ಜಿಲ್ಲಾ ಮಟ್ಟದ ಮುಂಗಾರು ಕವಿಗೋಷ್ಠಿ
ವಿಜಯಪುರ,ಆ.13:ಕರ್ನಾಟಕ ನವನಿರ್ಮಾಣ ವೇದಿಕೆ ರಾಜ್ಯ ಹಾಗೂ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಮುಂಗಾರು ಕವಿಗೋಷ್ಠಿ ಕಾರ್ಯಕ್ರಮವನ್ನು ನಗರದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿತ್ತು.
ಕವಿಗೋಷ್ಠಿಯನ್ನು ಉದ್ಘಾಟಿಸಿದ ಬಹುಭಾಷಾ ಕವಿ ಜಿ.ಆರ್. ಕುಲಕರ್ಣಿ ಮಾತನಾಡಿ, ಕನ್ನಡ ಕಾವ್ಯವು ಜನಪದದ ಮೂಲಕ ಗ್ರಾಮೀಣ ಭಾಗದಿಂದ ಆವರಿಸಿ ರೈತಾಪಿ ವರ್ಗವನ್ನು ಪ್ರೇರೆಪಿಸಿದೆ. ಮುಂಗಾರು ಕವಿಗೋಷ್ಠಿ ಮುಂಗಾರು ಬೆಳೆದರೆ ಬಾಳು ಬಂಗಾರವಾದೀತÀು ಎಂಬ ಮಾತು ಇಂದು ಸುಳ್ಳಾಗಿದೆ. ಮುಂಗಾರು ಮಳೆ ಇಲ್ಲದೆ ಬರಗಾಲದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹೀಗಾಗಿ ಸಾಹಿತ್ಯವು ರೈತಾಪಿ ವರ್ಗದ ನೋವು ನಲಿವುಗಳನ್ನು ಕವಿಗಳು ಬಹಳ ಅರ್ಥಪೂರ್ಣವಾಗಿ ಕವಿತೆಗಳನ್ನು ವಾಚಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಾ. ಜಿ.ಡಿ. ಕೊಟ್ನಾಳ ಮಾತನಾಡಿ, ಕನ್ನಡ ಶ್ರೀಮಂತ ಭಾಷೆ. ಈ ಭಾಷೆ ಶ್ರೀಮಂತವಾಗಲು ಕನ್ನಡ ಕವಿಗಳ ಕೊಡುಗೆ ಅಪಾರ. ಕನ್ನಡ ಎಂಬುದು ಕನ್ನಡಿಗನ ಉಸಿರು, ಉಸಿರು ನಿಂತರೆ ಕನ್ನಡವು ಇರಲಾರದು. ಕರ್ನಾಟಕವು ಇರಲಾರದು. ಹೀಗೆಂದೆ ಕವಿಗಳು ಉಸಿರಲ್ಲಿ ಉಸಿರಾಗಿಸಿ ಹಸಿರಲ್ಲಿ ಹಸಿರಾಗಿಸಿ ಹೆಸರು ಮಾಡಿರುವ ಕೀರ್ತಿ ಕನ್ನಡಕ್ಕೆ ಸಲ್ಲುತ್ತದೆ ಎಂದರು.
ಚಲನಚಿತ್ರ ನಟರು ಹಾಗೂ ಬಹುಮುಖಿ ಕಲಾವಿದ ಅಂಬಾದಾಸ ಜೋಶಿ ಮಾತನಾಡಿ, ಪರಿಸರ ಉಳಿದರೆ ಕವಿಯೂ ಉಳಿಯಬಲ್ಲ. ಕವಿತೆಯು ಉಳಿಯುವುದು. ಪರಿಸರವೇ ನಮ್ಮ ಉಸಿರು ಎಂದರು.
ಕನವೇ ರಾಜ್ಯಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಕನ್ನಡ ಭಾಷೆಗೆ ಕರುಣೆ ಇದೆ. ಕಾವ್ಯಕ್ಕೆ ಮನಸ್ಸು ಮತ್ತು ಕಣ್ಣು ಇರಬೇಕು. ಅಂದಾಗ ಮಾತ್ರ ಆ ಕಾವ್ಯಕ್ಕೆ ಕಳಕಳಿಯ ಹೃದಯವಂತಿಕೆ ಹುಟ್ಟಿಕೊಳ್ಳುತ್ತದೆ. ಮಾನವೀಯತೆು ಇಲ್ಲದೆ ಸಾಹಿತ್ಯ ಸಾಹಿತ್ಯವಾಗಲಾರದು ಎಂದರು.
ಬಿ.ಆರ್. ಬನಸೋಡೆ, ಎಂ.ಎಂ. ಖಲಾಸಿ, ಕವಿತಾ ಜಹಾಗೀರದಾರ, ಭಾರತಿ ಟಂಕಸಾಲಿ, ಗುರುರಾಜ ಪಂಚಾಳ ಮಾತನಾಡಿದರು.
ಎಂ.ಎಂ. ಮಾಲಬಾರಿ, ಶಕೀಲ ಗೊಡೆಸವಾರ, ರಾಯನಗೌಡ ಪಾಟೀಲ, ಶರಣು ಕಾಟಕರ, ಮೈನುದ್ದೀನ ಮಕಾನದಾರ, ಆನಂದ ಸಾಗರ, ಪ್ರಕಾಶ ನಡುವಿನಕೇರಿ, ಹಮೀದ ಇನಾಮದಾರ, ಆರ್.ಜಿ. ಕೊಟ್ನಾಳ ಮುಂತಾದವರ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು.
ಬಾಬು ಅವತಾಡೆ ಸ್ವಾಗತಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಕೆ.ಕೆ. ಬನ್ನಟ್ಟಿ ವಂದಿಸಿದರು.
ಸಂಗಮೇಶ ಕೆರೆಪ್ಪಗೋಳ, ಶಶಿಕಾಂತ ಮಾನೆ, ಶಶಿಕಾಂತ ಮಾದರ, ಶಿವಪ್ರಕಾಶ ಜಂಗಮಶೆಟ್ಟಿ, ಗೀತಾ ಉಪ್ಪಲದಿನ್ನಿ, ಶಿವಪುತ್ರ ಅಜಮನಿ, ರುಕ್ಮೀಣಿ ಅಗಸರ, ಉಮಾ ನಾವದಗಿ, ಶೋಭಾ ಕಬಾಡೆ, ವಿಜಯಾ ಬಿರಾದಾರ, ಸಾಕ್ಷಿ ಜಮಖಂಡಿ, ಸಿದ್ದಪ್ಪ ಹದಿಮೂರ, ಪ್ರಕಾಶಸಿಂಗ್ ರಜಪೂತ ಮುಂತಾದ ಕವಿಗಳು ಮುಂಗಾರು ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದರು.