ಅಸಂವಿಧಾನಿಕ ನಡೆಯನ್ನು ಖಂಡಿಸಿ ಡಿಎಸ್‍ಎಸ್ ಬೃಹತ್ ಪ್ರತಿಭಟನೆ
ವಿಜಯಪುರ,ಆ.13:ರಾಜ್ಯ ಸರಕಾರದ ಅಸಂವಿಧಾನಿಕ ನಡೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಾಗವಾರ ಬಣ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಲಾಯಿತು.
ನಗರದ ಡಾ.| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದ ಮೂಲಕ ಹಾಯ್ದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸರಕಾರದ ಅಸಂವಿಧಾನಿಕ ನಡೆಯನ್ನು ಖಂಡಿಸಿ ಪ್ರತಿಭಟನೆಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅನಂತರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಚಂದ್ರಕಾಂತ ಸಿಂಗೆ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರವರು ರಚಿಸಿದ ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದು ಹೇಳಿದ ಕೋಮುವಾದದ ದಳ್ಳುರಿಯನ್ನು ಪ್ರದರ್ಶಿಸಿಸುತ್ತಿದ್ದ ಬಿಜೆಪಿ ಸರಕಾರವನ್ನು ಕಿತ್ತೆಸೆದದ್ದು ಇಡೀ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಜನಾಂಗ, ಹಿಂದುಳಿದ ವರ್ಗಗಳು ಎಂಬುವುದು ಕಳೆದ ಚುನಾಚಣೆಯಲ್ಲಿ ಸಾಬೀತಾಗಿದೆ. ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯುತ್ತೇನೆಂದು ಅಹಿಂದ ವರ್ಗಗಳನ್ನು ಮೇಲೆತ್ತುವ ಕಾಂಗ್ರೆಸ್ ಸರ್ಕಾರವೇ ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತವೆಂದು ಎಲ್ಲಾ ಅಹಿಂದ ವರ್ಗಗಳು ಒಗ್ಗೂಡಿ ಬಿಜೆಪಿಯನ್ನು ಧೂಳಿಪಟ ಮಾಡಿ ಸುಭದ್ರ ಕಾಂಗ್ರೆಸ್ ಸರ್ಕಾರ ತರುವಲ್ಲಿ ನಮ್ಮೆಲ್ಲ ಅಹಿಂದ ಜನಗಳ ಮುಖ್ಯ ಪಾತ್ರವಿದೆ ಎಂಬುವುದು ಎರಡು ಮಾತಿಲ್ಲಾ. ಆದರೆ ಇದನ್ನು ಸದÀ್ಯದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮರೆತಂತಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ 2023-24 ಹಾಗೂ 2024-25 ನೇ ಸಾಲಿನ ಪ.ಜಾತಿ ಮತ್ತು ಪ.ಪಂಗಡಕ್ಕೆ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ಇತರೆ ಕೆಲಸಕ್ಕೆ ಬಳಕೆ ಮಾಡಿರುವದನ್ನು ನೋಡಿದರೆ ಬೇಲಿ ಎದ್ದು ಹೊಲ ಮೇಯ್ದಂತೆ ಕಾಣುತ್ತದೆ. ಇಂತಹ ಸರ್ಕಾರದ ನಡೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ರಾಜ್ಯದ ದೀನ ದಲಿತರ, ಹಿಂದುಳಿದವರ, ನೋವಿಗೆ ಧ್ವನಿಯಾಗಿ ಸಂವಿಧಾನದ ಆಶಯ ಜಾರಿಗೆ ತರುತ್ತೇನೆ ಎಂದು ಹೇಳಿತ್ತು. ಆದರೆ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡಿಲ್ಲ. ಈಗ ಇದಕ್ಕೆ ತದ್ವಿರುದ್ಧವಾಗಿ 2018-19 ನೇ ಸಾಲಿನಿಂದ ಇಲ್ಲಿವರೆಗೆ ಪ.ಜಾತಿ ಮತ್ತು ಪ.ಪಂಗಡ ನಿಗಮಗಳಲ್ಲಿ ಯಾವುದೆ ಭೂ ಒಡೆತನ ಯೋಜನೆಗಳು ಮಂಜೂರು ಆಗಿರುವುದಿಲ್ಲ. ಅನೇಕ ವರ್ಷಗಳಿಂದ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಅರ್ಜಿಗಳ ಬಗ್ಗೆ ಹಿಂದಿನ ಸರಕಾರ ಮತ್ತು ಈಗಿನ ಸರಕಾರ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಸಂಘಟನಾ ಸಂಚಾಲಕ ಹುಯೋಗಿ ತಳ್ಳೊಳ್ಳಿ ಮತ್ತು ಗುರು ಗುಡಿಮನಿ ಮಾತನಾಡಿ, ಸರಕಾರÀ 2023-24-2024-25ನೇ ಸಾಲಿನ ಪ. ಜಾ, ಪ. ಪಂ ಜನಾಂಗಕ್ಕೆ ಮೀಸಲಿಟ್ಟ 24000 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದುಮ ಅದನ್ನು ಮರಳಿ ಕೊಡಬೇಕು. ರಾಜ್ಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಎಲ್ಲಾ ಇಲಾಖೆಗಳಲ್ಲಿ ಮೀಸಲಾತಿ ಪ್ರಕಾರ ಹುದ್ದೆಗಳ ಭರ್ತಿ ಮಾಡುತ್ತಿಲ್ಲ. ಹಿಂದಿನ ಮತ್ತು ಈಗಿನ ಸರಕಾರಗಳು ಎಸಿಪಿ ಮತ್ತು ಟಿಎಸ್‍ಪಿ ಕಾಮಗಾರಿಗಳನ್ನು ಎಸ್.ಸಿ ಮತ್ತು ಎಸ್.ಟಿ ಜನಾಂಗ ಇಲ್ಲದ ಏರಿಯಾದಲ್ಲಿ ಕಾಮಗಾರಿಗಳನ್ನು ಮಾಡಲಾಗಿದೆ. ಅಂತಹ ಕಾಮಗಾರಿಗಳನ್ನು ಪತ್ತೆ ಹಚ್ಚಿ ಅನುμÁ್ಠನ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಯೋಜನಾ ವೆಚ್ಚ ಕೂಡ ಭರಿಸಬೇಕು. ಬಸವನಬಾಗೇವಾಡಿ ತಾಲೂಕಿನ ನಾಗೂರ ಗ್ರಾಮಕ್ಕೆ ಪರಶಿಷ್ಟ ಜಾತಿಯ ಜನರಿಗೆ ಸಾಮೂಹಿಕ ಬಹಿμÁ್ಕರ ಹಾಕಿದ್ದರೂ ಕೂಡ ಇಲ್ಲಿವರೆಗೆ ಯಾವುದೇ ಸವಲತ್ತು ಬಂದಿರುವದಿಲ್ಲ. ಕೂಡಲೇ ಬಹಿμÁ್ಕರ ಪ್ರಕರಣದ ಸವಲತ್ತು ಒದಗಿಸಿ ಕೊಡಬೇಕು. ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲಿ ಪ.ಜಾ., ಪ. ಪಂಗಡಗಳಿಗೆ ಸ್ಮಶಾನ ಜಾಗವನ್ನು ಸರಕಾರವೇ ಪ್ರತಿ ಹಳ್ಳಿಗಳಲ್ಲಿ ಭೂ ಸ್ವಾಧೀನಪಡಿಸಿಕೊಂಡು ಸ್ಮಶಾನ ಜಾಗ ಮಂಜೂರ ಮಾಡಬೇಕು. ಬ್ಯಾಕ್‍ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ವಿಭಾಗೀಯ ಸಂಘಟನಾ ಸಂಚಾಲಕ ರಾವುತ ತಳಕೇರಿ, ದೇವಿಂದ್ರ ಹಾದಿಮನಿ, ಚನ್ನು ಕಟ್ಟಿಮನಿ, ಅನೀಲ ಹೊಸಮನಿ, ಸಂತೋಷ ತಳಕೇರಿ, ಈಶ್ವರ ಬಡಿಗೇರ, ಈಶ್ವರ ಚಲವಾದಿ, ಪಾವಡೆಪ್ಪ ಹೊಲದೂರ, ನಾಗೇಶ ಕಟ್ಟಿಮನಿ, ಕಾಳಪ್ಪ ಚಲವಾದಿ, ಚಂದ್ರಶೇಖರ ನಾಲತವಾಡ, ಚಂದ್ರಶೇಖರ ಬಡಿಗೇರ, ವಿದ್ಯಾಧರ ಬಡಿಗೇರ, ಗಂಗಾಧರ ಆರೇರ, ಬಸವರಾಜ ದೊಡಮನಿ, ಪ್ರಶಾಂತ ಭೂತಾಳ, ಮಾಂತೇಶ ಕಟ್ಟಿಮನಿ, ಬಸವರಾಜ ಉತ್ತಾಳೆ, ಬಸವರಾಜ ಬಡಿಗೇರ, ದೇವು ಗೊಟುಗುಣಕಿ, ಶರಣು ಬಂಟನೂರ, ಚಂದ್ರು ಗೊಡಮನಿ, ಭೀಮು ರತ್ನಾಕರ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.