ನಿಯಮಾನುಸಾರ ಕೆಲಸ ಮಾಡಿ ಇಲ್ಲದಿದ್ದಲ್ಲಿ ತಾಲೂಕು ಬಿಡಿ ಬಸನಗೌಡ ಬಾದರ್ಲಿ ಅಧಿಕಾರಿಗಳಿಗೆ ಎಚ್ಚರಿಕೆ
ಸಿಂಧನೂರು ಆ.೧೩: ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಯಮಾನುಸಾರ ಸಾರ್ವಜನಿಕರ ಕೆಲಸ ಮಾಡಿ ಇಲ್ಲದಿದ್ದಲ್ಲಿ ತಾಲೂಕು ಬಿಡಿ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನೂತನ ಸದಸ್ಯರಾಗಿ ಆಯ್ಕೆಯಾಗಿ ತಮ್ಮ ಜನಸ್ಪಂದನಾ ಕಾರ್ಯಾಲಯದ ಬಹಿರಂಗ ಸಮಾರಂಭದಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ನಿಮ್ಮಿಂದ ಒಂದು ನಯಾ ಪೈಸೆ ಬೇಡ ಎಂದರು.ಶಾಸಕ ಹಂಪನಗೌಡ ಬಾದರ್ಲಿ ಕೇಂದ್ರದ ಮೋದಿಯವರ ರೀತಿಯಲ್ಲಿ ಮಾತಿಗೂ ಕೃತಿಗೂ ಹೋಲಿಕೆ ಇಲ್ಲ .ರಾಜಕೀಯ ದ್ವೇಷ ,ಸ್ವಾರ್ಥ ಮನೋಭಾವ ,ಬೇರೊಬ್ಬರ ಬೆಳವಣಿಗೆ ಸಹಿಸದಿರುವುದು ಮಾಡುತ್ತಿದ್ದಾರೆ. ಕೇಂದ್ರದ ರಾಜಕೀಯ ನಾನು ಮಾಡುವುದಿಲ್ಲ .ವಿಧಾನ ಪರಿಷತ್ ಸದಸ್ಯ ನಾಮಪತ್ರ ಸಲ್ಲಿಸದಂತೆ ಅದೆಷ್ಟೋ ಜನರು ವಿರೋಧಿಸಿರುವುದು ಗೊತ್ತು.ಮುಖ್ಯಮಂತ್ರಿ ಸಿದ್ದರಾಮಯ್ಯ ,ಉಪ ಮುಖ್ಯಮಂತ್ರಿ ,ರಾಜಕೀಯ ಗುರು ಡಿಕೆಶಿ ಹಾಗೂ ಹೈ ಕಮಾಂಡ್ ನನ್ನನ್ನು ವಿಧಾನ ಪರಿಷತ್ ಸದಸ್ಯರನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆಂದರು.
ನಮ್ಮ ಸಿಂಧನೂರಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ,ಎಲ್.ಎಲ್.ಬಿ ,ಐ.ಟಿ.ಐ ,ಪ್ಯಾರಾ ಮೆಡಿಕಲ್ ,ನರ್ಸಿಂಗ್ ,ಇಂಜಿನಿಯರಿಂಗ್ ಕಾಲೇಜು ಗಳಿಲ್ಲ ಹಂತ ಹಂತವಾಗಿ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಮಂಜೂರು ಮಾಡಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ.ಕೊಪ್ಪಳ ಹಾಗೂ ರಾಯಚೂರು ಸಂಸದರೊಡಗೂಡಿ ಸಿ.ಎಸ್.ಎಫ್ ಕ್ಯಾಂಪ್ ನಲ್ಲಿನ ೭೮೦೦ ಎಕರೆ ಸದುಪಯೋಗಕ್ಕೆ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ರವರಿಗೆ ಮನವಿ ಕೂಡ ಸಲ್ಲಿಸಿದ್ದೆವೆ ಇದರಿಂದ ಹೆಚ್ಚಿನ ಉದ್ಯೋಗ ,ಸಂಪನ್ಮೂಲಗಳ ಸದ್ಭಳಕೆ ಆಗುತ್ತದೆ ಎಂದರು.ಅಭಿವೃದ್ಧಿ ವಿಷಯದಲ್ಲಿ ಯಾವಾಗಲೂ ನಾ ಮುಂಚುಣಿಯಲ್ಲಿರುತ್ತೆನೆ ನೀವು ತಾಲೂಕಿನ ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥ ಮಾಡಿ ಸದಾ ಬಸನಗೌಡ ಬಾದರ್ಲಿ ಏನು ಮಾಡುತ್ತಾನೆಂದು ಕಾಲ ಹರಣ ಮಾಡಬೇಡಿ ಎಂದು ಹಂಪನಗೌಡ್ರಗೆ ನೇರವಾಗಿ ಟಾಂಗ್ ಕೊಟ್ಟರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಿರುಪಾದೆಪ್ಪ ವಕೀಲರು ಗುಡಿಹಾಳ ಮಾತನಾಡಿ ತುಳಿಯುವವರಿದ್ದಂತೆ ಬೆಳೆಸುವವರು ಇರುತ್ತಾರೆ
ನಿರಂತರ ಶ್ರಮ ,ಪಕ್ಷ ಸಂಘಟನೆ ಈ ಮಟ್ಟಕ್ಕೆ ಕರೆದುಕೊಂಡು ಹೋಗಿದೆ .ಪಕ್ಷ ಮುಖ್ಯ, ವ್ಯಕ್ತಿ ಅಲ್ಲ ಎಂದರು.
ಕೆ ಪಿ ಸಿ ಸಿ ಸದಸ್ಯ ನಲ್ಲಾ ವೆಂಕಟೇಶ್ವರ ರಾವ್ ಮಾತನಾಡಿ ೪೦ ವರ್ಷದ ಸಿಂಧನೂರು ರಾಜಕೀಯ ಇತಿಹಾಸದಲ್ಲಿ ಇಷ್ಟೊಂದು ಅದ್ದೂರಿಯಾಗಿ ಕಾರ್ಯಕರ್ತರು ,ಅಭಿಮಾನಿಗಳಿಂದ ಒಬ್ಬ ನಾಯಕನಿಗೆ ಮೆರವಣಿಗೆ ನಡೆದಿಲ್ಲ ಇಂದಿಗೆ ಇತಿಹಾಸ ದಾಖಲೆ ಎಂದರು.
ಮುಖಂಡರಾದ ಹೆಚ್.ಎನ್ ಬಡಿಗೇರ ,ವೆಂಕಣ್ಣ ಜೋಷಿ,ಶಿವಕುಮಾರ ಜವಳಿ ,ವೆಂಕಟೇಶ ನಾಯಕ ,ಯಂಕನಗೌಡ ಗಿಣಿವಾರ ಮಾತನಾಡಿದರು .
ವೇದಿಕೆಯಲ್ಲಿ ಶರಣಯ್ಯ ಕೋಟೆ ,ಶೇಖರಗೌಡ ದೇವರಮನಿ ,ಹನುಮೇಶ ಬಾಗೋಡಿ ,ಅಮರೇಶ ಗಿರಿಜಾಲಿ ಅನೇಕರಿದ್ದರು ವಿರೇಶ ರಾರಾವಿ ರೈತ ಗೀತೆ ಹಾಡಿದರು.