ಆದಿ ಕರ್ನಾಟಕ ವಿದ್ಯಾಭಿವೃದ್ದಿ ಸಂಸ್ಥೆಯಿಂದ‌ ಸನ್ಮಾನ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೩; ನಗರದ ಪಿ.ಜೆ ಬಡಾವಣೆಯಲ್ಲಿರುವ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಸ್ಥೆ  ಹಾಗೂ ಆದಿ ಕರ್ನಾಟಕ ವಿದ್ಯಾರ್ಥಿನಿಲಯ ವತಿಯಿಂದ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ನೂತನ ನಾಮನಿರ್ದೇಶಕ ಸದಸ್ಯರಾದ ಎಲ್ .ಹೆಚ್ .ಸಾಗರ್  ಮತ್ತು ಉತ್ತರ ವಲಯ ಆಶ್ರಯ ಸಮಿತಿ ಸದಸ್ಯರಾದ ಕಣ್ಣಾಲ್ ಅಂಜಿನಪ್ಪ, ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಜಮಖಾನ ತಲೆದಿಂಬು ರಗ್ಗು ಗಳನ್ನು ಉಡುಗೊರೆ ನೀಡಿದ ದಾನಿಗಳಾದ ಭಾಸ್ಕರ್ ರೆಡ್ಡಿ, ಸಂಸ್ಥೆಯಲ್ಲಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್. ರಾಜಣ್ಣ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ  ಪಾಲಿಕೆಯ ಮೇಯರ್  ವಿನಾಯಕ್ ಪೈಲ್ವಾನ್ ಅವರಿಗೆ ವಿದ್ಯಾಸಂಸ್ಥೆ ವತಿಯಿಂದ ಅಧ್ಯಕ್ಷರಾದ ಎಲ್.ಎಂ ಹನುಮಂತಪ್ಪ, ಕಾರ್ಯದರ್ಶಿಗಳಾದ ಬಿ.ಹೆಚ್ ವೀರಭದ್ರಪ್ಪ ಹಾಗೂ ನಿರ್ದೇಶಕರುಗಳು ಸನ್ಮಾನಿಸಿ  ಗೌರವಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಶಿಕ್ಷಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.