ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಕಲಬುರಗಿ:ಆ.13:ಕಲಬುರಗಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಇದೇ ಆಗಸ್ಟ್ 20 ಹಾಗೂ 21 ರಂದು ಕೆಳಕಂಡ ತಾಲೂಕಿನ ತಹಶೀಲ್ದಾರರ ಕಚೇರಿಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಕಲಬುರಗಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆ್ಯಂಟನಿ ಜಾನ್ ಜೆ.ಕೆ. ಅವರು ತಿಳಿಸಿದ್ದಾರೆ.
ಕಲಬುರಗಿ ಕರ್ನಾಟಕ ಲೋಕಾಯುಕ್ತ ಡಿ.ಎಸ್.ಪಿ. ಯವರಾದ ಮಂಜುನಾಥ.ಕೆ ಗಂಗಲ್ (ಮೊಬೈಲ್ ಸಂಖ್ಯೆ 9364062570) ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಧ್ರವತಾರ ಸಿ. (ಮೊಬೈಲ್ ಸಂಖ್ಯೆ 9364062669) ಅವರು ಇದೇ ಆಗಸ್ಟ್ 20 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಮಲಾಪೂರ ತಹಶೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.
ಕಲಬುರಗಿ ಕರ್ನಾಟಕ ಲೋಕಾಯುಕ್ತ ಡಿ.ಎಸ್.ಪಿ. ಯವರಾದ ಗೀತಾ ಟಿ. ಬೇನಹಾಳ (ಮೊಬೈಲ್ ಸಂಖ್ಯೆ 9364062569) ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಅಕ್ಕಮಹಾದೇವಿ (ಮೊಬೈಲ್ ಸಂಖ್ಯೆ 9364062670) ಅವರು ಇದೇ ಆಗಸ್ಟ್ 21 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಚಿಂಚೋಳಿ ತಹಶೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.