ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಅಪದ್ಭಾಂದವ ಇದ್ದಂತೆ
ಚಿತ್ತಾಪುರ:ಆ.13:ಕೃಷಿ ಪ್ರಧಾನವಾಗಿರುವ ಚಿತ್ತಾಪುರ ತಾಲೂಕಿನಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಕೃಷಿ ಪತ್ತಿನ ಸಹಕಾರ ಸಂಘಗಳು ಅಪದ್ಭಾಂದವ ಇದ್ದಂತೆ ಎಂದು ಕಂಬಳೇಶ್ವರ ಸಂಸ್ಥಾನದ ಶ್ರೀ ಸೊಮಶೇಖರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಮೊಗಲಾ ಗ್ರಾಮದಲ್ಲಿ ನೂತನವಾಗಿ ಅರಂಭಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಅತಿವೃಷ್ಟಿ, ಬರಗಾರ ಸೇರಿದಂತೆ ಪ್ರಕೃತಿ ವಿಕೊಪದಿಂದ ರೈತಾಪಿ ವರ್ಗವು ತೊಂದರೆಯಲ್ಲಿದೆ ಇಂತಹ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಸಾಲ ಸೌಲಭ್ಯವನ್ನು ನೀಡಿ ಅವರಿಗೆ ಆರ್ಥಿಕವಾಗಿ ನೆರವು ನೀಡಲು ಪತ್ತಿನ ಸಹಕಾರ ಸಂಘವು ಮುಂದಾಗುತ್ತಿರುವದು ರೈತರ ಕೃಷಿ ಚಟುವಟಿಕೆಗಳಿಗೆ ತುಂಬಾ ಸಹಾಯಕವಾಗುತ್ತದೆ ಇದರ ಸೌಲಭ್ಯವನ್ನು ರೈತಪಿ ವರ್ಗವು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೊಮಶೇಖರ ಗೊನಾಯಕ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿದರು.
ಮುಖಂಡರಾದ ಭೀಮಣ್ಣ ಸಾಲಿ ಸಹಕಾರ ಇಲಾಖೆಯ ಮಲ್ಲಿಕಾರ್ಜುನ, ಹಣಮಂತ ದಾಸಹಳ್ಳಿ, ಯಲ್ಲಪ್ಪ ಮುರಡಿ, ಓರಿಯಂಟ ಕಂಪನಿಯ ಸಾಜೀಕುಮಾರ, ನಿಂಗಣ್ಣಗೌಡ ಬೆಳ್ಳಿ, ಅನಿಲಕುಮಾರ ರಾಠೋಡ ವೇದಿಕೆಯಲ್ಲಿದ್ದರು,
ಸ್ವಾಗತ ಶಿವಶರಣಪ್ಪ ಹೂಗಾರ ಮಾಡಿದರು. ಮಲ್ಲಿಕಾರ್ಜುನ ಪೂಜಾರಿ ನಿರೂಪಿಸಿದರು.
ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು:
ಬಸವರಾಜ ಪೂಜಾರಿ- ಅಧ್ಯಕ್ಷರು, ರವಿ.ಬಿ. ರಾಠೋಡ- ಉಪಾಧ್ಯಕ್ಷರಾಗಿ ನಿರ್ದೇಶಕರಾಗಿ- ವೈಜನಾಥ ಎ ಪಾಟೀಲ್, ಗೊಪಿ ಬಿ.ರಾಠೋಡ, ಉಮೇಶ.ಡಿ.ಪೂಜಾರಿ, ಈರಣ್ಣ ಆರ್. ದೊರೆ, ನರಸಪ್ಪ ಹಡಪದ, ದುರ್ಗಪ್ಪ ತಳವಾರ, ಶರಣಪ್ಪ ಕೆಂಪನೊರ, ಲಕ್ಷ್ಮೀ ಕೊಡದೂರ, ಸುಧಾರಾಣಿ ಪೂಜಾರಿ, ಶ್ರೀನಿವಾಸ ಕಲಾಲ್.