ಉಪ ಕೃಷಿಯಿಂದ ಆದಾಯ ಹೆಚ್ಚಳ
ಇಂಡಿ:ಆ.13:ಕೃಷಿಯೊಂದಿಗೆ ರೈತರು ಕುರಿ ಸಾಗಾಣಿಕೆ, ಹೈನುಗಾರಿಕೆ,ಕೋಳಿ ಸಾಗಾಣಿಕೆ, ಜೇನು ಸಾಗಾಣಿಕೆಗಳಂತಹ ಉಪಕಸಬುಗಳನ್ನು ಮಾಡಿಕೊಂಡು ಆದಾಯ ಗಳಿಸುವತ್ತ ರೈತರು ಹೆಚ್ಚಿನ ಗಮನ ಹರಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಶಂಕರ ಮೂರ್ತಿ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕವಾಗಿ ಕುರಿ ಮತ್ತು ಆಡು ಸಾಗಾಣಿಕೆ ಮೂರು ದಿನಗಳ ರೈತರಿಗೆ ತರಬೇತಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ಕುರಿ ಸಾಗಾಣಿಕೆಯಿಂದ 1 ರೂ ಗೆ 5 ರೂ ಲಾಭ ಪಡೆಯುತ್ತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ 7 ಲಕ್ಷ ಟನ್ ಕುರಿಯ ಮಾಂಸ ಉತ್ಪಾದನೆ ಯಾಗುತ್ತಿದೆ. ಜಗತ್ತಿನಲ್ಲಿ ಭಾರತ ಕುರಿ ಮಾಂಸ ಉತ್ಪಾದನೆಯಲ್ಲಿ ಮೂರನೆಯ ಸ್ಥಾನದಲ್ಲಿದೆ ಎಂದರು.
ಕುರಿ ಮಾಂಸದಿಂದ ಪ್ರೋಟಿನ್‍ಗಳು ದೊರೆಯುತ್ತಿದ್ದು ಸಮಗ್ರ ಕೃಷಿ ಪದ್ದತಿಯಲ್ಲಿ ಕುರಿಸಾಗಾಣಿಕೆ ಅಗ್ರ ಸ್ಥಾನದಲ್ಲಿದೆ. ಕುರಿ ಸಾಕು ಕುಬೇರ ನಾಗು ಎಂದು ಸಾರ್ವಜನಿಕ ಮಾತು ಸತ್ಯ. ಈ ದಿಶೆಯಲ್ಲಿ ಕೃಷಿ ಜೊತೆಗೆ ರೈತರು ಕುರಿ ಸಾಗಾಣಿಕೆಯಂತಹ ಉಪ ಕಸುಬಿನಿಂದ ಆದಾಯ ಹೆಚ್ಚಿಸಿಕೊಳ್ಳ ಬಹುದು ಎಂದರು.
ಪಶು ವಿಜ್ಞಾನಿ ಡಾ. ಪ್ರಸಾದ ಮಾತನಾಡಿ ಬಡವನ ಹಸು ಎಂದೇ ಕರೆಯಿಸಿಕೊಳ್ಳುವ ಕುರಿ ಹಾಲು ಶ್ರೇಷ್ಠ, ದೇಶದಲ್ಲಿ ಶೇ 20 % ಮಾಂಸ ಕುರಿಯಿಂದ ಪಡೆಯುತ್ತಿದ್ದೇವೆ. ಕುರಿ ಮಾಂಸದಲ್ಲಿ ಶೇ 76 % ನೀರು, ಕೊಬ್ಬು ಶೇ 2.6, ಪ್ರೋಟಿನ 19.6 % , ಖನಿಜಗಳು 1 % ಇರುತ್ತವೆ. ತುಲನಾತ್ಮಕವಾಗಿ ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಪ್ರೋಟಿನ್ ಇರುವದರಿಂದ ಕುರಿ ಮಾಂಸ ಆರೋಗ್ಯಕ್ಕೆ ಒಳ್ಳೆಯದು. ಒಂದು ವರ್ಷಕ್ಕೆ 11 ಕೆಜಿ ಕುರಿ ಮಾಂಶ ತಿಂದರೆ ಮನುಷ್ಯನ ದೇಹದಲ್ಲಿ ಪ್ರೋಟಿನಾಂಶ ಇರುತ್ತವೆ ಎಂದರು.
ಕುರಿಯಿಂದ ಹಾಲು,ಗೊಬ್ಬರ,ಉಣ್ಣೆ,ಮಾಂಸ ಸೇರಿದಂತೆ ಅನೇಕ ರೀತಿಯ ಉಪಯೋಗವಾಗುತ್ತದೆ. ಓಸಮನಾಬಾದಿ,ಸಿರೋಹಿ,ಮಲಬಾರಿ,ಬೀಟಲ್,ಬೋಯೆರ್, ಕಣ್ಣಿ ಸೇರಿದಂತೆ ಅನೇಕ ರೀತಿಯ ಪ್ರಕಾರಗಳಿದ್ದು ಕುರಿ ಸಾಗಾಣಿಕೆ ರೈತರಿಗೆ ಲಾಭದಾಯಕ ಎಂದರು.
ಡಾ.ಪ್ರೇಮಚಂದ್ರ, ಡಾ. ಹೀನಾ, ಡಾ. ಪ್ರಕಾಶ,ಡಾ. ಬಾಲಾಜಿ ನಾಯಕ ಮಾತನಾಡಿದರು.
ತರಬೇತಿಯಲ್ಲಿ ಪ್ರಗತಿಪರ ರೈತರಾದ ಬಸವರಾಜ ಜಂಬಗಿ, ರಾಯಪ್ಪ ಪೂಜಾರಿ, ಎಮ್.ಎಸ್.ಬಾಗವಾನ, ಎಸ್.ಕೆ.ವಳಸಂಗೆ,ಕೆ.ಎಸ್.ಕಲಾವಂತ,ಡಿ.ಎಸ್.ಬೇವಿನಕಟ್ಟಿ,ಸಂತೋಷ ನಸಳಿಪುರೆ, ಸಿದ್ದರಾಯ ಬಿರಾದಾರ,ಸುನಂದಾ ಬಾಣಿಕೋಲ,ಪ್ರೀಯಾಂಕಾ ಬಸೀನ, ರೂಪಾ ಸಿಂಘೇ, ಬಸವರಾಜ ನಿಂಬಾಳ,ಆನಂದ ಚವ್ಹಾಣ, ವಿವೇಕ ರಾಠೋಡ ಮತ್ತಿತರಿದ್ದರು.