ವಿದ್ಯುತ್ ಕಣ್ಣಾಮುಚ್ಚಾಲೆ ಇಜೇರಿ ನಾಡಕಚೇರಿಯಲ್ಲಿ ಸಾರ್ವಜನಿಕರ ಪರದಾಟ
ಯಡ್ರಾಮಿ:ಆ.13:ವಿದ್ಯುತ್ ಕಣ್ಣಾಮುಚ್ಚಾಲೆ ಇಜೇರಿ ನಾಡ ಕಚೇರಿಯಲ್ಲಿ ಒಂದು ಘಂಟೆ ವಿದ್ಯುತ್ ಇದ್ದರೆ ಒಂದು ಘಂಟೆ ಇರುವದಿಲ್ಲ ಎಂದು ಕಚೇರಿಯ ಮುಂದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯಡ್ರಾಮಿ ತಾಲೂಕಿನ ಇಜೇರಿ ಹೋಬಳಿ ಗ್ರಾಮದಲ್ಲಿ 29 ಗ್ರಾಮ ಹೊಂದಿದ ಹೋಬಳಿ ಗ್ರಾಮಗಳೂ ಪ್ರತಿದಿನ ಜಾತಿ ಪ್ರಮಾಣ ಪತ್ರ ಆಧಾಯ ಪಾಣಿ ವಂಶಾವಳಿ ಪತ್ರ 371 ಜೇ ಹೀಗೆ ಹಲವಾರು ಪ್ರಮಾಣ ಪತ್ರ ಪಡೆಯಲು ನೂರಾರು ರೈತರು ವಿದ್ಯಾರ್ಥಿಗಳು ಬರುತ್ತಾರೆ.
ವಿದ್ಯುತ ಒಂದು ಘಂಟೆ ಬಂದ್ರೆ ಒಂದು ಘಂಟೆ ಇರುವದಿಲ್ಲ ಒಂದು ಅರ್ಜಿ ಸಲ್ಲಿಸಲು ಹಲವಾರು ದಿನಗಳು ಸುತ್ತಾಡಬೇಕು ಎಂದು ಸಾರ್ವಜನಿಕ ವಿದ್ಯಾರ್ಥಿಗಳು ಆಡಳಿತ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ನಾಡಕಚೇರಿಯ ಸಿಬ್ಬಂದಿವರ್ಗ ವಿದ್ಯುತ ಇಲ್ಲಾ ಅಂದ್ರೆ ಯಾವುದೇ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಯಾಕೆ ಅಂದ್ರೆ ನಮ್ಮ ಹತ್ತಿರ ಬ್ಯಾಟರಿ ಸೌಲಭ್ಯ ಇಲ್ಲಾ ವಿದ್ಯುತ ಇದ್ರೆ ಮಾತ್ರ ಅರ್ಜಿ ಹಾಕಬೇಕು ಎಂದು ಹೇಳುತ್ತಾರೆ ಎಂದು ಸಾರ್ವಜನಿಕ ಅಳಲು ತೊಡಿಕೊಳ್ಳುತ್ತಾರೆ.
ಸರ್ಕಾರ ನಿರಂತರ ಜ್ಯೋತಿ ಎಂದು ಪ್ರಚಾರಕ್ಕೆ ಮಾತ್ರ ನಮ್ಮ ಗ್ರಾಮದಲ್ಲಿ ಒಂದು ಅರ್ಜಿ ಸಲ್ಲಿಸಲು ಎರಡೂ ಮೂರು ದಿನಗಳು ಕಾಯಬೇಕು ತಕ್ಷಣ ಆಡಳಿತ ಅಧಿಕಾರಿಗಳು ವಿದ್ಯುತ ಸೌಲಭ್ಯ ನೀಡಿ ಅರ್ಜಿದಾರರಿಗೆ ಅನುಕೂಲ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.
ಕಂದಾಯ ಇಲಾಖೆಯಲ್ಲಿ ಅನುದಾನದ ಕೊರತೆ ಇದ್ದು ತಕ್ಷಣ ಕೆ.ಕೆ.ಆರ್.ಡಿ.ಬಿ ಇಲಾಖೆ ಪತ್ರ ಬರೆದು ಅನುದಾನ ಅನುದಾನ ಬಂದ ತಕ್ಷಣ ಸರಿ ಮಾಡಲಾಗುವುದು.
ನಾಡಕಚೇರಿಯಲ್ಲಿ ಬ್ಯಾಟರಿ ಸೌಲಭ್ಯ ಇಲ್ಲದ ಕಾರಣ ಮತ್ತು ವಿದ್ಯುತ ಸಮಯಕ್ಕೆ ಸರಿಯಾಗಿ ಬರದೇ ಇರುವ ಕಾರಣ ಸಾರ್ವಜನಿಕರಿಗೆ ತೊಂದ್ರೆ ಆಗುತ್ತಿದೆ ತಕ್ಷಣ ಕ್ರಮ ವೈಸದೇ ಹೋದರೆ ಉಗ್ರವಾದ ಹೋರಾಟ ಮಾಡಲಾಗುವುದು.
—-ಅಲ್ಲಾಪಟೇಲ್ ಬಿರಾದಾರ ರಾಜ್ಯ ರೈತ ಸಂಘಟನೆ ಜಿಲ್ಲಾ ಪ್ರಧಾನಿ ಕಾರ್ಯದರ್ಶಿ ಇಜೇರಿ.