ಪ್ರವಾಹ ನಿರ್ವಹಣೆ; ಸಚಿವ ಪ್ರಿಯಾಂಕ್ ನೇತೃತ್ವದಲ್ಲಿ ಅಣಕು ಪ್ರದರ್ಶನ
ಕಲಬುರಗಿ,ಆ 13: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭೀಮಾನದಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಾಗ ಜಿಲ್ಲಾಡಳಿತ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳಜಾಗೃತಿ ಮೂಡಿಸಲು ತಾಲೂಕಿನ ಸರಡಗಿ (ಬಿ) ಸಮೀಪದ ಭೀಮಾನದಿಯಲ್ಲಿ ಇಂದು ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.ಸ್ವತಃ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್‍ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಎಲೆಕ್ಟ್ರಿಕ್ ಬೋಟ್‍ನಲ್ಲಿ ಜೀವರಕ್ಷಕ ಉಡುಗೆ
ತೊಟ್ಟು ಅಣಕು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು.
ಪ್ರವಾಹದ ಸಂದರ್ಭದಲ್ಲಿ ನದಿ ಪಾತ್ರದ ಜನರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ರಕ್ಷಣಾ ಪಡೆಗಳು ಹೇಗೆ
ಜನರನ್ನು ಸುರಕ್ಷತಾ ಪ್ರದೇಶಗಳಿಗೆ ಕರೆದೊಯ್ಯಬೇಕು ಎನ್ನುವುದರ ಕುರಿತು ಜನರಿಗೆ ಅರಿವು ಮೂಡಿಸಲಾಯಿತು.
ಇನ್ನು ನದಿ ತೀರದ ಗ್ರಾಮಗಳಲ್ಲಿ ಪ್ರವಾಹದಲ್ಲಿ ಸಿಲುಕುವ ಜನರನ್ನುರಕ್ಷಿಸುವ ಬಗೆ ಹಾಗೂ ಪ್ರಾಣಹಾನಿಗೆ ತುತ್ತಾಗುವುದರಿಂದ ತಪ್ಪಿಸಲುಕೈಗೊಳ್ಳಬೇಕಾದ ತುರ್ತು ವೈದ್ಯಕೀಯ ಮುಂಜಾಗ್ರತಾ ಕ್ರಮಗಳ ಕುರಿತು ಇದೇ ವೇಳೆ ಅಣಕು ಪ್ರದರ್ಶನ ನಡೆಸಲಾಯಿತು.
ಪ್ರವಾಹದಲ್ಲಿ ಸಿಲುಕಿ ಅತಿಯಾದ ನೀರಿನ ಸೇವನೆಯಿಂದ ಉಸಿರಾಟ ಸಮಸ್ಯೆಏರ್ಪಟ್ಟಾಗ ಹೇಗೆ ಅಂತಹ ವ್ಯಕ್ತಿಗಳ ಜೀವ ಉಳಿಸಲಾಗುತ್ತದೆ ಎಂಬುದರಿಂದಹಿಡಿದು, ಇಂತಹ ಅತಿ ತುರ್ತು ಪರಿಸ್ಥಿತಿಗಳಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ
ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಇದೇವೇಳೆ ಪ್ರದರ್ಶನದ ಮೂಲಕ ನದಿ ತೀರದ ಜನರಲ್ಲಿ ಜಾಗೃತಿ ಮೂಡಿಸಲಾಯಿತು.ಸಚಿವರೊಂದಿಗೆ ಸಂಸದ ರಾಧಾಕೃಷ್ಣ ದೊಡ್ಡಮನಿ, ಕಲಬುರಗಿ ದಕ್ಷಿಣಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಜಿಲ್ಲಾಧಿಕಾರಿ ಫೌಜಿಯಾತರನ್ನುಮ್, ಐಜಿಪಿ ಅಜಯ್ ಹಿಲೊರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.