ಹೆತ್ತ ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಸಸಿ ನೆಟ್ಟು ಬೆಳೆಸಲು ರಾಜಾ ಭೀಮಳ್ಳಿ ಕರೆ
ಕಲಬುರಗಿ:ಆ.13: ತಾಯಿ ತನ್ನ ಹೆತ್ತ ಮಕ್ಕಳನ್ನು ಹೇಗೆ ಬೆಳೆಸಿ ಪೆÇೀಷಿಸುತ್ತಾಳೋ ಹಾಗೆ ನಾವು ಸಸಿ ನೆಟ್ಟು ಜೋತೆಗೆ ಪೆÇೀಷಿಸಿ ಸಂರಕ್ಷಿಸಬೇಕಾಗಿದೆ ಎಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜಾ ಬಿ. ಭೀಮಳ್ಳಿ ಅವರು ಹೇಳಿದರು.
ನಗರದ ಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜು ನೇತೃತ್ವದಲ್ಲಿ ಐಟಿಐ ಕಾಲೇಜು ಆವರಣದಲ್ಲಿ ಮಂಗಳವಾರ ಜರುಗಿದ ತಾಯಿಯ ಹೆಸರಿನಲ್ಲಿ ಒಂದು ಮರ ಅಭಿಯಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಸಸಿ ನೆಡುವ ಮೂಲಕ ಮಾತನಾಡಿದ ಅವರು, ದೇಶ ಮತ್ತು ಪ್ರಪಂಚದಲ್ಲಿ ಪರಿಸರ ಅಸಮತೋಲನದ ಗಂಭೀರ ಸಮಸ್ಯೆ ಇದೆ. ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಈ ಅಭಿಯಾನದ ಪ್ರಾರಂಭಿಸುವ ಮೂಲಕ ಅವರಿಗೆ ಪರಿಸರದ ಬಗ್ಗೆ ಇರುವ ಭಾವನಾತ್ಮಕ ಬೆಸುಗೆಗೆ ಇದು ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಕಿರಣ್ ದೇಶಮುಖ್ ಅವರು ಮಾತನಾಡಿ, ಒಂದು ಮರ ಹತ್ತು ಗಂಡು ಮಕ್ಕಳಿಗೆ ಸಮಾನ ಎಂದು ಪೂರ್ವಜರು ಹೇಳಿದ್ದಾರೆ. ಅದರ ಪ್ರಾಮುಖ್ಯತೆ ಅರಿತು ನಿರಂತರ ಮರಗಳನ್ನು ನೆಡುವ ಮೂಲಕ ಭೂಮಿಯ ಮೇಲಿನ ಆಮ್ಲಜನಕ ಮತ್ತು ನೀರನ್ನು ಉಳಿಸುವ ಪಾಲುದಾರರಾಗಬೇಕಿದೆ ಎಂದರು.
ಇನ್ನೋರ್ವ ಆಡಳಿತ ಮಂಡಳಿ ಸದಸ್ಯ ಡಾ. ಶರಣಬಸಪ್ಪ ಹರವಾಳ್ ಅವರು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದ್ದು, ಅದನ್ನು ಸಮತೋಲನದಲ್ಲಿಡಲು ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೆಡುವುದು ಬಹಳ ಮುಖ್ಯವಾಗಿ ದೆ ನೀರಿನ ಸಂಪನ್ಮೂಲ ಉಳಿಸುವ ಸಲುವಾಗಿ ಗುಜರಾತ್ ಕೆಲವು ಹಳ್ಳಿಗಳಲ್ಲಿ ಗಿಡ ನೆಟ್ಟು ಜಲಕ್ರಾಂತಿ ಮಾಡಿರುವುದನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಶ್ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ನಾಗಣ್ಣ ಘಂಟಿ, ನಿಶಾಂತ್ ಎಲಿ, ಪ್ರಿನ್ಸಿಪಾಲ್ ಎಸ್.ಆರ್. ಪಾಟೀಲ್, ಡಾ. ಎಸ್.ಆರ್. ಹೊಟ್ಟೆ ಹಾಗೂ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.