ಪ್ರವಚನದಿಂದ ಜೀವನ್ಮುಕ್ತಿ :ಮಾತಾಜಿ ಕೈವಲ್ಯಮಯಿ
ವಿಜಯಪುರ,ಆ.13:ದೇವರು ಸೃಷ್ಟಿಸಿದ ಜಗತ್ತಿಗೆ ನಾವು ಅತಿಥಿಗಳಾಗಿ ಬಂದಿದ್ದೇವೆ. ಆಸೆಗಳನ್ನು ಹತ್ತಿಕ್ಕಿ ದೇವರ ಧ್ಯಾನದಲ್ಲಿ ತೊಡಗಿ ಸನ್ಕಾರ್ಯಗಳನ್ನು ಮಾಡಬೇಕು. ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತ ಜೀವನ್ಮುಕ್ತಿ ಹೊಂದಬೇಕು. ಸತ್ಸಂಗ ಮಾನವನನ್ನು ಮಹಾಮಾನವನ್ನಾಗಿ ಮಾಡುತ್ತದೆ ಎಂದು ಕೃಪಾಮಯಿತಿ ಶಾರದಾಶ್ರಮದ ಮಾತಾಜಿ ಕೈವಲ್ಯಮಯಿ ಅವರು ಹೇಳಿದರು.
ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರವಚನವನ್ನು ಉದ್ಘಾಟಿಸಿ ಮಾತನಾಡಿದರು.
ಮಾತೋಶ್ರೀ ಸುಖದೇವಿ ಅಲಬಾಳಮಠ ಅವರು ಪ್ರವಚನವನ್ನು ಪ್ರಾರಂಭಿಸಿ ಪವಿತ್ರವಾದ ಶ್ರಾವಣ ಮಾಸದಲ್ಲಿ ಶರಣರ, ಪೂಜ್ಯರ ಅಮೃತವಾಣಿಯನ್ನು ಶ್ರವಣ ಮಾಡಿ, ಮನನ ಹಾಗೂ ಅನುಷ್ಠಾನದ ಮೂಲಕ ಭಗವತೆ ಸಾಕ್ಷಾತ್ಕಾರವನ್ನು ಪಡೆಯಬೇಕೆಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಅವರು ಪ್ರವಚನ ಆಲಿಕೆಯಿಂದ ಮನುಷ್ಯ ಸದ್ಗುಣ ಮತ್ತು ಸಚ್ಚಾರಿತ್ರ್ಯವನ್ನು ಗಳಿಸಿ ಪರಮಾನಂದ ಹೊಂದುತ್ತಾನೆಂದು ಹೇಳಿದರು. ಜ್ಞಾನಯೋಗಾಶ್ರಮದ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯವನ್ನು ವಹಿಸಿದ್ದರು. ಎ.ಡಿ. ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಂಬುನಾಥ ಕಂಚ್ಯಾಣಿ ಸ್ವಾಗತಿಸಿದರು. ಈರಣ್ಣ ತೊಂಡಿಕಟ್ಟಿ ನಿರೂಪಿಸಿದರು. ಮಹಾವೀರ ತಂಗಾ ವಂದಿಸಿದರು.
ಎಸ್.ಡಿ. ಕೃಷ್ಣ ಮೂರ್ತಿ, ಎಸ್.ಎಂ. ಹದಿಮೂರ, ಭುವನೇಶ್ವರಿ ಕೋರವಾರ, ಎ.ಎ. ಪಾರ್ಸಿ, ಸುರೇಶ ಕೋರವಾರ, ಜೆ.ಎಸ್. ಸೂರ್ಯವಂಶಿ, ಅಶೋಕ ಹಿರೇಗೌಡರ, ಬಿ.ಎಸ್. ಬಿರಾದಾರ, ಕೆ.ಎಂ. ಕಾರಜೋಳ, ಕವಿತಾ ಹಿರೇಗೌಡರ, ರುಕ್ಮಿಣಿ ಕೋರವಾರ, ಸುನಂದಾ ಕಂಚ್ಯಾಣಿ, ಆರ್. ಬಿ. ಕುಲಕರ್ಣಿ, ಅಶೋಕ ಕೋರವಾರ, ಶೈಲಾ ನಂದಿಕೋಲ ಉಪಸ್ಥಿತರಿದ್ದರು.