ಕನ್ನಡ ಭಾಷೆ ಸಂಸ್ಕøತಿ ವಿಶ್ವಕ್ಕೆ ಮಾದರಿ:ವಿಜಯಕುಮಾರ ಸೋನಾರೆ
ಬೀದರ:ಆ.13: ಪೂಜ್ಯ ಡಾ. ಚನ್ನಬಸವ ಪಟ್ಟದೇವರ ಜಿಲ್ಲಾ ರಂಗಮಂದಿರದಲ್ಲಿ,2023-24 ನೇ ಸಾಲಿನ ಸಂಘ ಸಂಸ್ಥೆಗಳ ಸಾಮಾನ್ಯ ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವ ಕನ್ನಡಿಗರ ಸಂಸ್ಥೆ,ಕರ್ನಾಟಕ ಸಂಯುಕ್ತಾಶ್ರದಲ್ಲಿ, ರಾಜ್ಯ ಮಟ್ಟದ ಸಾಂಸ್ಕೃತಿಕ ಸಂಗೀತ, ಕನ್ನಡ ಹಾಡುಗಳ ಗಾಯನ, ಸಾಹಿತ್ಯ ಗೋಷ್ಠಿ, ಮೌನೇಶ ಕರಕಿಹಳ್ಳಿ ಬರೆದಿರುವ ಬದುಕು ಬರವಸೆ, ಕೃತಿ ಬಿಡುಗಡೆ, ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ದಿವ್ಯ ಸಾನಿಧ್ಯಃ ಶಾಂತಿಪಾಲ ಭಂತೆಜಿ ವಹಿಸಿದರು. ನಾಡಗೀತೆ, ಶಿವಕುಮಾರ ಪಾಂಚಾಳ ಹಾಡಿದರು. ಕರ್ನಾಟಕ ಜಾನಪದ ಆಕಡೆಮಿ ಸದಸ್ಯ ಶ್ರೀ ವಿಜಯಕುಮಾರ ಸೋನಾರೆ, ಉದ್ಘಾಟಿಸಿ, ಬೀದರ, ಬಿದ್ರಿಕಲೆ ಏಷ್ಯಾ ಖಂಡಕ್ಕೆ ತವರೂಮನೆ, 12 ಶತಮಾನದಲ್ಲಿ ಕನ್ನಡ ವಚನ ಸಾಹಿತ್ಯದ ಸಮಾನತೆ ಕ್ರಾಂತಿ ಜೀವ ಜಗತ್ತಿಗೆ ಬೆಳಕ್ಕಾಗಿದೆ. ವಿವಿಧ ಭಾಷೆಗಳ ಸಾಮರಸ್ಯತೆ, ಏಕತೆ ಕನ್ನಡತನದ ಸಂಸ್ಕೃತಿ ವಿಶ್ವಕ್ಕೆ ಮಾದರಿ. ಸಂದೇಶ ನಮ್ಮ ಬೀದರ ಜಿಲ್ಲೆ ತೋರಿಸಿಕೊಟ್ಟಿದೆ. ಜಾನಪದ ಸಾಹಿತ್ಯ ಸಂಸ್ಕೃತಿ ಕಲೆ ಗ್ರಾಮೀಣ ಕರ್ನಾಟಕದ ಶ್ರೀಮಂತಿಕೆಗಳಾಗಿವೆ, ಕಲೆ ಉಳಿಸಿ ಬೆಳೆಸುವ ಜವಬ್ದಾರಿ ನಮ್ಮೆಲ್ಲರದಾಗಿದೆ. ಮಂಜೂರಾದ ಧನಸಹಾಯ ಬಿಡುಗಡೆಯಾಗದಿದ್ದರು ರಾಜ್ಯ ಮಟ್ಟದ ಕಾರ್ಯಕ್ರಮ ಮಾಡಿರುವುದು ವಿಶ್ವ ಕನ್ನಡಿಗರ ಸಂಸ್ಥೆ ಕೆಲಸ ಶ್ಲಾಂಘನಿಯವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನೃತ್ಯ ಕು. ವರ್ಷಿಣಿ, ಲಂಬಾಣಿ ನೃತ್ಯ, ಆಶಾ ರಾಠೋಡ ತಂಡ ನಡೆಸಿಕೊಟ್ಟಿತು. ಜಿ ಕನ್ನಡ ವಾಹಿನಿ ಕಾಮಿಡಿ ಕಿಲಾಡಿಗಳ ಖ್ಯಾತಿ ರವಿಕುಮಾರ ಸಿಂಘೆ ಕಲಬುರ್ಗಿ,ಕಾಮಿಡಿ, ಸಿದ್ದಲಿಂಗ ಕಣಜಿ ಬಿಂಬಿಕ್ರಿಯೆ ನಡೆಸಿಕೊಟ್ಟರು ಕನ್ನಡ ಹಾಡುಗಳು ಶ್ರೀ ಜಿ ಚಂದ್ರಕಾಂತ ಹೈದ್ರಾಬಾದ, ಶ್ರೀ ಗುಂಡಪ್ಪ ಕಟ್ಟಿ ಮಂಡ್ಯ, ಮೋಹನಕುಮಾರ ಹುಬ್ಬಳ್ಳಿ, ಕೃಷ್ಣಪ್ಪ ಕೋಲಾರ, ಭಾನುಪ್ರಿಯಾ ಅರಳಿ,ಹರಿರ್ಷ ಚಕ್ರವರ್ತಿ, ದೇವಿದಾಸ ಚಿಮಿಕೊಡ, ನಡೆಸಿಕೊಟ್ಟರು, ಕವಿಗೋಷ್ಠಿಯಲ್ಲಿ ಡಾ. ಸುನೀತಾ ಪಿ ಸೂರ್ಯವಂಶಿ,ಅಜೀತ ನೇಳಗೆ, ರವಿದಾಸ ಕಾಂಬಳೆ, ದಿಲೀಪ ಮೋಘ, ಶಿವರಾಜ ಮೀತ್ರ, ರಾಜು ಪವಾರ, ಅಶ್ವಜೀತ ದಂಡಿನ, ಕವಿತೆಗಳು ವಾಚನ ಮಾಡಿದರು, ಕ್ರಾಂತಿ ಗೀತೆಗಳು ಹಾಗೂ ಹೋರಾಟದ ಕುರಿತು, ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿ ಸ್ವೀಕರಿಸಿ ಬಕ್ಕಪ್ಪ ದಂಡಿನ, ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ಮಾತನಾಡಿ ಗಡಿಭಾಗದ ಬೀದರ ಜಿಲ್ಲೆ ಕನ್ನಡ ಕಟ್ಟುವ ಕೆಲಸ, ಜಾತಿ ಧರ್ಮ, ಮೀರಿ ಕನ್ನಡಿಗರಾಗಿ ಮಾಡಬೇಕ್ಕಾಗಿದೆ. ವಿದೇಶದಲ್ಲಿ ಸೇವೆ ಮಾಡುತ್ತಿರುವ ಭೀಮ್ ನಿಲಕಂಠರಾವ ಹಂಗರಗಿ, ಜಿ. ಚಂದ್ರಕಾಂತ,ರಾಹುಲ ಮೀಶ್ರಾ ಬಿಹಾರ,ಭೀಮರಡ್ಡಿ ಸಿಂಧನಕೇರಾ, ಭಾನುಪ್ರಿಯಾ ಅರಳಿ, ಡಾ. ಸುಜಾತ ಹೊಸಮನಿ, ಅಶೋಕಕುಮಾರ ಎನ್ ಕಲ್ಯಾಣಿ,ಸಾಧಕ ಅಹಮದ. ಸಿ ಲಕ್ಷ??ಮ್ಮಾ ಕೋಲಾರ, ಡಾ. ಮಲ್ಲಯ್ಯ ಅತ್ತನೂರು,ಅಂಬಿಕಾ ಕಲಬುರ್ಗಿ, ಶ್ರೀನಿವಾಸ ಹೊಸಕೋಟೆ, ನರಸಪ್ಪ ಭಂಡಾರಿ, ಗುಂಡಪ್ಪ ಕಟ್ಟಿ, ಡಾ. ಶ್ರೀಕಾಂತ ಚಿಮ್ಮಲ್ ಚಾಮರಾಜ ಪೇಟ್, ಮಹಿಮಾ ಮೋಗವೀರ ಉಡಪಿ, ಕು. ವರ್ಷಣಿ, ಡಾ,ಗವಿಸಿದ್ದಪ್ಪ ಪಾಟೀಲ್ ರವರಿಗೆ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವರ್ಷ ಆಗ್ರಶ್ರೇಣಿಯಲ್ಲಿ ಪಾಸಾದ 150 ವಿದ್ಯಾರ್ಥಿಗಳಿಗೆ ಪ್ರತಿಭಾ ಸತ್ಕಾರ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ, ಶ್ರೀ ಶಂಭುಲಿಂಗ ವಾಲದೊಡ್ಡಿ,ಸಮಾಜ ಸೇವಕರಾದ ಶ್ರೀ ಶಶಿಕುಮಾರ ಎಸ್ ಪೆÇಲೀಸ್ ಪಾಟೀಲ್, ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಅಮೃತ ಪಾಟೀಲ್ ಸಿರನೂರು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಟಿ ಎಂ ಮಂಚೆ,ತಾಲ್ಲೂಕ ಅಧ್ಯಕ್ಷ ಎಂ ಎಸ್ ಮನೋಹರ, ಕರ್ನಾಟಕ ಪ್ರಜಾಶಕ್ತಿ ಸಮಿತಿ ವಿಭಾಗಿ ಅಧ್ಯಕ್ಷ ಪ್ರೇಮಕುಮಾರ ಕಾಂಬಳೆ, ಬಹುಜನ ಜಾಗೃತಿ ವೇದಕೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜನ ಮೋಳಕೇರೆ, ನಗರ ಸಭೆ ಸದಸ್ಯ ಸೂರ್ಯಕಾಂತ ಸಾಧುರೆ, ಗೌತಮ ಭೊಸ್ಲೆ, ವೀರ ಕನ್ನಡಿಗರ ಸೇನೆ, ಜಿಲ್ಲಾಧ್ಯಕ್ಷ ಮುಕೇಶ ಶಾಹಗಂಜ್, ಪ್ರಧಾನ ಕಾರ್ಯದರ್ಶಿ ಬಸವರಾಜ ಜಡಗೆ, ಭಾಗವಹಿಸಿದರು. ಪ್ರಾಸ್ತಾವಿಕ ಸ್ವಾಗತ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ, ಮಾತನಾಡಿ ಕರ್ನಾಟಕಕ್ಕೆ ಐವತ್ತರ ಸಂಭ್ರಮ ಕ್ರಿಯಾಯೊಜನೆಯಂತೆ ಮಾಡಿದ್ದೇನೆ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕಾರ್ಯಕ್ರಮ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ತಿಳಿಸಿಕೊಡುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆ ನಾಡಿನ ಖ್ಯಾತ ಸಾಹಿತಿಗಳಾದ ಡಾ. ಕೆ ಎಸ್ ಬಂಧು ಸಿದ್ದೇಶ್ವರ, ಕಲಬುರ್ಗಿ ವಹಿಸಿದರು. ನಿರೂಪಣೆ ಡಾ. ಸುನೀತಾ ಬಿಕ್ಲೆ, ಅವಿನಾಶ ಪಕ್ಕಲವಾಡ ಮಾಡಿದರು ವಂದನೆ ಸಂಸ್ಥೆ ಖಜಾಂಚಿ ಶಾರದ ಪ್ರಕಾಶ ಮಾಡಿದರು.