ಶ್ರೀರಾಮಲಿಂಗೇಶ್ವರ ಮಠದಲ್ಲಿ ಶ್ರಾವಣ ಪೂಜೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೧೩; ಚನ್ನಗಿರಿ ತಾಲೂಕು ಹರನಹಳ್ಳಿ – ಕೆಂಗಾಪುರ ಶ್ರೀರಾಮಲಿಂಗೇಶ್ವರ ಮಠದಲ್ಲಿ ಎರಡನೇ ಶ್ರಾವಣ ಸೋಮವಾರ ಶ್ರೀರಾಮಲಿಂಗೇಶ್ವರ ಮಹಾಸ್ವಾಮಿಗಳು ಮಠದ ಆವರಣದಲ್ಲಿರುವ ನಾಗದೇವರಿಗೆ ಅಭಿಷೇಕದೊಂದಿಗೆ  ಪೂಜೆ ಸಲ್ಲಿಸಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಅಕ್ಕ ಪಕ್ಕ ಗ್ರಾಮದ ಭಕ್ತಾದಿಗಳಿಗೆ ಹಾಲು ಕುಡಿಸಿ ಆಶೀರ್ವಚನ ನೀಡಿದರು. ಹಾವು ಅಥವಾ ಯಾವುದೇ ವಿಷ ಜಂತು ಆಗಲಿ ಯಾರಿಗೂ ಸುಖಾಸುಮ್ಮನೆ ತೊಂದರೆ ಕೊಡುವುದಿಲ್ಲ.  ಅವು ಕಂಡಾಗ ಯಾರೂ ಸಹ ಹೊಡೆಯಬಾರದು.  ಸಹ ಜೀವನ ತತ್ವವನ್ನು  ಎಲ್ಲರೂ  ಅರ್ಥ ಮಾಡಿಕೊಂಡು ನಡೆಯಬೇಕು ಎಂದು ಭಕ್ತಾದಿಗಳಿಗೆ ಕರೆ ಕೊಟ್ಟರು.