ಆ.೧೬ ಕ್ಕೆ‌ ನಟ ವಿಕ್ರಂ‌ರವಿಚಂದ್ರನ್ ಜನ್ಮದಿನಾಚರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೩; ನಟ ವಿಕ್ರಂ ರವಿಚಂದ್ರನ್ ರವರ ಹುಟ್ಟು ಹಬ್ಬದ ಪ್ರಯುಕ್ತ ಆ.16ಕ್ಕೆ ವಿಶೇಷ ಪೂಜೆ, ಅಂಗವಿಕಲ ಮಕ್ಕಳಿಗೆ ಸಿಹಿ ವಿತರಣೆ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ದಾವಣಗೆರೆ ಜಿಲ್ಲಾ ಸಿಪಾಯಿ ರವಿಚಂದ್ರನ್ ಸೇನೆ ಮತ್ತು ವಿಕ್ರಂ ರವಿಚಂದ್ರನ್ ಅಭಿಮಾನಿಗಳ ಸಂಘದ ಖಜಾಂಚಿ ಶ್ರವಣಕುಮಾರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಸಿಪಾಯಿ ರವಿಚಂದ್ರನ್ ಸೇನೆ ಮತ್ತು ವಿಕ್ರಂ ರವಿಚಂದ್ರನ್ ಅಭಿಮಾನಿಗಳಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಆ.೧೬ ರಂದು ಬೆಳಿಗ್ಗೆ 10ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ  ದೇವಿಗೆ ಅಭಿಷೇಕ ಮತ್ತು ವಿಶೇಷ ಪೂಜೆಯನ್ನು ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.ನಂತರ ಮಧ್ಯಾಹ್ನ ನಗರದ ಎಸ್ ಎಸ್ ಬಡಾವಣೆಯಲ್ಲಿರುವ ಅಂಗವಿಕಲ‌ಮಕ್ಕಳ ಶಾಲೆಯಲ್ಲಿ ಸಿಹಿ ವಿತರಣೆ ಹಾಗೂ‌ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿವಿ.ಗಂಗಾಧರ್,ಮನೋಜ್, ವೆಂಕಟೇಶ್ ಇದ್ದರು.