ಸೀಮೆ ಲಕ್ಷ್ಮೀ ಗುಡಿಯಲ್ಲಿ ಶ್ರಾವಣ ಭಜನೆ
ಕಲಬುರಗಿ: ಆ.13:ಶ್ರಾವಣ ಮಾಸದ ಪ್ರಯುಕ್ತ ನಗರದ ತುಂಗಾ ಕಾಲೋನಿಯ ಸೀಮೆ ಲಕ್ಷ್ಮೀ ದೇವಸ್ಥಾನದಲ್ಲಿ ಇತ್ತೀಚೆಗೆ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರತಿದಿನ ನಡೆಯುವ ಈ ಭಜನಾ ಕಾರ್ಯಕ್ರಮದಲ್ಲಿ
ಮಹಿಳೆಯರು ದೇವಿಯ ಭಜನಾ ಪದಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಇನ್ನೂ ಶ್ರಾವಣ ಹಿಂದೂ ಧರ್ಮದ ಪವಿತ್ರ ಮಾಸವಾಗಿದ್ದು, ಈ ಮಾಸವು ವಿಶೇಷವಾಗಿ ಭಕ್ತಿ, ಧರ್ಮ, ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದೆ ಎಂಬುದು ವಿಶೇಷ. ಕಾಲೋನಿ ಮಹಿಳೆಯರು ರಾತ್ರಿ 8 ಗಂಟೆಯಿಂದ 11 ಗಂಟೆಯವರೆಗೂ ಭಜನೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಿತ್ಯ ಪ್ರಸಾದ ವಿತರಣೆ ನಡೆಯುತ್ತಿದೆ.
ಕಾಲೋನಿಯ ಬಂಡೆಮ್ಮ ಬೀದರ್, ಶ್ರೀದೇವಿ, ಪಾರ್ವತಿ, ಗುರುತಾಯಿ, ಶ್ರೀದೇವಿ ಉಪ್ಪಿನ್, ಶಾಂತಾಬಾಯಿ ಪೂಜಾರಿ ಹಾಗೂ ಸುರೇಶ್ ಜಮಾದಾರ್ ಸೇರಿದಂತೆ ಹಲವರು ಭಜನಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.