ಸರ್ಕಾರದ ಚಿತಾವಣಿಯಿಂದಲೇ ಕುಮಾರಸ್ವಾಮಿ ವಿರುದ್ಧ ಪತ್ರ
ಸಂಜೆವಾಣಿ ನ್ಯೂಸ್
ಮೈಸೂರು: ಅ.01:- ಸರ್ಕಾರದ ಚಿತಾವಣಿಯಿಂದಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೇಲೆ ಅಧಿಕಾರಿ ಇಂತಹ ಬಳಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೆಲವು ನೌಕರರನ್ನು ಬಳಸಿಕೊಂಡು ಆಯಾ ಕಟ್ಟಿನ ಹುದ್ದೆ ಕೊಡುವ ಆಸೆ, ಆಮಿಷಗಳನ್ನು ತೋರಿಸಿ ವಿರೋಧ ಪಕ್ಷದ ನಾಯಕರನ್ನು ಕಟ್ಟಿ ಹಾಕುವ ಕೆಲಸ ಮಾಡುತ್ತಿರುವುದು ರಾಜ್ಯದ ಜನತೆ ಮನದಟ್ಟು ಆಗಿರುವುದನ್ನು ನೋಡುತ್ತಿದ್ದೇವೆ ಎಂದರು.
ಅಧಿಕಾರಿಯೂ ಒಬ್ಬ ಕೇಂದ್ರ ಸಚಿವರ ಬಗ್ಗೆ ಅನಾಮಧೇಯ ಪತ್ರ ಬರೆದಿರುವ ಕುರಿತು ಕಾನೂನು ಹೋರಾಟ ಒಂದು ಕಡೆಯಾಗಿದೆ. ರಾಜ್ಯದ ಚೀಫ್ ಸೆಕ್ರಟರಿ ಕೂಡ ಸರ್ಕಾರಿ ನೌಕರರೇ, ಡಿಜಿ, ಐಜಿ ಕೂಡ ಸರ್ಕಾರಿ ನೌಕರರಾಗಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರದ ಮೇಲೆ ಮಂತ್ರಿ ಮೇಲೆ ಒಂದು ಪತ್ರ ಹರಿಬಿಡುವ ಕೆಲಸಮಾಡುತ್ತಾರೆ ಎಂದಾದರೆ ಈ ರಾಜ್ಯದಲ್ಲಿ ಆಡಳಿತ ಬದುಕಿದಿಯಾ ಸತ್ತಿದಿಯಾ? ನೀವು ಸರ್ಕಾರದ ಕೆಲಸಮಾಡುತ್ತಿದ್ದಿರಿ? ಅಥವಾ ಕೆಲವರ ಪರವಾಗಿ ಕೆಲಸ ಮಾಡುತ್ತಿದ್ದರಿ. ಈವರೆಗೆ ಡಿಜಿ ಅಂಡ್ ಐಜಿ ಅವರೇ ಯಾಕೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ನಿಮ್ಮ ಮೇಲೆ ನಿಮ್ಮದೆ ಇನ್ಸ್ ಪೆಕ್ಟರ್ ದೂರು ನೀಡಿ ನ್ಯಾಯಾಲಯದವರೆಗೂ ಹೋಗಿದ್ದಾರೆ. ನೀವು ಪ್ರಾಮಾಣಿಕರಾಗಿದ್ದರೆ ಹಿಮಾಚಲ ಪ್ರದೇಶದಿಂದ ಹುದ್ದೆಗೇರಿ ಇಲ್ಲಿಗೆ ಬಂದಿದ್ದಿರಿ, ನಿಯಮದ ಪ್ರಕಾರ ರಾಜ್ಯದಲ್ಲಿ 5 ವರ್ಷ ಮಾತ್ರ ಮಾಡಲಿಕ್ಕೆ ಅವಕಾಶ ಇರುವುದು. ಐದು ವರ್ಷ ನಿಮ್ಮಕೇಡರ್ ಮುಗಿದ್ದಿದ್ದು, ಯಾರ ಕೈಕಾಲು ಕಟ್ಟಿ ಉಳಿದುಕೊಂಡಿದ್ದಿರಿ ತೋರಿಸಿ? ಚಮಚಗಿರಿ ಮಾಡುವ ಕೆಲವು ಅಧಿಕಾರಿಗಳಿದ್ದಿರಿ. ರಾಜ್ಯವನ್ನು ಹಂದಿ ಥರ ತಿನ್ನುವುದಕ್ಕೆ ಇದ್ದಿರಾ? ನಿಮ್ಮ ಕುಟುಂಬದ ಆಸ್ತಿ ಬಹಿರಂಗ ಪಡಿಸಬೇಕು? ಎಜಿ ಅಂಡ್ ಐಜಿ ಅವರು ಸ್ಪಷ್ಟನೆ ಪಡೆದು, ಸಂಬಂಧಿಸಿದ ಅಧಿಕಾರಿ ಅಮಾನತು ಮಾಡಬೇಕು. ಸಿಎಸ್ ಅವರು ವರದಿ ಕೇಳಬೇಕು. ಕುಮ್ಮಕ್ಕಿನಿಂದ ಮಾಡಿದ್ದಿರಿ ಅನ್ನೋ ಅನುಮಾನ ವ್ಯಕ್ತವಾಗಿದೆ. ಇಂತಹ ರಾಜಕಾರಣ ಎಂದು ಕಂಡಿರಲಿಲ್ಲವೆಂದರು.
ಹೇಳೋರು ಕೇಳೋರು ಇಲ್ಲ. ಜನರ ತೆರಿಗೆ ಹಣ ಕರ್ನಾಟಕದ ಜನತೆಯ ಸವಲತ್ತನ್ನು ಹಂದಿ ರೀತಿ ತಿನ್ನುತ್ತಿರುವವರು ನೀವು? ಆಂಧ್ರದಿಂದ ತಂದಿದ್ದಿರ ನೀವು? ಆಸ್ತಮಾ ನನಗೆ ಹೊರಗಡೆ ಆಗಲ್ಲ ಎಂದೇಳಿ ಉಳಿದಿದ್ದಿರಿ. 8 ಕೋಟಿ ಜನರ ಹಣದಲ್ಲಿ ಜನ ಬೀದಿಗಿಳಿದು ಹೋರಾಟ ಮಾಡುವುದಕ್ಕೂ ಮುನ್ನ ಡಿಜಿ ಐಜಿ ನಿಮ್ಮ ಇಲಾಖೆ ಸರಿ ಮಾಡಿ. ಅಸಹ್ಯ ಹುಟ್ಟುವ ಸ್ಥಿತಿ ಎದುರಾಗಿದೆ. ಸ್ನೇಹಿತರು ಅರ್ಥ ಮಾಡಿಕೊಳ್ಳಿ. ಇದು ತೊಘಲಕ್ ದರ್ಬಾರ್ ಅಲ್ಲ.ಇತಿಹಾಸ ಮರುಕಳಿಸುತ್ತದೆ ಎಂದರು.
ಇನ್ನೂ ಅಧಿಕಾರಿಗಳ ಮೂಲಕ ಹೀಗೆ ಮಾತನಾಡಿಸುವ ಬದಲು ಅವರನ್ನೇ ರಾಜಕೀಯ ಕ್ಕೆ ಕರೆಸಿಕೊಳ್ಳಿ, ಕಾನೂನು ಸಲಹ ತಜ್ಞರಾಗಿ ಬಳಸಿಕೊಳ್ಳಲು ಸಲಹೆ ನೀಡಿ. ನಮಗೂ ಡಿಫರ್ ಮೇಷನ್ ಹಕ್ಕುಚ್ಯುತಿ ಇರುತ್ತದೆ. ಕ್ರಮ ಆಗುವದು ಬೇರೆ, ತಮ್ಮ ಜತೆ ಸಚಿವ ಸಂಪುಟದಲ್ಲಿರುವವ ಕೈಯಲ್ಲಿ ಆಗದೇ ಈ ರೀತಿ ಅಧಿಕಾರಿ ಹಂದಿಯಂತೆ ತಿಂದಿರುವ ಈ ಅಧಿಕಾರಿಯಿಂದ ತೇಜೋವಧೆ ಆಗಲಿದೆ ಎಂದರು.
ಸರ್ಕಾರದ ಸಲಹೆಗಾರರ ಪಾತ್ರ ಇಲ್ಲ ಎನ್ನುವುದಾದರೆ ಕಾಂಗ್ರೆಸ್ ಸರ್ಕಾರ ಸಂಬಂಧಿಸಿದ ಅಧಿಕಾರಿಯ ಸ್ಪಷ್ಟನೆ ಕೇಳಬೇಕಿತ್ತು. ಅವರ ಪರವಾಗಿ ಮಾತನಾಡುತ್ತಿರುವುದು ನೋಡೊದರೆ ಅವರ ಚಿತಾವಣೆಯಿಂದಲೇ ಪತ್ರ ಬಂದಿದೆ ಎನಿಸುತ್ತದೆ. ಇದರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ರಾಜ್ಯದ ಜನ ಇದೆಲ್ಲಾ ಗಮನಿಸುತ್ತಿದ್ದಾರೆಂದರು.