ಆಡಳಿತ ನಡೆಸಿದವರು ಕೆಡಿಸಿದ ಕೆಲಸಗಳ ರಿಪೇರಿ ಮಾಡುವುದೇ ಸವಾಲಾಗಿದೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೧೪; ಈ ಹಿಂದೆ ಆಡಳಿತ ನಡೆಸಿದವರು ಕೆಡಿಸಿದ ಕೆಲಸಗಳನ್ನು ರಿಪೇರಿ ಮಾಡುವುದೇ ನಮಗೆ ದೊಡ್ಡ ಕೆಲಸವಾಗಿದೆ,” ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.ಇಲ್ಲಿನ ವಿನೋಬನಗರ 2ನೇ ಮೇನ್‌ನ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಎದುರು ಸಿಸಿ ರಸ್ತೆ ಭಿವೃದ್ಧಿ ಕಾಮಗಾರಿಗೆ ಚಲನೆ ನೀಡಿ ಮಾತನಾಡಿ, `ನಮಗಿಂತ ಮೊದಲು ಜಿಲ್ಲೆಯಲ್ಲಿ ಆಡಳಿತ ಮಾಡಿದವರು, ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ ಎಂದರು.1994-94ರ ಅವಯಲ್ಲಿ ನಗರ ಈಗಿನಂತೆ ಇರಲಿಲ್ಲ. ರಸ್ತೆಯಲ್ಲಿ ಮೊಳಕಾಲು ಉದ್ದದ ಗುಂಡಿಗಳು ಬೀಳುತ್ತಿದ್ದವು. ಆಟೋ ಚಾಲಕರು ವಾರಕ್ಕೊಮ್ಮೆ ಪ್ರತಿಭಟನೆ ನಡೆಸುತ್ತಿದ್ದರು. ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಕಷ್ಟವಾಗಿತ್ತು. ಆದರೆ ಇಂದು ನಗರ ಸಾಕಷ್ಟು ವ್ಯವಸ್ಥಿತವಾಗಿ ಬೆಳೆದಿದೆ. ಎರಡು ದಶಕಗಹಿಂದಿನ ಸ್ಥಿತಿಗೆ ಹೋಲಿಸಿದರೆ, ಇಂದು ಎಷ್ಟೇ ಮಳೆ ಬಂದರೂ ನಗರದ ಯಾವ ಭಾಗದಿಂದಲೂ ನೀರು ನುಗ್ಗಿರುವ ಬಗ್ಗೆ, ರಸ್ತೆ ಹಾಳಾದ ಬಗ್ಗೆ ಒಂದೇ ಒಂದೂ ದೂರು ಬರುವುದಿಲ್ಲ ಎಂದು ಸಚಿವರು ಹೇಳಿದರು.2ನೇ ಮೇನ್‌ನಲ್ಲಿ 1.30 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಹಿಂದೆ 2001-02ರಲ್ಲಿ ವಿನೋಬನಗರದ ಎಲ್ಲ ರಸ್ತೆಗಳನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿಪಡಿಸುವಂತೆ ಗುತ್ತಿಗೆದಾರರಿಗೆ ಹೇಳಿದ್ದೆ. ಆದರೆ, ಐ ಆಸ್ಪತ್ರೆವರೆಗೆ ಮಾತ್ರ ಅನುಮತಿ ಇದೆ. ಅಷ್ಟೇ ಮಾಡುತ್ತೇವೆ ಎಂದು ಹೇಳಿದ್ದರು. ಂದಿನಿAದ ಸತತ 23 ವರ್ಷಗಳ ಕಾಲ ಸಿಸಿ ರಸ್ತೆ ನಿರ್ಮಿಸುವಂತೆ ಹೇಳಿದರೂ ಯಾರೊಬ್ಬರೂ ತಲೆ ಕೆಡಿಸಿಕೊಳ್ಳಿಲ್ಲ. ಈಗ ಆ ಯೋಗ ಕೂಡಿಬಂದಿದೆ ಎಂದ ಸಚಿವರು, ಮೊದಲು ಪಿಬಿ ರಸ್ತೆವರೆಗೆ ಸುಸಜ್ಜಿತ ಕಾಂಕ್ರೀಟ್ ರಸ್ತೆಯಾಗಲಿ, ಬಳಿಕ ಚರಂಡಿ ವ್ಯವಸ್ಥೆ ಮಾಡಿಸುವಂತೆ ತಿಳಿಸಿದರು.