ಶೀಘ್ರ ರಾಜ್ಯ ಆಣೆಕಟ್ಟುಗಳ ಗಟ್ಟಿತನ ಸಮೀಕ್ಷೆ:ಪ್ರಿಯಾಂಕ್ ಖರ್ಗೆ
ಕಲಬುರಗಿ.ಆ, 13 : ತುಂಗಭದ್ರಾ ಆಣೆಕಟ್ಟಿನ ಗೇಟ್ ಕೊಚ್ಚಿ ಹೋದ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಆಣೆಕಟ್ಟುಗಳ ಗಟ್ಟಿತನದ ಸಮೀಕ್ಷೆ ನಡೆಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್‍ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಲ್ಲಿನ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಆಣೆಕಟ್ಟಿನಗೇಟ್ ಕೊಚ್ಚಿ ಹೋದ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಣೆಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊಸಗೇಟ್ ಸಿದ್ಧಪಡಿಸಿ ಅಳವಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದರು.ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದ ವೇಳೆ ರಾಜ್ಯದ ಎಷ್ಟು ಆಣೆಕಟ್ಟುಗಳಿಗೆ ಭೇಟಿ ನೀಡಿ ಗಟ್ಟಿತನದ ಸಮೀಕ್ಷೆ
ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ ಸಚಿವ ಪ್ರಿಯಾಂಕ್, ತಾಂತ್ರಿಕಸಮಸ್ಯೆಯಿಂದ ಘಟನೆ ನಡೆದಿದೆ. ಲೋಪದೋಷವಾಗಿದ್ದರೆ ಕ್ರಮ
ಕೈಗೊಳ್ಳಲಾಗುವುದು. ಜಲಾಶಯ ವ್ಯಾಪ್ತಿಯ ಪ್ರದೇಶಗಳ ಮೊದಲಮತ್ತು ಎರಡನೆಯ ಬೆಳೆಗೆ ತೊಂದರೆಯಾಗದು. ತುಂಗಭದ್ರ್ರಾ
ಆಣೆಕಟ್ಟೆಗೆ ಸಮಾನಾಂತರ ಸೇತುವೆ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗಿದೆಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲೂ ಅಗತ್ಯ ಕ್ರಮ
ಮಹಾರಾಷ್ಟ್ರದಲ್ಲಿ ಆಣೆಕಟ್ಟುಗಳು ಭರ್ತಿ ಆಗಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ರಾಜ್ಯ ವಿಪತ್ತು ನಿರ್ವಹಣೆ ಅಧಿಕಾರಿಗಳ ಜೊತೆ ಈವರೆಗೆ ಕೈಗೊಂಡಿರುವಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೆಕೆಆರ್‍ಡಿಬಿ ಅಕ್ರಮಗಳ ತನಿಖೆ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಕೆಆರ್‍ಡಿಬಿ)ನಡೆದಿರುವ ಅಕ್ರಮಗಳ ತನಿಖೆ ನಡೆಯುತ್ತಿದೆ. ಈಗಾಗಲೇ ಪ್ರಾಥಮಿಕವರದಿ ಬಂದಿದೆ. ತನಿಖೆ ನಡೆಸುತ್ತಿದ್ದ ಕೆಲವು ಅಧಿಕಾರಿಗಳು ನಿವೃತ್ತರಾಗಿದ್ದಾರೆ. ಹಾಗಾಗಿ, ಕರ್ತವ್ಯದಲ್ಲಿರುವ ಐಎಎಸ್ ಅಧಿಕಾರಿಗಳಿಂದ ತನಿಖೆನಡೆಸಲಾಗುವುದು ಎಂದು ವಿವರಿಸಿದರು.ಮುಡಾ ಪ್ರಕರಣ ಕುರಿತು ಪ್ರಸ್ತಾಪಿಸಿದ ಸಚಿವ ಪ್ರಿಯಾಂಕ್ ಖರ್ಗೆ, ರಾಜಕೀಯ ದುರುದ್ದೇಶದಿಂದ ಪ್ರಕರಣವನ್ನು ಹೆಚ್ಚು ವೈಭವೀಕರಿಸಲಾಗುತ್ತಿದೆ.ರಾಜ್ಯಪಾಲರ ಕಚೇರಿ ಬಿಜೆಪಿಯ ಪ್ರಾದೇಶಿಕ ಕಚೇರಿಯಾಗಿ ಮಾರ್ಪಟ್ಟಿದೆ. ಬಿಜೆಪಿಬಲಹೀನವಾಗಿರುವ ಕಡೆಗಳಲ್ಲಿ ರಾಜಭವನದ ದುರುಪಯೋಗ ನಡೆದಿದೆ.
ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ತಮಿಳುನಾಡುರಾಜ್ಯಪಾಲರು ತಮ್ಮದೇ ಸಭೆಯಿಂದ ಹೊರನಡೆದರೆ, ಕೇರಳರಾಜ್ಯಪಾಲರು ಸರ್ಕಾರದ ವಿರುದ್ಧವೇ ಸತ್ಯಾಗ್ರಹ ಕೂಡುತ್ತಾರೆ ಎಂದರೆಏನರ್ಥ? ಎಂದು ಪ್ರಶ್ನಿಸಿದರು.ಕೂಡಲ ಸಂಗಮದಿಂದ ಬಳ್ಳಾರಿವರೆಗೆ ಬಿಜೆಪಿ ನಾಯಕರ ಪಾದಯಾತ್ರೆ
ಕುರಿತಂತೆ ಮಾತನಾಡಿದ ಅವರು, ವಿಜಯೇಂದ್ರ ಹಾಗೂ ಅಶೋಕನಾಯಕತ್ವಕ್ಕೆ ಬಿಜೆಪಿಯ ಮತ್ತೊಂದು ಗುಂಪಿನಲ್ಲಿ ಮನ್ನಣೆಯಿಲ್ಲ. ಬಿಜೆಪಿವರ್ಸಸ್ ಬಿಜೆಪಿ ಎನ್ನುವಂತಹ ಪರಿಸ್ಥಿತಿ ಆ ಪಕ್ಷದಲ್ಲಿದೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದಿಲ್ಲಿ ಚಲೋ ಆಯೋಜಿಸಿದರೆ ನಾವೇ ಅವರಿಗೆ ಬೆಂಬಲ ನೀಡುತ್ತೇವೆ. ಅದು ಬಿಜೆಪಿಯವರಿಂದ ಆಗದ ಕೆಲಸ. ಏಕೆಂದರೆ,
ಅವರಿಗೆ ಮೋದಿ ಎದುರು ಮಾತನಾಡುವ ದಮ್ಮು ತಾಕತ್ತು ಇಲ್ಲ ಎಂದುಟೀಕಿಸಿದರು.
ಗುರುಮಠಕಲ್ ಶಾಸಕರು ತಮ್ಮ ಕ್ಷೇತ್ರದಲ್ಲಿ ಖರ್ಗೆ ಕುಟುಂಬಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಡಿರುವ ಆರೋಪದ ಕುರಿತು
ಪ್ರಸ್ತಾಪಿಸಿದ ಪ್ರಿಯಾಂಕ್, ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ತಮಗೆ ಬರುವ ಕಾಲ್ ರೆಕಾರ್ಡ್ ಮಾಡಿಕೊಂಡು ಅವರು ಏನೆಲ್ಲಾ ಮಾಡಿದ್ದಾರೆ ಅನ್ನೋದುಎಲ್ಲರಿಗೂ ಗೊತ್ತಿದೆ. ಬೇರೆ ಶಾಸಕರ ಕ್ಷೇತ್ರದಲ್ಲಿ ನಾವು ಹಸ್ತಕ್ಷೇಪಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಕೆಲವು ಹಿಂದೂ ಯುವಕರ ಮೇಲೆ ಹಲ್ಲೆ ನಡೆದ ಬೆನ್ನಲ್ಲಿಸೇಡಂ ಬಂದ್ ಕರೆಕೊಟ್ಟಿರುವ ಕುರಿತು ಕೇಳಲಾದ ಪ್ರಶ್ನೆಗೆ
ಪ್ರತಿಕ್ರಿಯಿಸಿದ ಅವರು, ‘ಮಣಿಪುರದಲ್ಲಿ ಯಾರ ಮೇಲೆ ಹಲ್ಲೆನಡೆಯುತ್ತಿದೆ. ಆ ಬಗ್ಗೆ ಯಾಕೆ ಇವರು ಮಾತನಾಡುವುದಿಲ್ಲ’ ಎಂದು
ಮರುಪ್ರಶ್ನೆ ಹಾಕಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಜಮೀನು ಪಾಲಿ ಇನ್ಸ್‍ಟಿಟ್ಯೂಟ್‍ಗೆ ನೀಡಿರುವ ಕುರಿತು
ಪ್ರಮೋದ್ ಮುತಾಲಿಕ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್,ಸರ್ಕಾರದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಇರುವ ಸಂಸ್ಥೆಯಲ್ಲಿ ಹೇಗೆಅಕ್ರಮವಾಗುತ್ತದೆ? ಅಲ್ಲಿ ಅಧ್ಯಯನ ನಡೆಯುತ್ತಿಲ್ಲ ಎಂದರೆ ಅವರೇಬಂದು ನಡೆಸಲಿ ಎಂದು ಹೇಳಿದರು.
ಇನ್ನು, ಕಲಬುರಗಿಯ ಆಂದೋಲಾ ಮಠಕ್ಕೆ ಮಹಾನಗರ ಪಾಲಿಕೆ ನೋಟಿಸುಕೊಟ್ಟಿದ್ದರಲ್ಲಿ ಏನೂ ತಪ್ಪಿಲ್ಲ. ‘ಇಷ್ಟಕ್ಕೂ ಆಂದೋಲಾ ಸ್ವಾಮಿ ಬಗ್ಗೆಮಾತನಾಡಲು ಪುರುಸೊತ್ತಿಲ್ಲ. ನನಗೆ ಮಾಡಲು ಬಹಳ ಕೆಲಸಗಳಿವೆ’ಎಂದರು.
ರಾಜ್ಯಪಾಲರು ಮೇಲಿನವರ ಕೈಗೊಂಬೆ
ಕರ್ನಾಟಕದ ರಾಜ್ಯಪಾಲರು ಮೇಲಿನವರ (ಬಿಜೆಪಿ ಹೈಕಮಾಂಡ್)ಕೈಗೊಂಬೆಯಾಗಿ ವರ್ತಿಸುವ ಮೂಲಕ ರಾಜಭವನ ದುರುಪಯೋಗಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.ಜು.5ರಂದು ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಬಳಿಕ ಜು.15ಕ್ಕೆ ಮತ್ತೊಂದು ಪತ್ರ ಬರೆಯುತ್ತಾರೆ. ಜು.26 ರಂದು ಈ ಬಗ್ಗೆ ಸರ್ಕಾರ 100 ಪುಟಗಳ ಉತ್ತರ ಸಲ್ಲಿಸಿದೆ. ಅದೇದಿನ ಅಬ್ರಹಾಂ ದೂರು ದಾಖಲಿಸಿದಕೂಡಲೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸು ನೀಡುತ್ತಾರೆ.ಸರ್ಕಾರದ ಸಮಜಾಯಿಷಿ ಸಹ ಪರಿಶೀಲಿಸದೆ, ಕೇವಲ ಖಾಸಗಿ ದೂರು ದಾಖಲಿಸಿದ ತಕ್ಷಣ ಶೋಕಾಸ್ ನೋಟಿಸು ನೀಡಿದ್ದಾರೆ. ದೂರದಾರರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪ್ರಕರಣವೊಂದರಲ್ಲಿ ಅವರಿಗೆ ಸುಪ್ರಿಂಕೋರ್ಟ್ ದಂಡ ವಿಧಿಸಿದೆ.ಇಂಥವರ ಮಾತು ರಾಜ್ಯಪಾಲರು ಕೇಳುತ್ತಾರೆ ಎಂದರೆ ಮೇಲಿನಿಂದ ಅವರಿಗೆ ಆದೇಶ ಬಂದಿದೆ. ರಾಜ್ಯಪಾಲರು ಮೇಲಿನವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದರು.