ಡಿ.ದೇವರಾಜ್ ಅರಸ್ ಜಯಂತಿ ಪೂರ್ವಭಾವಿಸಭೆ
ಸಂಜೆವಾಣಿ ವಾರ್ತೆ
ಜಗಳೂರು.ಆ.೧೪:- ಆ.20 ರಂದು 109 ನೇ ದೇವರಾಜ್ ಅರಸ್ ಅವರ ಜನ್ಮದಿನೋತ್ಸವವನ್ನು ಕಡ್ಡಾಯವಾಗಿ ಆಚರಿಸಲು ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಖಡಕ್ ಸೂಚನೆ ನೀಡಿದರು.ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಅಧಿಕಾರಿ ಗಳು,ಸಂಘಸಂಸ್ಥೆ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.ಇಲಾಖೆ ಕಛೇರಿಗಳಲ್ಲಿ ಜಯಂತ್ಯೋತ್ಸವದ ಅಂಗವಾಗಿ ದೇವರಾಜ್ ಅರಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಬೇಕು.ಕಾರ್ಯಕ್ರಮದಲ್ಲಿ ಅನುಷ್ಠಾನ ಅಧಿಕಾರಿ ಗಳು ಕಡ್ಡಾಯವಾಗಿ ಭಾಗವಹಿಸಬೇಕು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅರ್ಥಪೂರ್ಣ ವೇದಿಕೆ ಕಾರ್ಯಕ್ರಮ ಆಯೋಜಿಸಲು ಶಾಸಕರ ಜೊತೆ ಚರ್ಚಿಸ ಲಾಗುವುದು.ವಿವಿಧ ಸಂಘ ಸಂಸ್ಥೆ,ಪದಾಧಿಕಾರಿಗಳು ಸಹಕರಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ.ಪಂ‌.ಮುಖ್ಯಾಧಿಕಾರಿ ಲೋಕ್ಯಾ ನಾಯ್ಕ,ತಾಲೂಕು ಹಿಂದುಳಿದ ವರ್ಗಗಳ‌ ಮತ್ತು ಕಲ್ಯಾಣ ಅಧಿಕಾರಿ ಶಿವಬಸಪ್ಪ.ವಿ.ಬಳ್ಳಾರಿ,ವಕೀಲರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಟಿ.ಬಸವ ರಾಜ್,ಮುಖಂಡರಾದ ಎನ್.ಎಸ್.ರಾಜು,ಸಿ. ತಿಪ್ಪೇಸ್ವಾಮಿ,ಓಬಣ್ಣ,ಕುಮಾರ್,ಸತೀಶ್,ಮಹಾಲಿಂಗಪ್ಪ,ಮಾದಿಹಳ್ಳಿ ಮಂಜುನಾಥ್,ಅರೆಅಲೆ ಮಾರಿ ಸಂಘದ ನಾಮನಿರ್ದೇಶಿತ ಸದಸ್ಯ ಇಂದಿರಾ, ಸಿಡಿಪಿಓ ಬೀರೇಂದ್ರ ಕುಮಾರ್,ನಿಲಯ ಮೇಲ್ವಿಚಾರಕ ದೇವೇಂದ್ರಪ್ಪ,ಸೇರಿದಂತೆ ಇದ್ದರು.