೮ರಾಜ್ಯದಲ್ಲೇ ಚಿತ್ತಾಪುರ ಮಾದರಿ ಮಾಡುವ ಗುರಿ
ಚಿತ್ತಾಪುರ :ಆ.೧೪:ಚಿತ್ತಾಪೂರನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗಿಸುವ ಗುರಿಯನ್ನು ಹೊಂದಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ನುಡಿದರು.
ತಾಲೂಕಿನ ಹಲಕಟ್ಟಾ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ ಹಾಗೂ ಸಂಬAಧಿಸಿದ ಇಲಾಖೆಗಳ ಅಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿದರು.
೧೯೯೨ ರಲ್ಲಿ ವಾಡಿ, ಬಸವೇಶ್ವರ ನಗರ, ದೇವಾಪುರ ಹಾಗೂ ಹಲಕಟ್ಟಾ ಗ್ರಾಮಗಳು ಕಂದಾಯ ಗ್ರಾಮಗಳಾಗಿ ವಿಭಾಗವಾದ ನಂತರ ಹಲವಾರು ವರ್ಷಗಳ ಕಾಲ ಹಲಕಟ್ಟಾ ಗ್ರಾಮದ ಜಮೀನುಗಳಿಗೆ ಸಂಬAಧಿಸಿದAತ ಪಹಣಿಯಲ್ಲಿ ದೋಷ ಉಂಟಾಗಿ ಹೆಸರುಗಳು ಆಕಾರ ಬಂದ್ ಹಾಗೂ ನಕಾಶೆಯಲ್ಲಿ ತಪ್ಪಾಗಿ ನಮೂದಾಗಿ ರೈತರಿಗೆ ಆಗುತ್ತಿದ್ದ ಸಮಸ್ಯೆಗೆ ಇಂದು ಪರಿಹಾರ ನೀಡಲಾಯಿತು.
ಭೂ ದಾಖಲೆಗಳಲ್ಲಿ ಉಂಟಾದ ಸಮಸ್ಯೆಗಳಿಂದಾಗಿ ಗ್ರಾಮದ ರೈತರು ಜಮೀನುಗಳನ್ನು ಮಾರುವಂತಿರಲಿಲ್ಲ, ಬ್ಯಾಂಕ್ ಗಳಲ್ಲಿ ಸಾಲ ಪಡೆಯುವಂತಿರಲಿಲ್ಲ. ರೈತರ ಈ ಸಮಸ್ಯೆಯನ್ನು ವಿಶೇಷ ಆಸಕ್ತಿ ವಹಿಸಿ ಜಮೀನುಗಳ ದಾಖಲಾತಿಗೆ ಸಂಬAಧಿಸಿದAತೆ ಕಂದಾಯ ಹಾಗೂ ಇತರೆ ಇಲಾಖೆಯೊಂದಿಗೆ ಎರಡು ಮೂರು ಹಂತದಲ್ಲಿ ಸಭೆ ನಡೆಸಿ ರೈತರ ಜಮೀನುಗಳಿಗೆ ಪಹಣಿ ಸೇರಿದಂತೆ ಇತರೆ ದಾಖಲೆಗಳನ್ನು ಸರಿಹೊಂದುವAತೆ ಕ್ರಮ ಕೈಗೊಂಡು ಇಂದು ೫೧೩ ರೈತರಿಗೆ ಪಹಣಿ ವಿತರಣೆ ಮಾಡಲಾಯಿತು.
ಕಂದಾಯ ಗ್ರಾಮಗಳಾಗಿ ನಿರ್ಮಾಣವಾದ ನಂತರ ಹಲಕಟ್ಟಾ ಗ್ರಾಮದ ರೈತರ ಜಮೀನುಗಳ ಪಹಣಿಗಳಲ್ಲಿನ ದೋಷ ಸರಿಪಡಿಸುವ ಕಾರ್ಯಕ್ಕೆ ಈ ಹಿಂದಿನ ಸರ್ಕಾರದಲ್ಲಿದ್ದ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದುದರಿಂದ ವಿಳಂಬವಾಯಿತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಅವಿರತ ಶ್ರಮದಿಂದಾಗಿ ಇಂದು ದೋಷರಹಿತ ಪಹಣಿಗಳ ವಿತರಣೆ ಮಾಡುವಂತಾಗಿದೆ.
ಮುAದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಚಿತ್ತಾಪುರ ಕ್ಷೇತ್ರದ ಚಿತ್ರಣ ಬದಲಾಯಿಸಲಾಗುವುದು. ಕಲ್ಯಾಣಪಥ ಹಾಗೂ ಪ್ರಗತಿಪಥ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಚಿತ್ತಾಪುರ ತಾಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಲಾ ?೨೫ ಲಕ್ಷ ವೆಚ್ಚದಲ್ಲಿ ಮಹಿಳೆಯರಿಗಾಗಿ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗುವುದು.
ಕಲಬುರಗಿ ಉಸ್ತುವಾರಿ ಸಚಿವನಾಗಿ ಚಿತ್ತಾಪುರದ ಶಾಸಕನಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನು ಸದಾ ಕಾರ್ಯೋನ್ಮುಖನಾಗಿರುತ್ತೇನೆ.ಸಮೀಪದ ಹಲಕರ್ಟಿ ಗ್ರಾಮದ ಕಟ್ಟಿಮನಿ ಹಿರೇಮಠದ ಆವರಣದಲ್ಲಿ
ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ಮ ಮಾತನಾಡಿ, ನಾನು ಅಧಿಕಾರಿ ವಹಿಸಿಕೊಂಡ ನಂತರ, ಹಲಕರ್ಟಿ ಗ್ರಾಮದ ಸರ್ವೆ ನಂಬರ್ ತಿದ್ದುಪಡಿಗೆ ಟಿಮ್ ರಚಿಸುವ ಮೂಲಕ ಪಹಣಿ ಪತ್ರದ ದೋಷಗಳನ್ನು ನಿವಾರಣೆ ಮಾಡಲಾಗಿದೆ.
ಜಿಪಂ ಸಿಇಒ ಭವರಸಿಂಗ್ ಮಿನಾ, ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ತಹಶೀಲ್ದಾರ ಅಮರೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ ಸಾಹೇಬ್, ಭೀಮಣ್ಣ ಸಾಲಿ, ಕಟ್ಟಿಮನಿ ಹಿರೇಮಠದ ಶ್ರೀಮುನಿಂದ್ರ ಸ್ವಾಮಿ, ಗ್ರಾಪಂ ಅಧ್ಯಕ್ಷ ರಾಕೇಶ್ ಸಿಂಧೆ, ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದೀನ ಸಾಬ್, ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಜಗದೀಶ್ ಸಿಂಧೆ, ಟೋಪಣ್ಣ ಕೊಮಟೆ, ಶಿವಾನಂದ ಪಾಟೀಲ,
ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ನಾಡಗೀತೆ ಪ್ರಸ್ತುತ ಪಡಿಸಲಾಯಿತು.