ಅ.03ರಂದು ದಸರಾ ಮಹೋತ್ಸವದ ಉದ್ಘಾಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಅ.01:- ಅಕ್ಟೋಬರ್ 03 ರಂದು ಬೆಳಗ್ಗೆ 9.15 ಗಂಟೆಯಿoದ 9:45 ಗಂಟೆಯವರೆಗೆ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವದ ಉದ್ಘಾಟನೆಯಾಗಲಿದ್ದು, ಎಲ್ಲಾ 19 ಉಪಸಮಿತಿಗಳು ದಸರಾ ಆಚರಣೆ ಕುರಿತ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ.ಮಹದೇವಪ್ಪನವರು ತಿಳಿಸಿದರು.
ನೂತನ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ದಸರಾ ಸಿದ್ಧತೆ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.03 ರಂದು ಸಂಜೆ 6 ಗಂಟೆಗೆ ಅರಮನೆಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅಂದಿನಿoದ 08 ದಿನಗಳ ಕಾಲ ಪ್ರತಿ ದಿನ 4 ರಿಂದ 10 ಗಂಟೆಯವರೆಗೆ ಅರಮನೆಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 508 ಕಲಾತಂಡಗಳ ಸುಮಾರು 6,500 ಕಲಾವಿದರು ವಿವಿಧ ಕಲಾ ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಲಿದ್ದು, ಇನ್ನುಳಿದಂತೆ ಫಲಪುಷ್ಪ ಪ್ರದರ್ಶನದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಸಂವಿಧಾನ, ಜ್ಯೋತಿಬಾಪುಲೆ ಸೇರಿದಂತೆ ಮುಂತಾದ ಮಹನೀಯರ ಕಲಾಕೃತಿಗಳನ್ನು ರಚಿಸಲಾಗುತ್ತದೆ ಎಂದು ತಿಳಿಸಿದರು.
ದಸರಾ ಮಹೋತ್ಸವದ ಆಕರ್ಷಣೆಯಾಗಿರುವಂತಹ ಯುವದಸರಾದಲ್ಲಿ ವಿಶ್ವವಿಖ್ಯಾತ ಕಲಾವಿದರು ಭಾಗವಹಿಸುವುದರಿಂದ ಹೆಚ್ಚು ಜನರು ಸೇರಿರುವ ನಿರೀಕ್ಷೆ ಇದೆ. ಹಾಗಾಗಿ ಯುವದಸರಾವನ್ನು ಉತ್ತನಹಳ್ಳಿ ಮೈದಾನಕ್ಕೆ ಸ್ಥಳಾಂತರಿಸಲಾಗಿದ್ದು, ಸಾರ್ವಜನಿಕರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಕ್ಟೋಬರ್ 5 ರಂದು ಪ್ರಭುತ್ವ ಮತ್ತು ಸಂವಿಧಾನದ ಆಶಯ' ಎಂಬ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಏರ್ಪಡಿಸಲಾಗಿದೆ. ಹಿರಿಯ ಪತ್ರಕರ್ತರಾದ ಮನೋಜ್ ಮಿತ್ತ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಪೆÇ್ರ.ಎಸ್.ಆರ್.ನಿರಂಜನ್ ಅವರು ಅತಿಥಿಗಳಾಗಿ ಭಾಗವಹಿಸುವರು. ಅಂದು ಮಧ್ಯಾಹ್ನ 12 ಗಂಟೆಗೆ ಸಮಗ್ರ ಗೋಷ್ಠಿ 1ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳು’ ಎಂಬ ವಿಷಯದ ಮೇಲೆ ನಡೆಯಲಿದ್ದು, ಗೋಷ್ಠಿ ಒಂದು ಸಂವಿಧಾನದ ಸಾಂಸ್ಕೃತಿಕ ಮೌಲ್ಯಗಳು', ಗೋಷ್ಠಿ ಎರಡುಹಿಂದುಳಿದ ವರ್ಗಗಳು ಮತ್ತು ಸಂವಿಧಾನ’, ಅಕ್ಟೋಬರ್ 6 ರಂದು ಬೆಳಗ್ಗೆ 10.30 ಗಂಟೆಗೆ ಸಮಗ್ರ ಗೋಷ್ಠಿ 2- ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ' ಎಂಬ ವಿಷಯದ ಮೇಲೆ ನಡೆಯಲಿದ್ದು, ಮೂರನೇ ಗೋಷ್ಠಿಯುಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಮತ್ತು ಸಂವಿಧಾನ’ ಹಾಗೂ ನಾಲ್ಕನೇ ಗೋಷ್ಠಿಯು `ಸಂವಿಧಾನದ ಆಶಯ ಮತ್ತು ಆರ್ಥಿಕತೆ’ ಎಂಬ ವಿಷಯದ ಮೇಲೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ದಸರಾ ಮಹೋತ್ಸವದ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮಿಕಾಂತ ರೆಡ್ಡಿ ಅವರು ಮಾತನಾಡಿ, ಸೆಪ್ಟೆಂಬರ್ 26 ರಿಂದ ಅರಮನೆ ಆವರಣದ ದಸರಾ ಮಹೋತ್ಸವ ವೀಕ್ಷಣೆ ಹಾಗೂ ಪಂಜಿನ ಕವಾಯತಿನ ಗೋಲ್ಡ್ ಪಾಸ್‍ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಒಬ್ಬರು 4 ಕಾಡ್ರ್ಗಳನ್ನು ಮಾತ್ರ ಖರೀದಿಸಲು ಅವಕಾಶವಿರುತ್ತದೆ. ಈಗಾಗಲೇ ಸಾರ್ವಜನಿಕರು ಗೋಲ್ಡ್ ಪಾಸ್‍ಗಳನ್ನು ಖರೀದಿ ಮಾಡುತ್ತಿದ್ದು, ಇನ್ನು 1000 ಗೋಲ್ಡ್ ಪಾಸ್‍ಗಳು ಲಭ್ಯವಿದೆ. ಹಾಗಾಗಿ ಆಸಕ್ತ ಸಾರ್ವಜನಿಕರು ಶೀಘ್ರವಾಗಿ ತಮ್ಮ ಪಾಸ್ ಗಳನ್ನು ಖರೀದಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಇನ್ನು ಯುವದಸರಾಗೆ ಸಂಬoಧಿಸಿದoತೆ 8000 ಮತ್ತು 5000 ರೂ.ಗಳ ಯುವ ದಸರಾ ಪಾಸ್‍ಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಇಂದಿನಿoದ 1500 ಮತ್ತು 2500 ರೂ. ಗಳ ಟಿಕೆಟ್ ಲಭ್ಯವಿದೆ. ಕೇವಲ 10 ಸಾವಿರ ಪಾಸ್‍ಗಳು ಮಾತ್ರ ಮಾರಾಟಕ್ಕಿದ್ದು, 80 ರಿಂದ 90 ಸಾವಿರ ಜನರು ಮುಕ್ತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.