ನಶಾ ಮುಕ್ತ ಭಾರತ” ಅಭಿಯಾನದ ಹಿನ್ನೆಲೆ ಸಸಿ ನೆಡುವ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೪; ೭೮ನೇ ಸ್ವಾತಂತ್ರö್ಯ  ದಿನಾಚರಣೆ ಅಂಗವಾಗಿ “ನಶಾ ಮುಕ್ತ ಭಾರತ” ಅಭಿಯಾನದಡಿಯಲ್ಲಿ ಮಾಗನೂರು ಬಸಪ್ಪ  ಪದವಿ ಪೂರ್ವ ಕಾಲೇಜಿನ  ಆವರಣದಲ್ಲಿ ಕಾಲೇಜಿನ ಪ್ರಾಚಾರ್ಯರಾದ  ಡಾ. ಪ್ರಸಾದ್ ಬಂಗೇರ ಎಸ್   “ನಶಾ ಮುಕ್ತ ಭಾರತ”  ಆಭಿಯಾನದ ಎರಡನೇ ದಿನ “ಸಸಿ ನೆಡುವ” ಕಾರ್ಯಕ್ರಮ ನಡೆಸಿಕೊಟ್ಟರು.ಕಾಲೇಜಿನ ಇಕೋ ಕ್ಲಬ್ ಮತ್ತು ಸೈನ್ಸ್ ಕ್ಲಬ್ ಸಹಯೋಗದಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ಸಸಿ ನೆಡುವ ಕಾಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಾಲೇಜಿನ ವಿದ್ಯಾರ್ಥಿ ಶಿಸ್ತು ಪಾಲನಾ ಸಮಿತಿಯಾದ “ಗರುಡ” ತಂಡದ ವಿದ್ಯಾರ್ಥಿ ಸದಸ್ಯರುಗಳು ಸಸಿ ನೆಡುವ ಮೂಲಕ ಸಾಮಾಜಿಕರಲ್ಲಿ “ಹಸಿರೇ ಉಸಿರು” ಎಂಬ ಅರಿವು ಮೂಡಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂಧಿಯವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.