ರಾಯಣ್ಣ ಜನ್ಮದಿನೋತ್ಸವ:ಭಾವಚಿತ್ರ ಮೆರವಣಿಗೆ
(ಸಂಜೆವಾಣಿ ವಾರ್ತೆ)
ಸಿಂಧನೂರು,ಆ.೧೨: ಸ್ವಾತಂತ್ರ ಹೋರಾಟಗಾರ ,ಸ್ವಾಮಿ ನಿಷ್ಠೆ ,ದೇಶ ಪ್ರೇಮ ಕ್ಕೆ ಹೆಸರುವಾಸಿಯಾದ ಸಂಗೊಳ್ಳಿ ರಾಯಣ್ಣ ನವರ ಆಗಸ್ಟ್ ೧೫ ರಂದು ಜನ್ಮದಿನದ ಅಂಗವಾಗಿ ನಗರದಲ್ಲಿ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ ಕಿಚ್ಚ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು. ಆಗಸ್ಟ್ ೧೫ ರಂದು ಕಿತ್ತೂರು ರಾಣಿ ಚೆನ್ನಮ್ಮ ,ಬಲಗೈ ಬಂಟ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರ ಮೆರವಣಿಗೆ ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಡೊಳ್ಳು ,ಭಾಜ ಭಜಂತ್ರಿ ವಿವಿಧ ವಾದ್ಯಗಳೊಂದಿಗೆ ಸಾಗಿ ಬಸ್ ನಿಲ್ದಾಣದ ಎದುರಿನಲ್ಲಿ ರಾಯಣ್ಣ ನಾಮಫಲಕಕ್ಕೆ ಮಾಲಾರ್ಪಣೆ ಮಾಡಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ,ಮಕ್ಕಳು ಪಾಲ್ಗೊಳ್ಳಲು ಮನವಿ ಮಾಡಿದರು.
ಆಧುನಿಕ ಭರದಲ್ಲಿ ಯುವಕರು ಸ್ವಾತಂತ್ರ್ಯ ಹೋರಾಟಗಾರ ರನ್ನು ಮರೆಯುತ್ತಿದ್ದಾರೆ ಇದು ಬದಲಾಗಬೇಕು. ಸುಭಾಷ್ ಚಂದ್ರ ಬೋಷ್ ,ಭಗತ್ ಸಿಂಗ್ ,ಚಂದ್ರಶೇಖರ ಆಜಾದ್ ಸೇರಿದಂತೆ ಹಲವರ ಹೋರಾಟ ನೆನೆಯಬೇಕು ಎಂದರು.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ತಾಲೂಕು ಅಧ್ಯಕ್ಷ ರಾಮು ಕೆ.ಎಮ್.ಎಸ್ ,ಕನಕ ಯುವ ಸೇನೆ ತಾಲೂಕು ಅಧ್ಯಕ್ಷ ನಾಗರಾಜ ಬಾದರ್ಲಿ ,ಉಪಾಧ್ಯಕ್ಷ ಟಿ.ಶಿವು ,ನಂಜುಂಡಿ ಉಪಸ್ಥಿತರಿದ್ದರು.