ಭಾಷಣ ಸ್ಪರ್ಧೆ : ಪ್ರಥಮ ಸ್ಥಾನ
ಔರಾದ್ :ಆ.13: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ ಭಾರತ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿ, ಕಲಬುರಗಿ ಇವರಿಂದ ಸೋಮವಾರ ಔರಾದ್ ಪಟ್ಟಣ ನವಚೇತನ ಗುರುಕುಲ ಶಾಲೆಯಲ್ಲಿ ಆಯೋಜಿಸಿರುವ ಪ್ರೌಢಶಾಲೆ ಮಟ್ಟದ ಭಾಷಣ ಸ್ಪರ್ಧೆ ಯಲ್ಲಿ ತಾಲ್ಲೂಕಿನ ನಾಗುರ್ ಎಂ ಗ್ರಾಮದ ಸಂತಪುರ ಜ್ಞಾನ ಭಾರತಿ ಪ್ರೌಢ ಶಾಲೆ 9ನೇ ತರಗತಿಯ ಬಾಲಕಿ ಕುಮಾರಿ ದಿವ್ಯ ಮಲ್ಲಪ್ಪ ಗೌಡ ಭಾಷಣ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ ಪಡೆದು ಕೀರ್ತಿ ತಂದಿದ್ದಾಳೆ. ಇವಳ ಸಾಧನೆಗೆ ಶಾಲಾ ಸಿಬ್ಬಂದಿ ಹರ್ಷ ವ್ಯಕ್ತ ಪಡಿಸಿದ್ದಾರೆ.