ಯೋಗ ಇಂದಿನ ಅವಶ್ಯಕತೆ ನಾಳಿನ ಸಂಸ್ಕøತಿ : ಭವರಲಾಲ್ ಆರ್ಯ
ಬೀದರ:ಆ.13:ಯೋಗವು ಸರಿಯಾಗಿ ಬದುಕುವುದಕ್ಕೆ ಸಂಬಂದಿಸಿದ ವಿಜ್ಞಾನ. ಅದರಿಂದ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬುದೇ ಅದರ ಉದ್ದೇಶ ಯೋಗವು ಕಣ್ಮರೆಯಾಗಿ ಹೋದ ಯಾವುದೇ ಒಂದು ಪ್ರಾಚೀನ ಕಟ್ಟುಕತೆಯಲ್ಲಾ ಅದು ಇಂದಿಗೂ ಎಂದೆಂದಿಗೂ ಪ್ರಸ್ತುತವಾದ ಮೌಲ್ಯ ಪರಂಪರೆ ಅದು ಇಂದಿನ ಅವಶ್ಯಕತೆ ಮತ್ತು ನಾಳಿನ ಸಂಸ್ಕøತಿಯಾಗಿದೆಂದು ಕರ್ನಾಟಕ ರಾಜ್ಯದ ಪತಂಜಲಿ ಯೋಗ ಸಮಿತಿ ರಾಜ್ಯಪ್ರಭಾರಿ ಅಂತರರಾಷ್ಟ್ರೀಯ ಖ್ಯಾತ ಯೋಗ ಗುರುಗಳಾದ ಭವರಲಾಲ್ ಆರ್ಯ ಹೇಳಿದರು. ಅವರು ನಗರದ ಬಿ.ವಿ.ಬಿ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ ವತಿಯಿಂದ ಹಮ್ಮಿಕೊಂಡ ವಿಶೇಷ ಪ್ರಾಣಾಯಮ, ಧ್ಯಾನ, ಯೋಗ ಶಿಬಿರದ ನೇತೃತ್ವ ವಹಿಸಿ ಯೋಗ ಸಾಧಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಯೋಗ ವ್ಯಕ್ತಿಯ ಶಾರೀರಿಕ, ಜೈವಿಕ, ಮನಸಿಕ, ಭಾವನಾತ್ಮಕ, ಅಭೌತಿಕ ಹಾಗೂ ಆಧ್ಯಾತ್ಮಿಕ ಮೊದಲಾದ ಎಲ್ಲ ಅಂಶಗಳ ಮೇಲು ಪ್ರಭಾವ ಬೀರುತ್ತದೆ. ಆತ್ಮವು ಪರಮಾತ್ಮನಲ್ಲಿ ಲೀನವಾÀಗಿರುವುದು ದೇಹ ಮನಸ್ಸು ಹಾಗೂ ಭಾವನೆ ನಡುವೆ ಸಮತೋಲನ ಅಥವಾ ಸಾಮರಸ್ಯ ಸಾಧಿಸುವುದಕ್ಕೆ ಯೋಗವು ಒಂದು ಉತ್ತಮ ಸಾಧನವಾಗಿದೆ.
ರಾಘವೇಂದ್ರ ಕುಲಕರ್ಣಿ ಸಭೀಕರನ್ನು ಸ್ವಾಗತಿಸಿದರು. ವಿಜಯಕುಮಾರ ಪಾಟೀಲ ಯರನಳ್ಳಿ ಕಾರ್ಯಕ್ರಮ ನಿರೂಪಿಸಿದರು, ಜಯರಾಜ ಖಂಡ್ರೆ ವಂದಿಸಿದರು ವಿಶೇಷ ಯೋಗ ಶಿಬಿರದಲ್ಲಿ ಯೋಗ ಶಿಕ್ಷಕರಾದ ವಿಜಯಕುಮಾರ ಬಾಬಣೆ, ವೈಜಿನಾಥ ಬಿರಾದಾರ, ಬಸವರಾಜ ಎಕಲೂರೆ, ನಂದಕುಮಾರ ತಾಂದಳೆ, ಮಲ್ಲಯ್ಯ ಸ್ವಾಮಿ, ಸುಧೀರ ರಾಗಾ, ಭಕ್ತರಾಜ ಖಂಡ್ರೆ, ಕಂಟೆಪ್ಪಾ ಗಂಧಿಗುಡಿ, ಶಿವಾಜಿ ಭೋಸಲೆ, ನಾಗರಾಜ ಕಮಠಾಣೆ, ಕುಮಾರ ಸ್ವಾಮಿ, ರವಿ ತೆಲಗಾಣೆ, ಗುರುನಾಥ ಮೂಲಗೆ, ಶಂಕರರಾವ ಚಿದ್ರಿ, ಬಸವರಾಜ ಉಂಡಿ, ಡಾ.ವೈಜಿನಾಥ ಬೀರಾದಾರ, ಲಲಿತಾ ನಾಗಶೆಟ್ಟಿ ಗಾದಗೆ, ಶಾರದಾ, ಸರಸ್ವತಿ ಪಾಂಚಾಳ, ವಿದ್ಯಾವತಿ ಸಜ್ಜನ, ರವಿ ಖೂಬಾ, ಅಶೋಕ ಮಾನೂರೆ, ಭಧ್ರು ಮಾಳಗೆ, ಗುರಪ್ಪಾ ಗಿರಿಮಲ, ಪ್ರಭುಶೆಟ್ಟಿ ಭೂಳ್ಳಾ, ಶಿವಕುಮಾರ ಸಂಗೋಳಗಿ, ಮಲ್ಲಿಕಾರ್ಜುನ ಬೀರಾದರ, ಘಾಳೆಪ್ಪಾ ಔರಾದಕರ ,ಸಂಜೀವಕುಮಾರ ಅಷ್ಟುರ, ಡಾ.ಮಲ್ಲಿಕಾರ್ಜುನ ಬುಕ್ಕಾ, ಬಸವರಾಜ ದುಕಾನದಾರ, ನೆಹರು ಬೀರಾದಾರ, ಮಹೇಶ ಬೀರಾದಾರ, ಚೆನ್ನಪ್ಪಾ ಚೆಲುವಾ, ಭಕ್ತರಾಜ ಪಾಟೀಲ, ಶಿವಕುಮಾರ ಪಾಟೀಲ, ರಮೇಶ ಪಾಟೀಲ, ರವಿಕುಮಾರ ದೇಶಮುಖ, ಬಸವರಾಜ ಕೋಟೆ, ಭದ್ರಪ್ಪ ಮರಕಲೆ, ಚಂದ್ರಶೇಖರ ಹೆಬ್ಬಾಳೆ, ಶಂಕರರಾವ ಪಿ.ಎಸ್.ಐ, ವೈಜಿನಾಥ ಬೆಲ್ದಾಳೆ, ಶಂಕರಯ್ಯ ಸ್ವಾಮಿ, ರಘುನಾಥ ಪಾಂಚಾಳ ಕಂಟೆಪ್ಪಾ ಕರಂಜೆ ಹಾಗೂ ಯೋಗ ಸಾಧಕರು ಯೋಗಪಟುಗಳು ಜಿಲ್ಲೆಯ ಎಲ್ಲಾ ತಾಲೂಕಿನ ಯೋಗ ಶಿಕ್ಷಕರು ಬಂದುಗಳು ಭಾಗವಹಿಸಿದರು.