ಗ್ರಂಥಪಾಲಕರಿಗಾಗಿ ಕಾರ್ಯಾಗಾರ
ಕಲಬುರಗಿ:ಆ.13: ನೂತನ ವಿದ್ಯಾಲಯ ಸಂಸ್ಥೆಯ ಪಾಲಿಟೆಕ್ನಿಕ್ ಹಾಗೂ ಪದವಿ ಮಹಾವಿದ್ಯಾಲಯ ಹಾಗೂ ಈಜಿ ಸಾಫ್ಟ್ ವೇರ್ ಕಂಪನಿಯ ವತಿಯಿಂದ ಜಿಲ್ಲಾ ಗ್ರಂಥಪಾಲಕರಿಗಾಗಿ ಒಂದು ಕಾರ್ಯಾಗಾರ ಗ್ರಂಥಪಾಲಕರ ದಿನದ ಅಂಗವಾಗಿ ಸೋಮವಾರ ಆಯೋಜಿಸಲಾಗಿತ್ತು.
ಮಹಾದೇವಪ್ಪ ರಾಂಪುರೆ ಆರಾಧನೆಯ ಕಾಲೇಜಿನ ಗ್ರಂಥಪಾಲಕ ಸಂತೋಷ ಹರವಾಳ ಉದ್ಘಾಟಿಸಿದರು. ಈಜಿ ಲ್ಯಾಬ್ ಸಿಒ ಸಂಪನ್ಮೂಲ ವ್ಯಕ್ತಿ ವಾಸುದೇಶಪಾಂಡೆ,ನೂತನ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ ಶ್ರೀಕಾಂತ ಏಕ್ಕೆಳಿಕರ,ಗೋವಿಂದ ಪೂಜಾರ,ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲೆ ಸಿದ್ದಮ್ಮಾ ವಿ.ಜೆ, ಗ್ರಂಥಪಾಲಕಿ ಮತ್ತು ಸಂಯೋಕಿ ಜ್ಯೋತಿ ಜಗನ್ನಾಥ ರಾವ ಕುಲಕರ್ಣಿ ಇದ್ದರು.