ಮಾನವ ಬಂಧುತ್ವ ವೇದಿಕೆಯಿಂದ ಬಸವಪಂಚಮಿ ಆಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಆ.14; ಮಾನವ ಬಂಧುತ್ವ ವೇದಿಕೆ ಕರ್ನಾಟಕ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸಹಭಾಗಿತ್ವದಲ್ಲಿ ಹರಿಹರ ನಗರದ ಗುತ್ತೂರು ಹೆಲಿಪ್ಯಾಡ್ ನಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಮಕ್ಕಳು ಮತ್ತು ವೃದ್ಧರೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ಸಹ ಬಸವ ಪಂಚಮಿ ಆಚರಿಸಿ ಹಾಲು ಮತ್ತು ಬ್ರೆಡ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ಡಾ.ಎ ಬಿ ರಾಮಚಂದ್ರಪ್ಪ ಮೌಢ್ಯ ಆಚರಣೆಗಳ ವಿರುದ್ಧ ಪ್ರಾಸ್ತಾವಿಕವಾಗಿ ಮಾತನಾಡಿದರು ಈ ಒಂದು ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರು ಮಂಜುನಾಥ ಎಂ, ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಮಂಜುನಾಥ್ ದೊಡ್ಮನೆ,   ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಮಂಜಪ್ಪ ಜಿ ಎಂ, ರಾಜನಹಳ್ಳಿ  ಮಾನವ ಬಂದುತ್ವ ವೇದಿಕೆಯ ಮಹಿಳಾ ಜಿಲ್ಲಾ  ಸಂಚಾಲಕಿ ಪಾರ್ವತಿ  ಮಂಜುನಾಥ್, ಆರ್ಮಿ ನಾಗರಾಜ್, ನಾಗೇನಹಳ್ಳಿ  ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು  ಇದ್ದರು.