ಡಿ.ಎ.ಆರ್. ಆವರಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ 693.67 ಲಕ್ಷದ24 ಪೊಲೀಸ್ ವಸತಿ ಗೃಹಗಳ ಕಟ್ಟಡಗಳ ಅಡಿಗಲ್ಲು: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ:ಆ.13: ಡಿ.ಎ.ಆರ್. ಆವರಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ 693.67 ಲಕ್ಷದ 24 ಪೊಲೀಸ್ ವಸತಿ ಗೃಹಗಳ ಕಟ್ಟಡಗಳ ಅಡಿಗಲ್ಲು ಸಮಾರಂಭ ಹಾಗೂ ನಾಗನಳ್ಳಿ ರಸ್ತೆಯ ಲಾಯರ್ಸ್ ಲೇಜೌಟ್ ನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕಟ್ಟಡ ನಿರ್ಮಾಣವನ್ನು ಒಟ್ಟು ಅನುದಾನ ರೂ. 105.67 ಲಕ್ಷಗಳ ಕಟ್ಟಡವನ್ನು ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಉದ್ಪಾಟಿಸಿದರು.
ಮಂಗಳವಾರದಂದ ಕರ್ನಾಟಕ ರಾಜ್ಯ ಪೊಲೀಸ್ ಕಲಬುರಗಿ ಜಿಲ್ಲಾ ಪೋಲಿಸ್ ಹಾಗೂ ಕರ್ನಾಟಕ ರಾಜ್ಯ ಪೋಲಿಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲ್ಯಾಣÀ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಮತ್ತು ರಾಜ್ಯ ಸರ್ಕಾರದಿಂದ 50 ರಷ್ಟು ಅನುದಾನವನ್ನು ಪೋಲಿಸ್ ಕ್ವಾರ್ಟರ್ಸ್‍ಗಳನ್ನು ನಿರ್ಮಿಸಲು ನೀಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಕರ್ನಾಟಕ ರಾಜ್ಯ ಸ್ವಾಮ್ಯದ ಕಂಪನಿಯು 24 ಪಿಸಿ ಕ್ವಾರ್ಟರ್ಸ್ ಅನ್ನು ನಿರ್ಮಿಸಿಸಲು ಪ್ರಸ್ತಾಪಿಸಿದೆ ಎಂದು ಹೇಳಿದರು.
ಪೋಲಿಸರು ದಕ್ಷತೆಯಿಂದ ಕೆಲಸ ನಿರ್ವಹಿಸಬೇಕು ಯಾವುದೇ ಗಲಭೆಗಳು ತಡೆಗಟ್ಟಲು ಹಬ್ಬಹರಿದಿನಗಳಲ್ಲಿ ತಾವುಗಳು ಬಿಡುವು ಇಲ್ಲದೆ ಕೆಲಸ ನಿರ್ವಹಿಸುತ್ತೀರಿ ಎಂದು ತಿಳಿಸಿದರು.
ಪೊಲೀಸರಿಗೆ ಸರ್ಕಾರದಿಂದ ಮುಂಬಡ್ತಿಯಾಗಿರಲ್ಲಿ ನಿಮಗೆ ಅನ್ಯಾಯವಾದಲ್ಲಿ ನಮಗೆ ನೇರವಾಗಿ ಭೇಟಿಯಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಕೆಲವೊಂದು ವರ್ಗಾವಣೆ ಸಂದರ್ಭದಲ್ಲಿ ಕಾಂಗ್ರೇಸ್ ಕಾರ್ಯಕರ್ತರನ್ನು ಕರೆದುಕೊಂಡು ಸಚಿವರ ಹತ್ತಿರ ಬರುತ್ತಿರುವುದನ್ನು ಅದನ್ನು ನಾನು ನೋಡಿದ್ದೇನೆ ನಿಮ್ಮ ಏನೆ ಸಮ್ಮಸ್ಯೆಗಳು ಇದ್ದರು ನೀವು ನನಗೆ ಹತ್ತಿರಬಂದು ಕೇಳಬಹುದು ಎಂದು ಹೇಳಿದರು.
ಕಲಬುರ್ಗಿ ಜಿಲ್ಲಾ ಪೋಲಿಸ್ ಹಾಗೂ ಕರ್ನಾಟಕ ರಾಜ್ಯ ಪೋಲಿಸ್ ವಸತಿ ಮೂಲಭೂತ ಸೌಲಭ್ಯ ಅನುದಾನ ಸರ್ಕಾರದಿಂದ ಸಿಗುವಂತೆ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆಮಾಡಿಕೊಳ್ಳಲು ತಿಳಿಸಿದರು,
ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ್ ಅವರು ಮಾತನಾಡಿ, ರಾಮಮಂದಿರದಲ್ಲಿ ಸರ್ಕಲ್ ಹತ್ತಿರ ಹೊಸ ಪೋಲಿಸ್ ಸ್ಟೇಶನ್ ನಿರ್ಮಣ ಮಾಡಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಜಗದೇವಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಝರ್ ಅಲ್ಲಂ ಖಾನ್, ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್, ಉಪ ಪೋಲಿಸ್ ಮಹಾನಿರೀಕ್ಷಕರಾದ ಹಾಗೂ ಪೊಲೀಸ್ ಆಯುಕ್ತ ಅಜಯ ಹಿಲೋರಿ, ಎಸ್.ಪಿ.ಅಡ್ಡೂರು ಶ್ರೀನಿವಾಸಲು ಸಿ.ಇ.ಓ. ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಅಯುಕ್ತ ಭುವನೇಶ ದೇವಿದಾಸ ಪಾಟೀಲ, ಕ.ರಾ.ಪೊ.ವ ಮತ್ತು. ಮೂ.ಸೌ.ಅ.ನಿ.ನಿ. ಕಲಬುರಗಿ ವಿಭಾಗದ-1 ಕಾರ್ಯಪಾಲಕ ಅಭಿಯಂತರಾದ ಶ್ರೀದೇವಿ ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಮುಸ್ತಕ ಹಶಾಮಿ, ಸೇರಿದಂತೆ ಪೋಲಿಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.