ತಾಲ್ಲೂಕು ಮಟ್ಟಕ್ಕೆ ಆಯ್ಕೆ
ಕಲಬುರಗಿ:ಆ.13: ಕಲಬುರಗಿ ಉತ್ತರ ವಲಯದ ಕ್ಷೇತ್ರಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಶ್ರೀ ಮಿಲೆನಿಯಂ ಶಿಕ್ಷಣ ಸಂಸ್ಥೆಯಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು ಈ ಕ್ರೀಡಾಕೂಟದಲ್ಲಿ ನಗರದ ಗಂಗಾನಗರದಲ್ಲಿರುವ ಶ್ರೀ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರು ಕಬ್ಬಡಿ ಕ್ರೀಡೆಯಲ್ಲಿ ಭಾಗವಹಿಸಿ ತಾಲ್ಲೂಕು ಮಟ್ಟಿಗೆ ಆಯ್ಕೆ ಆಗಿದ್ದಾರೆ.
ಭಾಗವಹಿಸಿದ ಬಾಲಕಿಯರು ಕೀರ್ತಿ, ಪೂಜಾ,ಸೆವಂತಿ,ವಂದನಾ,ವೈಷ್ಣವಿ,ನಂದಿನಿ,ಐಶ್ವರ್ಯ, ಪ್ರತಿಭಾ, ಅಸ್ಪಿಯಾ ಈ ಬಾಲಕಿಯರ ಸಾಧನೆಗೆ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸವರಾಜ ಎನ್ ಮಳ್ಳಿ,ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಗುಡಬಾ ,ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ವರು ಹರ್ಷ ವ್ಯಕ್ತಪಡಿಸಿದರು.