ನಿದ್ದೆಗೆಟ್ಟು ಹಗಲು ರಾತ್ರಿ ಕೆಲಸ ಮಾಡುವ ಸೆಕ್ಯೂರಿಟಿ ಗಾರ್ಡ್ಗಳ ಶೋಷಣೆ ತಪ್ಪಲಿ.
ಚಿತ್ರದುರ್ಗ.ಆ.೧೦; ಹಗಲು ರಾತ್ರಿ ನಿದ್ದೆಗೆಟ್ಟು, ನಮ್ಮ ಆಸ್ತಿ, ನಮ್ಮ ಕಾಲೇಜು, ನಮ್ಮ ವಸ್ತುಗಳನ್ನ, ನಮ್ಮ ಹಾಸ್ಟೆಲ್‌ಗಳನ್ನ, ನಮ್ಮ ಹೆಣ್ಣು ಮಕ್ಕಳನ್ನ, ನಮ್ಮ ವಿದ್ಯಾರ್ಥಿಗಳನ್ನ, ನಮ್ಮ ಹೋಟೆಲ್‌ಗಳನ್ನ, ನಮ್ಮ ಆಸ್ಪತ್ರೆಗಳನ್ನ ಕಾದು, ಯಾವುದೇ ಕಳ್ಳತನವಾಗದಂತೆ, ಎಚ್ಚರಿಕೆವಹಿಸಿ, ನಿದ್ದೆಗೆಟ್ಟು, ಕಷ್ಟಪಡುವ ಸೆಕ್ಯೂರಿಟಿ ಗಾರ್ಡ್ಗಳ ಬಗ್ಗೆ ಶೋಷಣೆಯಾಗದಂತೆ,ಮಾನವೀಯತೆಯಿಂದ ಅವರನ್ನ ನಡೆಸಿಕೊಳ್ಳಬೇಕೆಂದು ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ವಿನಂತಿಸಿಕೊAಡಿದ್ದಾರೆ.ಕನಿಷ್ಠ ವೇತನವನ್ನು ಸಹ ಪಡೆಯದೆ ಕೆಲವೊಮ್ಮೆ ಕಡಿಮೆ ಸಂಬಳ ಪಡೆದು, ದಿನದ 12 ಗಂಟೆ ಕಣ್ಣಿನ ರೆಪ್ಪೆ ಮುಚ್ಚದಂತೆ, ಸುತ್ತಮುತ್ತಲು ನಡೆಯುವ ಆಗುಹೋಗುಗಳನ್ನ ಪರಿಶೀಲಿಸುತ್ತಾ, ಭದ್ರತೆಯನ್ನು ಒದಗಿಸುತ್ತಾ, ತಮ್ಮ ಜೀವವನ್ನೇ ಹೊತ್ತೆಗಿಟ್ಟು, ಕಾಡಿನಲ್ಲಿ, ಎಸ್ಟೇಟ್‌ಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ, ಕ್ಯಾಂಪಸ್‌ಗಳಲ್ಲಿ ಒಂಟಿಯಾಗಿ ರಾತ್ರಿ ಹಗಲು ಸೆಕ್ಯೂರಿಟಿ ಕೆಲಸ ಮಾಡುವಂತಹ ಗಾರ್ಡ್ಗಳಿಗೆ ಕನಿಷ್ಠ ವೇತನ, ಕನಿಷ್ಠ ಮೂಲಭೂತ ಸೌಲಭ್ಯಗಳನ್ನ, ಕನಿಷ್ಠ ಸೌಜನ್ಯ, ಕನಿಷ್ಠ ಮಾನವೀಯತೆಗಳನ್ನ ತೋರಿಸಿ, ಅವರನ್ನು ನ್ಯಾಯಬದ್ಧವಾಗಿ ನಡೆಸಿಕೊಂಡು, ಆ ಹುದ್ದೆಗೆ ಗೌರವ ತಂದುಕೊಡಬೇಕು ಎಂದು ವಿನಂತಿಸಿ ಕೊAಡಿದ್ದಾರೆ.ಈಗಲೂ ಸಹ ಬಹಳಷ್ಟು ಸೆಕ್ಯೂರಿಟಿ ಗಾರ್ಡಗಾಗಿ ಕೆಲಸ ಮಾಡುತ್ತಿರುವವರು ನಿವೃತ್ತರಾದಂತ ನೌಕರರೇ ಹೆಚ್ಚಾಗಿರುತ್ತಾರೆ, ಆ ವಯಸ್ಸಿನಲ್ಲೂ ಸಹ ಅವರು ರಾತ್ರಿ ಹಗಲು ಎನ್ನದೆ ಕುಳಿತಲ್ಲೇ ಕುಳಿತು, ನಿಂತಲ್ಲೇ ನಿಂತು ಅಥವಾ ಸುತ್ತಾಡಿಕೊಂಡು ಸ್ಥಳ ವೀಕ್ಷಣೆ ಮಾಡುತ್ತಾ, ಬಂದವರನ್ನು ವಿಚಾರಿಸುತ,್ತ ಪಾರ್ಕಿಂಗ್ ವ್ಯವಸ್ಥೆಗಳನ್ನು ಸರಿಪಡಿಸುತ್ತಾ, ಹೋಟೆಲ್ ಮುಂದೆ, ಬಾರ್ ಅಂಡ್ ರೆಸ್ಟೋರೆಂಟ್ ಮುಂದೆ, ಹಾಸ್ಟೆಲ್‌ಗಳ ಮುಂದೆ, ಆಸ್ಪತ್ರೆಗಳ ಮುಂದೆ, ಬಸ್ಟಾ÷್ಯಂಡ್‌ಗಳ ಮುಂದೆ, ಎಟಿಎಂಗಳ ಮುಂದೆ, ಎಲ್ಲೆಂದರಲ್ಲಿ ಸೆಕ್ಯೂರಿಟಿ ಗಾರ್ಡ್ಗಳನ್ನು ನಾವು ನೋಡುತ್ತಿದ್ದೇವೆ. ಅವರ ಸಂಬಳ, ಅವರ ವೇತನ, ಅವರ ಭದ್ರತೆ ಹಣ, ಆರೋಗ್ಯ ವಿಮೆ, ಜೀವ ವಿಮೆ, ಜೀವ ಹಾನಿಯಾದರೇ ಅವರಿಗೆ ಪರಿಹಾರ, ಅವರ ಕುಟುಂಬದ ರಕ್ಷಣೆ, ಯಾವುದರ ಬಗ್ಗೆನೂ ಸಹ ಸಾರ್ವಜನಿಕರು ಹೆಚ್ಚು ಗಮನ ಹರಿಸದೇ, ತಮ್ಮ ಪಾಡಿಗೆ ತಾವು, ಅವರ ಪಾಡಿಗೆ ಅವರನ್ನು ಬಿಟ್ಟು ಜೀವನ ನಡೆಸುತ್ತಿರುವುದು ಸರಿಯಾದದ್ದಲ್ಲ ಎಂದಿದ್ದಾರೆ.ಸೆಕ್ಯೂರಿಟಿ ಗಾರ್ಡನ್ ನೇಮಿಸಿಕೊಂಡAತಹ ಕೆಲವು ಸಂಸ್ಥೆಗಳು ಹೆಚ್ಚು ಹಣವನ್ನು ಪಡೆದು, ಕೆಲಸ ಮಾಡುವ ವ್ಯಕ್ತಿಗಳಿಗೆ ಕಡಿಮೆ ಹಣ ನೀಡಿ, ಶೋಷಣೆಯ ಗೆರೆಯನ್ನ ಎಳೆಯುತ್ತಲೇ ಬಂದಿದ್ದಾರೆ. ಅವರು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದರು ಸಹ ವಿಶ್ರಾಂತಿ ಪಡೆಯಲು ಸೂಕ್ತವಾದ ಸಮಯವನ್ನು ಸಹ ನೀಡದೇ, ಕೆಲಸ ಮಾಡು, ಇಲ್ಲ ಬಿಟ್ಟು ಹೋಗು ಎಂಬ ಮಾತುಗಳನ್ನಾಡಿ, ಅವರನ್ನು ನೋಯಿಸಿ, ಅವರಿಗೆ ಕೊಡುತ್ತಿರುವ ಸಂಬಳದಲ್ಲಿ ತಮ್ಮ ಸಂಸ್ಥೆಗಳನ್ನ ಸಮೃದ್ಧವಾಗಿ ಬಳಸಿಕೊಳ್ಳುವುದು ನ್ಯಾಯವಾದುದಲ್ಲ. ಸೆಕ್ಯೂರಿಟಿ ಸಂಸ್ಥೆಗಳು 15 ಸಾವಿರ ಸಂಬಳ ಪಡೆದು, ಗಾರ್ಡ್ಗಳಿಗೆ 8ಂAA, 8.5ಂA ಅಥವ 9ಂAA ನೀಡಿ, ಅವರಿಗೆ ಯಾವುದೇ ಸೌಲತ್ತುಗಳನ್ನು ನೀಡದೇ, ಪಿಎಫ್ ನೀಡದೇ, ಕೆಲವೊಮ್ಮೆ ಶೋಷಣೆ ಮಾಡುತ್ತಾರೆ ಎಂಬುದನ್ನ ಅವರ ಬಾಯಿಂದಲೇ ಕೇಳಿ ತಿಳಿದುಕೊಂಡಾಗ ಮನಸ್ಸಿಗೆ ನೋವಾಗುತ್ತದೆ. ಎರಡು ದಿವಸ, ಮೂರು ದಿವಸ ನಿದ್ದೆ ಗೆಟ್ಟು, ಕೆಲಸ ಮಾಡಿದಾಗ ಒಂದು ದಿವಸ ವಿಶ್ರಾಂತಿ ಕೇಳಿದರು ಸಹ ನೀಡದೆ, ಕೇವಲ ಬಿಟ್ಟು ಹೋಗು, ಕೆಲಸ ಮಾಡಲು ಸಾಧ್ಯವಾದರೆ ಮಾಡು ಎಂಬ ಮಾತನ್ನಾಡುತ್ತಾರೆ ಎಂದು ನೊಂದು ನುಡಿಯುತ್ತಿದ್ದಾರೆ ಎಂದರು.ಕೆಲವೊಮ್ಮೆ ಸೆಕ್ಯೂರಿಟಿ ಗಾರ್ಡ್ಗಳು ರಾತ್ರಿಯೆಲ್ಲ ನಿದ್ದೆ ಮಾಡಿ, ಮತ್ತೆ ಹಗಲು ಸಹ ಕೆಲಸ ಮಾಡಿ, ಹೆಚ್ಚಿನ ಹಣದಾಸೆಗೆ, ದುಡಿಮೆಯ ಆಸೆಗೆ, ಕುಟುಂಬದ ನಿರ್ವಹಣೆಗೆ ಹಣ ಹೊಂದಿಸಲು., ನಿದ್ದೆಗೆಟ್ಟು, ಆರೋಗ್ಯ ಕೆಡಿಸಿಕೊಂಡು, ಕೆಲಸ ಮಾಡುತ್ತಾರೆ. ರಾತ್ರಿಯೆಲ್ಲ ಕೆಲಸ ಮಾಡಿದ ವ್ಯಕ್ತಿ, ಬೆಳಗ್ಗೆ ಮಲಗಬೇಕಾದ್ದು ಪ್ರಕೃತಿಯ ನಿಯಮ. ಆದರೆ ಇವರು ಕೊಡುವ ರೂ.3ಂA ಓ.ಟಿ ಗೋಸ್ಕರ, ಮತ್ತೆ ಆಗಲೆಲ್ಲಾ ಕುರ್ಚಿ ಮೇಲೆ ಕೂತು, ನಿದ್ರಿಸುತ್ತ, ಬಲವಂತವಾಗಿ ಕಣ್ಣು ಬಿಟ್ಟುಕೊಂಡು, ಕೆಲಸ ಮಾಡುವುದನ್ನು ನೋಡಿದರೆ, ಮಾನವೀಯ ಸಂಬAಧಗಳೇ ಕ್ಷೀಣಿಸುತ್ತಿವೆ ಎಂದನಿಸುತ್ತದೆ. ಎಂಟರಿAದ ಹನ್ನೆರಡು ಗಂಟೆ ಕೆಲಸ ಮಾಡಿದಂತಹ ವ್ಯಕ್ತಿಗಳಿಗೆ, ಐದರಿಂದ ಆರು ಗಂಟೆನಾದ್ರೂ ವಿಶ್ರಾಂತಿ ದೊರಕಬೇಕು. ಆದರೆ ಇವರು ರಾತ್ರಿಯೆಲ್ಲಾ ಕೆಲಸ ಮಾಡಿ, ಮತ್ತೆ ಬೆಳಿಗ್ಗೆ ಎಲ್ಲ್ಲಾ ಇನ್ನೊಂದು ಓವರ್ ಟೈಮ್ ಡ್ಯೂಟಿ ಮಾಡಿ ಹಣ ಸಂಪಾದಿಸಿಕೊಳ್ಳುತ್ತಿರುವುದನ್ನು ನೋಡಿದರೆ, ಅವರಿಗೆ ನೀಡುತ್ತಿರುವ ಸಂಬಳದಲ್ಲಿ ಶೋಷಣೆಯಾಗುತ್ತಿದೆ ಎಂಬುದನ್ನು ನಾವು ಅರಿವು ಮಾಡಿಕೊಳ್ಳಬಹುದು ಎಂದರು.