ಹೆಚ್ ಎಸ್ ದ್ಯಾಮೇಶ್ ಗೆ ನಾಟಕ ಅಕಾಡೆಮಿ ಪ್ರಶಸ್ತಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಆ.14; ಈ  ಸಾಲಿನ (೨೦೨೪-೨೫)  ನಾಟಕ  ಅಕಾಡೆಮಿಯ  ವಾರ್ಷಿಕ  ಪ್ರಶಸ್ತಿಗೆ  ಅಧ್ಯಾಪಕ , ರಂಗಕರ್ಮಿ  ಹೆಚ್ ಎಸ್ ದ್ಯಾಮೇಶ್  ಭಾಜನರಾಗಿದ್ದಾರೆ.  ಶ್ರೀಯುತರು  ಕಳೆದ  ಮೂರು ದಶಕಗಳಿಂದ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ, ಶಿವಸಂಚಾರ, ಭಾರತ ಸಂಚಾರ, ಶಿವದೇಶ ಸಂಚಾರ, ವಚನ ಸಂಚಾರ, ರಂಗಪ್ರಯೋಗಶಾಲೆ ಸೇರಿದಂತೆ ವಿವಿಧ ರಂಗ ಸಂಸ್ಥೆಗಳೊಂದಿಗೆ ಸಂಚಾಲಕರಾಗಿ, ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ, ಲೇಖಕರಾಗಿ, ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.ಶ್ರೀ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಎಲೆಮರೆಯ ಕಾಯಂತೆ ಕೆಲಸ ಮಾಡುತ್ತಿರುವ ದ್ಯಾಮೇಶ್ ಅವರನ್ನು ಗುರುತಿಸಿ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿರುವುದು ಅತ್ಯಂತ ಸಂತೋಷ ತಂದಿದೆ ಎಂದರಲ್ಲದೆ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ್ದಾರೆ.