ಬೀದರ್ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿ
ಭಾಲ್ಕಿ:ಆ.೧೪:ಬೀದರ್ ಜಿಲ್ಲೆಯ ದೇಗುಲ ಜಿರ್ಣೋದ್ಧಾರ ಸೇರಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವಂತೆ ಸಂಸದ ಸಾಗರ ಖಂಡ್ರೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರಸಿAಗ ಶೇಖಾವತ ಅವರನ್ನು ಮಂಗಳವಾರ ಭೇಟಿಯಾದ ಸಂಸದರು, ವಿಶೇಷವಾಗಿ ಕೇಂದ್ರದ ಪ್ರಸಾದ ಯೋಜನೆಯಡಿ ಬೀದರ್‌ನ ಇತಿಹಾಸ ಪ್ರಸಿದ್ಧ ಪಾಪನಾಶ ಮಂದಿರ ಜಿರ್ಣೋದ್ಧರಕ್ಕಾಗಿ ಆಯ್ಕೆಗೊಂಡಿದೆ.
ಜತೆಗೆ ಈ ದೇಗುಲ ಜೀರ್ಣೋದ್ಧಾರಕ್ಕಾಗಿ ಈ ಹಿಂದೆ ಸುಮಾರು ೨೨ ಕೋಟಿ ರೂ ಅನುದಾನ ಘೋಷಣೆ ಆಗಿತ್ತು. ಆದರೆ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳಲಿಲ್ಲ.
ಈ ಹಿನ್ನೆಲೆಯಲ್ಲಿ ತಾವುಗಳು ವಿಶೇಷ ಕಾಳಜಿ ವಹಿಸಿ ಪಾಪನಾಶ ಮಂದಿರ ಅಭಿವೃದ್ಧಿಗೆ ಶೀಘ್ರ ಅನುದಾನ ಬಿಡುಗಡೆಗೊಳಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.