ತಾಲೂಕ ಮಟ್ಟದ ಕ್ರೀಡಾಕೂಟದ ಆಯ್ಕೆ
ನಾರ್ಥ್ ಬೆಂಗಳೂರು ಎಜುಕೇಶನಲ್ ಟ್ರಸ್ಟ್ ನ ಆಶ್ರಯದಲ್ಲಿ ನಡೆಯುತ್ತಿರುವ ಪೂರ್ಣ ಪ್ರಜ್ಞಾ ಅಕಾಡೆಮಿ ಶಾಲೆಯು ದಿನಾಂಕ ೯ ಮತ್ತು ೧೦ ರಂದು ಅಬ್ಬಿಗೆರೆಯ ಜಿಂದಾಲ್ ಶಾಲೆಯಲ್ಲಿ ನಡೆದ ಅಬ್ಬಿಗೆರೆ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ೭ ಪ್ರಥಮ ಸ್ಥಾನ,೩ ದ್ವಿತೀಯ ಸ್ಥಾನ ಒಟ್ಟು ೧೦ ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದರು.
ಅವುಗಳಲ್ಲಿ ಕ್ರಮವಾಗಿ ಅಥ್ಲೆಟಿಕ್ಸ್.. ೧೦೦ ಮೀ, ೨೦೦ ಮೀ, ೪೦೦ ಮೀ, ಶಾರ್ಟ್ ಫೂಟ್, ಲಾಂಗ್ ಜಂಪ್, ರಿಲೇ, ಖೋಖೋ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾ ಪಟುಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಎನ್. ಬಿ. ಇ. ಟಿ ಸಂಸ್ಥೆಯ ಅಧ್ಯಕ್ಷ ಶಾಂತಕುಮಾರ್, ಉಪಾಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಡಿ. ಎನ್. ಹರಿದಾಸ್, ಸಹ ಕಾರ್ಯದರ್ಶಿ ಸರೋಜಿನಿ ಪ್ರಸಾದ್, ಕೋಶಾಧ್ಯಕ್ಷ ಜಿ. ರಾಜೇಂದ್ರ, ನಿರ್ದೇಶಕ, ಪರ್ಚೇಜಿಂಗ್ ಕಮಿಟಿಯ ಮುಖ್ಯಸ್ಥರಾದ ಮಂಜುನಾಥರಾವ ಹಾಗೂ ಮಂಜುನಾಥ, ಆಂತರಿಕ ಲೆಕ್ಕ ಪರಿಶೋಧಕ, ಬಿ. ಎಸ್. ಲಕ್ಷ್ಮೀಶ, ನಿರ್ದೇಶಕ ನೀರಜಾಕ್ಷಿ,ಪ್ರಾಂಶುಪಾಲ ಜ್ಯೋತಿಶ್ರೀ. ಪಿ. ದೇಶಪಾಂಡೆ, ದೇಶಪಾಂಡೆ, ಅವರು ಉಪಸ್ಥಿತರಿದ್ದರು.