ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಮುಖ್ಯ:ಸಿದ್ದಲಿಂಗ ಶ್ರೀ
ಯಡ್ರಾಮಿ:ಆ.13:ಮಕ್ಕಳು ಶಿಕ್ಷಣ ಜೋತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯಡ್ರಾಮಿ ಅವರು ವ್ಯಕ್ತಪಡಿಸಿದ್ದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಭಾರತಿಯ ಸಂಸ್ಕøತಿ ಉತ್ಯವ ಹಾಗೂ ಕೊತ್ತಲ ಸ್ವರ್ಣ ಜಯಂತಿ ನಿಮಿತ್ಯ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡುತ್ತ.
ಮಕ್ಕಳಿಗೆ ಔಪಜಾರಿಕ ಶಿಕ್ಷಣ ಅಲ್ಲದೆ ಕ್ರೀಡೆ ಸಾಹಿತ್ಯ ಸಂಗೀತ ಕ್ಷೇತ್ರಗಳಲ್ಲಿಯೂ ಕೂಡ ತೊಡಗಿಕೊಳ್ಳುವ ಹಾಗೆ ಮಕ್ಕಳನ್ನು ನೋಡಿಕೊಳ್ಳಬೇಕು.ಇದರಿಂದ ಮುಂದಿನ ಪೀಳಿಗೆಗೆ ಮೌಲ್ಯಯುತ ಶಿಕ್ಷಣ ನೀಡುವಂತೆಯಾಗುತ್ತದೆ.
ನಮಗೆ ವರವಾಗಿ ಬಂದ ಭೂಮಿ ಮತ್ತು ಸ್ವಾಭಾವಿಕ ಸಂಪನ್ಮೂಲಗಳು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಕೋಡಬೇಕು.ಇಂತಹ ಕಾರ್ಯಕ್ರಮ ಮಾಡುವದರಿಂದ ಮಕ್ಕಳಲ್ಲಿ ಅಡಗಿರುವ ಕೌಶಲ್ಯ ಹೊರಗಡೆ ಹಾಕಲು ಸಾಧ್ಯವಾಗುವುದು ಎಂದು ನುಡಿದರು.
ಈ ಸಂದರ್ಭದಲ್ಲಿ ವಿಕಾಸ್ ಅಕಾಡೆಮಿ ಸಂಯೋಜಕ ರಾಘವೇಂದ್ರ ಕುಲಕರ್ಣಿ,ಅಪರಾದ ವಿಭಾಗದ ಪಿ.ಎಸ್.ಐ ರಾಜಶೇಖರ,ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವೀಂದ್ರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಲವಂತ್ರಾಯ ಬಿರಾದಾರ,ಸಿ.ಆರ್.ಸಿ ಶಾಂತಕುಮಾರ ಹಚ್ಚಡ್,ಪ್ರಮುಖರಾದ ದೇವಿಂದ್ರಪ್ಪಗೌಡ ಸರ್ಕಾರ,ಡಾ.ಗಂಗಾ,ರವಿ ಪಾಟೀಲ,ಬಸವರಾಜ ಖಾನಗೌಡರ,ಬಸವರಾಜ ಪಾಟೀಲ ಯತ್ನಾಳ,ರೇವಣ್ಣಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.