693ನೇ ತುಲಾಭಾರ ಕಾರ್ಯಕ್ರಮಕ್ಕೆ ಹಾರಕೂಡ ಶ್ರೀಗಳಿಂದ ಚಾಲನೆ
ಬೀದರ:ಆ.13:ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಹಾರಕೂಡ ಶ್ರೀಗಳ ಪೂರ್ವಾಶ್ರಮದ ಸಹೋದರರು ಹಾಗೂ ಅವರ ಪುತ್ರರು ಮತ್ತು ಪುತ್ರಿಯರು ಆಯೋಜಿಸಿದ ಗುರುವಂದನೆ ಹಾಗೂ 693ನೇ ತುಲಾಭಾರ ಕಾರ್ಯಕ್ರಮವನ್ನು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಿ.ಕೆ. ಹಿರೇಮಠ, ಪಂಚಾಕ್ಷರಿ ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಗುರುರಾಜ ಹಿರೇಮಠ, ಯೋಗಿರಾಜ ಹಿರೇಮಠ, ವಿಕ್ರಮಾದಿತ್ಯ ಹಿರೇಮಠ, ಅಲ್ಲಮ ಪ್ರಭು ಹಿರೇಮಠ, ಸುಮಂಗಲ ವಿರೂಪಾಕ್ಷಯ್ಯ ಕಿಣಗಿ, ಸುಧಾರಾಣಿ ಮಡಿವಾಳಯ್ಯ ಕುಪಗೀರಮಠ, ವಿಜಯಲಕ್ಷ್ಮಿ ಬಸಯ್ಯ ಹಿರೇಮಠ, ಊರ್ವಶಿ ಚಂದ್ರಮೌಳೇಶ್ವರ ಹಿರೇಮಠ, ಕು. ಸುಭದ್ರಾ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.