ಶರಣಬಸವೇಶ್ವರ ಸಂಸ್ಥಾನದ ದೇಶ ಪ್ರೇಮ ಆದಮ್ಯ
ಕಲಬುರಗಿ:ಆ.13:ಶರಣಬಸವೇಶ್ವರ ಸಂಸ್ಥಾನದ ದೇಶ ಪ್ರೇಮ ಮತ್ತು ರಾಷ್ಟ್ರೀಯ ಭಾವೈಕ್ಯತೆ ಆದಮ್ಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಪೆÇ್ರ. ಬಿ.ರಾಮರೆಡ್ಡಿ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ಶರಣಬಸವೇಶ್ವರ ಸಂಸ್ಥಾನದ ದೇಶ ಪ್ರೇಮ ಮತ್ತು ರಾಷ್ಟ್ರೀಯ ಭಾವೈಕ್ಯತೆ ವಿಷಯ ಕುರಿತು ಮಾತನಾಡಿದರು.
ಮಹಾದಾಸೋಹಿ ಶರಣಬಸವರು ಎಲ್ಲ ವರ್ಗದವರನ್ನು ಭಾವೈಕ್ಯತೆಯಿಂದ ಕಾಣುತ್ತಿದ್ದರು. ಯಾರನ್ನು ಭೇದ ಬಾವ ಮಾಡುತ್ತಿರಲಿಲ್ಲ. ಅವರಲ್ಲಿ ದೇಶ ಪ್ರೇಮ ಅಗಾಧವಾಗಿತ್ತು. ಅವರ ನಂತರದ ಎಲ್ಲ ಪೀಠಾಧಿಪತಿಗಳಲ್ಲಿ ಸಹ ದೇಶದ ಭಗ್ಗೆ ಅಭುಮಾನ, ಪ್ರೇಮವಿತ್ತು. ಪೂಜ್ಯ ದೊಡ್ಡ ಅಪ್ಪ ಅವರ ದೇಶಪ್ರೇಮವು ಆಳರಸರಿಗೆ ರಾಜ್ಯದ್ರೋಹಿಯಾಗಿ ಕಂಡಿತು. ಆದುದರಿಂದ ಮತಾಂಧ ದೇಶದ್ರೋಹಿಗಳು ಶರಣಬಸವೇಶ್ವರ ಸಂಸ್ಥಾನದ ಮೇಲೆ ಹಲ್ಲೆ ಮಾಡಿತು. ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅವರು ಪೂಜ್ಯ ದೊಡ್ಡಪ್ಪ ಅವರ ದರ್ಶನಾರ್ಶಿವಾದ ಪಡೆದುಕೊಂಡು ಸಾಂತ್ವನ ಹೇಳಿದರು. ಗಾಂಧೀಜಿಯವರು ಸಂಗ್ರಹಿಸುತ್ತಿದ್ದ ತಿಲಕರ ನಿಧಿಗೆ ಅಪ್ಪ ಅವರು ಧನನೀಡಿ ದಾಸೋಹ ಮಾಡಿದರು. ಮಹಾತ್ಮಗಾಂಧಿ ಅವರು ಭೇಟಿಯಿತ್ತ ಸುದ್ದಿ ಕೇಳಿ ನಿಜಾಮ ಅರಸನು ಕಲಬುರಗಿಗೆ ಮಹಾದಾಸೋಹಿ ಶರಣಬಸವ ಸಮಾಧುಗೆ ತನ್ನ ಭಕ್ತಿ ಶ್ರದ್ದೆಗಳನ್ನರ್ಪಿಸಿದರು. ಹಾನಿಯಾದದು ಅಪ್ಪ ಅವರಿಗೆ ಹಣ ನೀಡುವ ವಾಗ್ದಾನ ಮಾಡಿದರು. ಅದಕ್ಕೆ ಪ್ರತಿಯಾಗಿ ಅಪ್ಪ ಅವರು ಸೌಹಾರ್ದತೆ-ಸದ್ಬಾವನೆಯಿಂದ ಜನತೆಯಲ್ಲಿ ಶಾಂತಿ ನೆಲೆಗೊಳ್ಳುವಂತೆ ಹೇಳಿದರು. ಲೋಕಸಭೆಯ ಮಾಜಿ ಸದಸ್ಯರಾದ ಕೋಳಕೂರ ಮಲ್ಲಪ್ಪ ಅವರು ಶರಣಬಸವೇಶ್ವರ ಸಂಸ್ಥಾನ ಕೇವಲ ಧಾರ್ಮಿಕ ಸಂಸ್ಥೆಯಲ್ಲ ಬ್ರೀಟಿಷರ ವಿರುದ್ಧ ನಡೆದ ಚಳುವಳಿಯಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಸಾತಂತ್ರ್ಯಯೋಧರಿಗೆ ಮಾರ್ಗದರ್ಶನ ಮಾಡಿದ್ದರು ಎಂದು ಹೇಳಿದರು. ಅದರಂತೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರಲ್ಲಿ ದೇಶ ಪ್ರೇಮ ಅಗಾಧವಾಗಿದೆ. ದೇಶದ ಒಳಿತಿಗೆ ಸದಾ ಕೈಜೋಡಿಸುತ್ತಾರೆ. ಅವರು ಸಹ ಹಿಂದು ಮುಸ್ಲಿಂ ಎಂಬ ಬೇಧ ಮಾಡದೆ ಎಲ್ಲರನ್ನು ಗೌರವದಿಂದ ಕಾಣುತ್ತಾರೆ. ಅನೇಕ ಮುಸ್ಲಿಂ ಬಾಂಧವರನ್ನು ತಮ್ಮ ಸಂಸ್ಥಾನದಲ್ಲಿ ಕರೆಯಿಸಿ ಸಹೋದತ್ವ ಭಾವ ಮೇರೆದಿದ್ದಾರೆ. ಅದರಂತೆ ಪೂಜ್ಯ ಡಾ.ಅವ್ವಾಜಿ ಸಹ ಈಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿದರು.
ನಂತರ ಶರಣಬಸವೇಶ್ವರ ಸಂಸ್ಥಾನದ ಕೃಷಿ ,ಮತ್ತು ಗೋಶಾಲೆ ಮಹತ್ವ ವಿಷಯವಾಗಿ ಡಾ.ಚಂಪಕರಾಣಿ ಕುಂಬಾರ ಮಾತನಾಡಿಮ, ಶರಣಬಸವೇಶ್ವರ ಸಂಸ್ಥಾನ ಗೋವುಗಳನ್ನು ಕಾಮಧೇನು ಕಲ್ಪವೃಕ್ಷದಂತೆ ಗೌರವಿಸುತ್ತದೆ. ಇಲ್ಲಿ ನೂರಾರು ಗೋವುಗಳಿವೆ, ಶರಣಬಸವರು ಗೋವುಗಳನ್ನು ಪ್ರೀತಿಯಿಂದ ಕಂಡಂತೆ ಪೂಜ್ಯ ಡಾ.ಅಪ್ಪಾಜಿ ಮತ್ತು ಡಾ.ಅವ್ವಾಜಿಯವರು ಗೋಶಾಲೆ ತೆರೆದು ಅವುಗಳ ಆರೈಕೆ ಮಾಡುವುದದರಲ್ಲಿ ತೊಡಗಿದ್ದಾರೆ. ಅದರಂತೆ ಕೃಷಿಗೆ ಬಹಳ ಆದ್ಯತೆ ನೀಡಿದ ಈ ಸಂಸ್ಥಾನ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಕೃಷಿಯನ್ನೇ ಕಾಯಕವಾಗಿರಿಸಿಕೊಂಡಿದ್ದರು, ಅವರು ತಾವು ಖುದ್ದಾಗಿ ಹೊಲಕ್ಕೆ ಕೃಷಿ ಮಾಡುತ್ತಿದ್ದರು,. ಅವÀರು ಹಾಕಿದ ದಾರಿಯಂತೆ ಪೂಜ್ಯ ಡಾ.ಅಪ್ಪ ಮತ್ತು ಡಾ.ಅವ್ವಾಜಿ ಕೃಷಿಯ ಬಗ್ಗೆ ಬಹಳಷ್ಟು ಒಲವು ತೋರಿಸಿದ್ದಾರೆ ಎಂದು ಹೇಳಿದರು.