ಮಹಿಳೆಯರು ಸ್ವಾವಲಂಬಿಯಾಗಬೇಕು
ಕಲಬುರಗಿ :ಅ,13: ಮಹಿಳೆಯರು ತಮ್ಮ ಬದುಕನ್ನು ತಾವು ಕಟ್ಟಿಕೊಳ್ಳಬೇಕು ಯಾರ ಮೇಲೆ ಅವಲಂಬನೆಯಾಗಬಾರದು ಎಂದು ಶರಣಬಸವ ವಿಶ್ವವಿದ್ಯಾಲಯದ ಮಾಸ್ಟರ್ ಆಫ್ ಟೂರಿಸಮ್‍ನ ಮುಖ್ಯಸ್ಥರಾದ ಡಾ.ವಾಣಿಶ್ರೀ ಸಿ.ಟಿಯವರು ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಎನ್‍ಎನ್‍ಎಸ್ ಶಿಬಿರ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶದ ಅತ್ಯುನ್ನತ ಸ್ಥಾನ ರಾಷ್ಟ್ರಪತಿಯಿಂದ ಹಿಡಿದು ಎಲ್ಲ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಮಹಿಳೆಯೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅದು ವಿಜ್ಞಾನ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಕೃಷಿ, ಕ್ರೀಡಾ, ಧಾರ್ಮಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಶಿಖರಕ್ಕೇರುತ್ತಿದ್ದಾರೆ. ಎನ್‍ಎಸ್‍ಎಸ್ ಶಿಬಿರದ ಮೂಲ ಉದ್ದೇಶವು ಸಹ ಸ್ವಾವಲಂಬನೆಯೇ ಆಗಿದೆ. ಯಾರ ಮೇಲೆ ಅವಲಂಬನೆ ಇರಬಾರದಾಗಿದೆ. ಮಹಿಳೆಯರು ಕ್ರೀಯಾಶೀಲರಾಗಬೇಕು, ಅನಏಕ ಕೌಶಲಗಳನ್ನು ಹೊಂದಿದವರಾಗಿರಬೇಕು, ಸುಧಾ ಮೂರ್ತಿ, ಕಿರಣ ಮೂಜಮುದಾರ ಹೀಗೆ ಅನೇಕ ಮಹಿಳೆಯರು ತಮ್ಮ ಸ್ವಂತ ಬಲದಿಂದಲೇ ಕೈಗಾರಿಕೋದ್ಯಮಿಗಳಾಗಿ ಬೆಳೆದಿದ್ದಾರೆ. ಪೂಜ್ಯ ಡಾ.ಅಪ್ಪಾ ಮತ್ತು ಡಾ.ದಾಕ್ಷಾಯಣಿ ಅಪ್ಪ ಅವರು ಸಹ ಮಹಿಳೆಯರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕೆಂದು ಸಂಸ್ಥೆಯಲ್ಲಿ ಮಹಿಳೆಯರಿಗಾಗಿಯೇ ಶಾಲಾ ಕಾಲೇಜುಗಳನ್ನು ತೆರೆದಿದ್ದಾರೆ. ಪುರುಷರಂತೆ ಮಹಿಳೆಯರು ಸಮಾನವಾಗಿ ಬೆಳೆಯಬೇಕೆಂಬುದು ಅವರ ಆಶಯವಾಗಿದೆ. ಯಾವುದೇ ಕೆಲಸವನ್ನು ಕೇಳಾಗಿ ಕಾಣಬಾರದು ಅದನ್ನು ಗೌರವಿಸಿ ಅದರಲ್ಲಿ ಮುನ್ನೆಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಎನ್‍ಎಸ್‍ಎಸ್ ಶಿಬಿರವು ಮಕ್ಕಳಲ್ಲಿ ಶಿಸ್ತು, ಸಹನೆ, ಸ್ವಾವಲಂಬನೆ, ಜ್ಞಾನ, ಕೌಶಲಗಳನ್ನು ಕಲಿಸಿಕೊಡುತ್ತದೆ. ಶಿಬಿರದಲ್ಲಿ ಪಡೆದ ಜ್ಞಾನವನ್ನು ಮೈಗೂಡಿಸಿಕೊಳ್ಳಬೇಕು. ನಿಪುಣ ನಾಯಕ, ದಕ್ಷ ಆಡಳಿತಗಾರ, ಸಾಮಾಜಿಕ ಚಿಂತಕ, ಮಾನವ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ಎಂದು ಹೇಳಿದರು.
ಐಕ್ಯೂಎಸಿ ಸಂಯೋಜಕರಾದ ಡಾ.ಸಿದ್ಧಲಿಂಗರೆಡ್ಡಿ ಮಾತನಾಡಿದರು, ವೇದಿಕೆ ಮೇಲೆ ವಿದ್ಯಾರ್ಥಿ ಸಲಹೆಗಾರರಾದ ಡಾ.ಸೀಮಾ ಪಾಟೀಲ ಇದ್ದರು. ಎನ್‍ಎಸ್‍ಎಸ್ ಅಧಿಕಾರಿ ಶ್ರೀಮತಿ ದೀಶಾ ಮೆಹತಾ ಇದ್ದರು. ಶ್ರೀಮತಿ ಕಲ್ಪನಾ ಡಿ.ಎಂ. ವರದಿ ಓದಿದರು, ಕು,ಪ್ರೀತಿ ಹಿರೇಮಠ ನಿರೂಪಿಸಿದರು, ಕು.ಭಾಗ್ಯಶ್ರೀ ಸ್ವಾಗತಿಸಿದರು. ಕು.ದಾನೇಶ್ವರಿ ವಂದಿಸಿದರು.