ಜಾತಿಯಿಂದ ಜೀವನ ಮಾಡದೇ ನೀತಿಯಿಂದ ಜೀವನ ಮಾಡಿ:ಜಯಬಸವ ಶ್ರೀ
ಯಡ್ರಾಮಿ:ಆ.13:ಜಾತಿಯಿಂದ ಜೀವನ ಮಾಡದೇ ನೀತಿಯಿಂದ ಜೀವನ ಕೈಗೊಳ್ಳಬೇಕು ಆಗ ಮಾತ್ರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುವುದು ಎಂದು ಪೂಜ್ಯ ಜಯಬಸವಕುಮಾರ ಮಹಾಸ್ವಾಮಿಗಳು ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ತಾಲೂಕು ಗಾಣಿಗ ಸಮಾಜ ಯುವ ಘಟಕ ಜೇವರ್ಗಿ ಹಾಗೂ ಯಡ್ರಾಮಿ ಯುವ ಘಟಕ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ದೇಶಿಸಿ ಮಾತನಾಡುತ್ತ.
ಈ ದೇಶದಲ್ಲಿ ಜಾತಿಯಿಂದ ದ್ವೇಷ ಅಧಿಕಾರ ರಾಜಕಾರಣದಿಂದ ದೊಡ್ಡವರು ಆಗುವುದಿಲ್ಲ.ನೀತಿ, ಸತ್ಯ,ಪರಿಶುದ್ಧವಾದ ಮನಸ್ಸಿನಿಂದ ಬದುಕಿದರೆ ದೊಡ್ಡವರು ಆಗಲಿಕ್ಕೆ ಸಾಧ್ಯವಾಗುವುದು ಎಂದು ನುಡಿದರು.
ಪ್ರತಿಯೊಬ್ಬರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜೋತೆಗೆ ಉದ್ಯೋಗ ನೀಡುವಂತಹ ಕಾರ್ಯ ಮಾಡಬೇಕು ಆಗ ಮಾತ್ರ ಸಮಾಜ ಹಾಗೂ ಜೀವನ ಪಾವನ ಆಗುತ್ತದೆ ಎಂದು ಸಲಹೆ ನೀಡಿದರು.
ಮಲ್ಲಿಕಾರ್ಜುನ ಲೋಣಿ ಗಾಣಿಗ ಸಮಾಜದ ರಾಜ್ಯ ಕಾರ್ಯದರ್ಶಿ ಅವರು ಮಾತನಾಡಿ.ಗಾಣಿಗ ಸಮಾಜ ಹಲವಾರು ವರ್ಷಗಳಿಂದ ಹಿಂದುಳಿದ ಸಮಾಜವಾಗಿದ್ದು.
ಸರ್ಕಾರ ಕೂಡಲೇ ಗಾಣಿಗ ಸಮಾಜದ ನಿಗಮ ಮಂಡಳಿ ಮಾಡಬೇಕು ಹಾಗೂ ನಮ್ಮ ಸಮಾಜಕ್ಕೆ ಸಿಗಬೇಕಾದ ಎಲ್ಲಾ ಸರ್ಕಾರಿ ಸೌಲಭ್ಯಗಳು ಪ್ರತಿಯೊಬ್ಬರಿಗೂ ಸಿಗುವ ರೀತಿಯಲ್ಲಿ ಕೆಲಸಾ ಆಗಬೇಕು ಎಂದು ಆಗ್ರಹಿಸಿದ್ದರು.
ಪಟ್ಟಣದಲ್ಲಿ ಬೆಳಗ್ಗೆ ಅಂಬೇಡ್ಕರ್ ವೃತ್ತದಿಂದ ಸರ್ದಾರ್ ಶರಣಗೌಡ ವೃತ್ತದವರೆಗೂ ಪೂಜ್ಯ ಜಯಬಸವಕುಮಾರ ಮಹಾಸ್ವಾಮಿಗಳನ್ನು ಸಕಲ ಸಕಲ ವಾದ್ಯಗಳೊಂದಿಗೆ ಭವ್ಯವಾದ ಮೆರವಣಿಗೆ ಜರಗಿತ್ತು.
ಈ ಸಂದರ್ಭದಲ್ಲಿ ಶಿವಲಾಲ ಸಿಂಗ್ ಕಾಗ್ರೇಸ್ ಮುಖಂಡರು ಕಾರ್ಯಕ್ರಮ ಉದ್ಘಾಟಿಸಿದ್ದರು,ದೊಡ್ಡಪ್ಪಗೌಡ ಪಾಟೀಲ ಪಾಟೀಲ ನರಬೋಳ ಮಾಜಿ ಶಾಸಕರು ಜ್ಯೋತಿ ಬೆಳಗಿಸಿದರು, ರಮೇಶ ಭೂಸನೂರ ಮಾಜಿ ಶಾಸಕರು ಸಿಂದಗಿ ಅಧ್ಯಕ್ಷೇವಹಿಸಿದ್ದರು,ಶಿವರಾಜ ಪಾಟೀಲ ರದ್ದೇವಾಡಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಕಲಬುರಗಿ,ಮಡಿವಳಪ್ಪಗೌಡ ಮಾಗಣಗೇರಿ,ಮಲ್ಲಿನಾಥಗೌಡ ಯಲಗೋಡ, ಶಿವಾನಂದ ದ್ಯಾಮಗೊಂಡ,ಶಿವಯೋಗಿ ನೇದಲಗಿ, ಯಶವಂತರಾಯಗೌಡ ರೂಗಿ,ಮಲ್ಲಣ್ಣ ಮನಗೂಳಿ, ಶಂಕರಗೌಡ ಬಾಸಗಿ,ಸುರೇಶ ಸಜ್ಜನ,ಗುರುಣ್ಣಗೌಡ ಪಾಟೀಲ ಇತರ ಸಮಾಜದ ಮುಖಂಡರು ಭಾಗವಹಿಸಿದ್ದರು.
ಗಾಣಿಗ ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಅತೀ ಹೆಚ್ಚಿನ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ್ಯ ಮಾಡಲಾಯಿತ್ತು.