ದಾವಣಗೆರೆ ವೃತ್ತಿ ರಂಗಾಯಣಕ್ಕೆ ಕಡಕೋಳ ನೇಮಕ
ದಾವಣಗೆರೆ, ಆ:೧೩,ಮಲ್ಲಿಕಾರ್ಜುನ ಕಡಕೋಳ ಅವರನ್ನು ದಾವಣಗೆರೆ ವೃತ್ತಿ ರಂಗಾಯಣದ ನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಕಳೆದ ಎರಡು ವರ್ಷಕಾಲ ಖಾಲಿ ಇದ್ದ ಹುದ್ದೆಗೆ ನಿರ್ದೇಶಕರಾಗಿ ಕಡಕೋಳ ಮೂರು ವರ್ಷದ ಅವಧಿಗೆ ನೇಮಕವಾಗಿದ್ದಾರೆ. ಈ ಹಿಂದೆ ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಂಗ ಸಮಾಜದ ಸದಸ್ಯರಾಗಿ ಬಾ ಅತಿಥಿ, ರಂಗ ಸಮಾಗಮ, ತಿಂಗಳ ಬೆಳಕಲಿ ರಂಗದ ಮೆರಗು ಮೊದಲಾದ ಕಾರ್ಯಕ್ರಮಗಳ ಮೂಲಕ ಕಡಕೋಳ ಅವರು ರಂಗಾಸಕ್ತರು ಮತ್ತು ಸರಕಾರದ ಗಮನ ಸೆಳೆದಿದ್ದರು. ದಾವಣಗೆರೆ ವೃತ್ತಿ ರಂಗಾಯಣ ಸ್ಥಾಪನೆಯಲ್ಲೂ ಅವರ ಪರಿಶ್ರಮ ಗಮನಾರ್ಹ. “ವೃತ್ತಿ ರಂಗಭೂಮಿ : ವರ್ತಮಾನದ ಸವಾಲುಗಳು” ವಿಷಯದ ಮೇಲೆ ಫೆಲೋಶಿಪ್ ಮಾಡಿದ್ದಾರೆ.