ಡಿಜಿಟಲ್ ಉಪಕರಣಗಳ ವಿತರಣೆ
ಸಂಜೆವಾಣಿ ವಾರ್ತೆಶಿವಮೊಗ್ಗ.ಆ.೧೪:  ಸುಂದರ ಭವಿಷ್ಯದ ಕನಸ್ಸು ಕಾಣುತ್ತಿರುವ ಗ್ರಾಮೀಣ ಯುವ ಜನತೆಗೆ ಡಿಜಿಟಲ್‌ ಸಾಕ್ಷರತೆಯಿಂದ ಸಹಕಾರಿ ಆಗಲಿದೆ ಎಂದು ತಾಲ್ಲೂಕು ಶಿಕ್ಷಣಾಧಿಕಾರಿ ಅವಿನಾಶ್‌ ಹೇಳಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಶಿಕ್ಷಣ ಫೌಂಡೇಶನ್ ಆರ್‌ಡಿಪಿಆರ್‌.ಇಲಾಖೆ ಹಾಗೂ ಡೆಲ್ ಸಂಸ್ಥೆಯ ಸಹಭಾಗಿತ್ವದ ಗ್ರಾಮ ಡಿ.ಜಿ ವಿಕಸನ ಕಾರ್ಯಕ್ರಮದಡಿ ಡಿಜಿಟಲ್ ಉಪಕರಣ ಗಳನ್ನು ವಿತರಣೆ ಮಾಡಿ ಮಾತನಾಡಿದರು.ಜಿಲ್ಲೆಯ 19 ಗ್ರಂಥಾಲಯಗಳಿಗೆ  ಡಿಜಿಟಲ್ ಉಪಕರಣಗಳನ್ನು ವಿತರಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ 62 ಗ್ರಂಥಾಲಯಗಳಿಗೆ  ಡಿಜಿಟಲ್ ಉಪಕರಣ ಹಂಚಲಾಗಿತ್ತು. ಈ ಕಾರ್ಯಕ್ರಮದ ಸಫಲತೆಯನ್ನು ಯುವ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಸಹಾಯಕ ನಿರ್ದೇಶಕ ರವಿರಾಮಚಂದ್ರ, ವ್ಯವಸ್ಥಾಪ ಶ್ರೀಧರ್ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಟಿ.ವಿ,  ಲ್ಯಾಪ್ ಟಾಪ್‌ ವಿತರಿಸಿ ಮಾತನಾಡಿದರು.ಶಿಕ್ಷಣ ಫೌಂಡೇಶನ್ ನ ಜಿಲ್ಲಾ ಸಂಯೋಜಕ ಎಂ. ತಿಮ್ಮೇಶ್, ಎಚ್.ಟಿ. ತಿಪ್ಪೇಸ್ವಾಮಿ, ಪಿಡಿಒ ಇ ಭಾರತಿ,  ಗ್ರಂಥಪಾಲಕಿ ಕೆಎಸ್. ಮಮತ ಇದ್ದರು.