ವಜ ಕಟ್ಟುವ ಬಗ್ಗೆ ಇಳಿಸುವ ಬಗ್ಗೆ ಧ್ವಜ ಸಂಹಿತೆ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ ಎಂದರು  ತಾವು ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಸರ್ಕಾರದ ಆದೇಶದಂತೆ ರಾಷ್ಟ್ರೀಯ ಹಬ್ಬ ದಿನದಂದು ಕಡ್ಡಾಯವಾಗಿ ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಪೂಜಿಸಬೇಕೆ ಮತ್ತು ಸಂಗೊಳ್ಳಿ ರಾಯಣ್ಣನ ಸ್ಮರಿಸುವುದು ಕೂಡ ಅಗತ್ಯ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕು  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ  ಪುಷ್ಪಲತಾ ಬಾವಿಮಠ ರವರು  ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ವಿಟ್ ಇಂಡಿಯಾ ಪಾತ್ರವನ್ನು   ಮತ್ತು ಧ್ವಜ ಸತ್ಯಾಗ್ರಹವನ್ನು ಸ್ಮರಿಸಿದರು.