ಓಪನ್ ಕರಾಟೆ ಚಾಂಪಿಯನ್ಶಿಪ್‌ನಲ್ಲಿ ರಾಕೇಶ್, ರಮ್ಯಾ ಪ್ರಥಮ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೪: ಈಚೆಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ಶಿಪ್-೨೦೨೪ನಲ್ಲಿ ದಾವಣಗೆರೆಯ ಇಂಡಿಯನ್ ಮಾರ್ಷಲ್ ಆರ್ಟ್ಸ್ ಮತ್ತು ಸೆಲ್ಫ್ ಡಿಫೆನ್ಸ್ ಆರ್ಗನೈಸೇಷನ್ ಶಾಲೆಯ ಕರಾಟೆ ಪಟು ರಾಕೇಶ್ ಮತ್ತು ಪಿ.ಎಂ ರಮ್ಯಾ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.ಪಿ. ದರ್ಶನ್, ಚಿನ್ಮಯ್, ರಾಘವಿ, ಯಶಸ್, ಮೈಲಾರಿ, ಭವ್ಯ ಜೈನ್, ಇಶಾನ್ ದ್ವಿತೀಯ ಸ್ಥಾನ ಪಡೆದರೆ, ಅಫಾನ್ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ತರಬೇತುದಾರರಾದ ಸನ್‌ಶೈಯ್ ನಜೀರ್ ತಿಳಿಸಿದ್ದಾರೆ.