ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ತಾಂಡವ ರೈತ ಸಂಘ ಆರೋಪ
ಸಿಂಧನೂರು.ಆ೧೩: ತಾಲೂಕಿನ ಪ್ರತಿ ಸರ್ಕಾರಿ ಕಛೇರಿ ಗಳಲ್ಲಿ ಏನೇ ಕೆಲಸ ಆಗಬೇಕೆಂದರು ಲಂಚ ಕೊಡಬೇಕು .ಲಂಚ ಇಲ್ಲದ ಜಾಗ ಯಾವುದೇ ಕಛೇರಿ ಯಿಲ್ಲದಂತೆ ಆಗಿದೆ ಇದಕ್ಕೆ ಜನ ರೋಸಿ ಹೋಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೊಡಿಹಾಳ ಆರೋಪಿಸಿದರು.
ಇಂದು ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.
ಪ್ರತಿ ನಿತ್ಯ ನಗರದ ನಾಲ್ಕು ದಿಕ್ಕಿಗೆ ಪೋಲಿಸರು ವಾಹನಗಳ ತಪಾಸಣೆ ನೆಪದಲ್ಲಿ ಜನರಿಂದ ಹಣ ಕೀಳುತ್ತಿದ್ದಾರೆ ಈ ಕುರಿತಾಗಿ ಧ್ವನಿ ಎತ್ತಿದರೆ ಯಾರಿಗೆ ಬೇಕಾದರೂ ಹೇಳಿ ನಾವು ಜನಪ್ರತಿನಿಧಿಗಳಿಗೆ ,ಮೇಲಾಧಿಕಾರಿಗಳಿಗೆ ಕೊಡಬೇಕು ಎನ್ನುತ್ತಾರೆ.ಸಿಂಧನೂರು ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ.ಇದಕ್ಕೆ ಕಡಿವಾಣ ಹಾಕಬೇಕು .ಜನ ಸಾಮಾನ್ಯರಿಗೆ ಅಧಿಕಾರಿಗಳು ,ಪೋಲಿಸರು ಕೊಡುವ ಕಿರುಕುಳ ತಪ್ಪಬೇಕು ಎಂದು ಒತ್ತಾಯಿಸಿದರು.
ತುಂಗಭದ್ರಾ ಡ್ಯಾಂ ಗೇಟ್ ಚೈನ್ ಕಿತ್ತಿದ್ದಕ್ಕೆ ನೈತಿಕ ಹೊಣೆ ಹೊತ್ತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ ,ಕಾಡಾ ಅದ್ಯಕ್ಷ ಹಸನಸಾಬ್ ದೊಟಿಹಾಳ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ಸಮಯದಲ್ಲಿ ಜಿಲ್ಲಾದ್ಯಕ್ಷ ಶಿವರಾಜ ಸಾಸಲಮರಿ ,ಯಮನಪ್ಪ ಪಗಡದಿನ್ನಿ ,ಶಿವರಾಜ ಉಪಸ್ಥಿತರಿದ್ದರು.