ಕಬಡ್ಡಿ ಕ್ರೀಡಾ ಪಂದ್ಯಾವಳಿ
ಚನ್ನಮ್ಮನ ಕಿತ್ತೂರ,ಆ13: ಕ್ರೀಡೆ ಮನುಷ್ಯನ ಜೀವನದಲ್ಲಿ ಉತ್ತಮವಾದುದ್ದು ಅದನ್ನು ಬೆಳೆಸಿಕೊಂಡರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಆರೋಗ್ಯದಿಂದ ಇರಬಹುದೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಗಜರಾಜ ಪ್ಯಾಲೇಸ್ ಹತ್ತಿರದ ಚಂದ್ರಮ್ಮ ಅಂಗಡಿ ಕಲ್ಯಾಣ ಮಂಟಪದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜ ಕಿತ್ತೂರು ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಐ,ಕ್ಯೂ,ಎ.ಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಬಡ್ಡಿ ಕ್ರೀಡಾ ಪಂದ್ಯಾವಳಿ ಕಾರ್ಯಕ್ರಮದ ದೀಪಬೆಳಗಿಸಿ ಮಾತನಾಡಿದವರು. ಕ್ರೀಡೆ ಎಂಬುದು ಸಂಘಟಿತ,ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯದ ಆಟದ ಅಗತ್ಯವಿರುತ್ತದೆ. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಎರಡು ನಿರ್ಧಾರವಾಗುತ್ತವೆ. ಸೋತವರು ಧೃತಿಗೆಡಬಾರದು. ಅವರ ಪ್ರಯತ್ನವಿದ್ದರೆ ಮುಂದೊಂದು ದಿನ ಜಯ ದೊರೆಯುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರೋ. ಎನ್.ಎಸ್.ಗಲಗಲಿ ಮಾತನಾಡಿ ಪ್ರತಿಯೊಂದು ಕ್ರೀಡೆಯೂ ತನ್ನದೇ ಆದ ವೈಶಿಷ್ಠ್ಯವನ್ನು ಹೊಂದಿದೆ. ಕಬಡ್ಡಿ ಆಟವು ಭಾರತೀಯ ಕ್ರೀಡೆಯಾಗಿದ್ದು ,ಅದು ಅಂತಾರಾಷ್ಟ್ರೀಯ ಮಟ್ಟದವರೆಗೂ ಬೆಳೆದಿದೆ. ಈ ಆಟವು ಯಾವುದೇ ವೆಚ್ಚವಿಲ್ಲದ ಕಡಿಮೆ ಅಂಕಣದಲ್ಲಿ ಆಡಬಹುದಾಗಿದೆ . ಈ ಆಟವು ಸ್ಪರ್ಧಿಗಳಲ್ಲಿ ಧೈರ್ಯ ಮತ್ತು ಮುನ್ನುಗ್ಗುವ ಪ್ರವೃತ್ತಿ ವೃದ್ಧಿಸುತ್ತದೆ. ಎಂದು ಹೇಳಿದರು.
ಕಬಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಶುಂಪಾಲ ಡಾ. ಟಿ.ಬಿ. ಕೋಲಕಾರ ವಹಿಸಿಕೊಂಡಿದ್ದರು. ಕ್ರೀಡೆಯಲ್ಲಿ 30 ತಂಡಗಳು ಭಾಗವಹಿಸಿದ್ದವು.
ಈ ವೇಳೆ ಮುಖ್ಯ ಅತಿಥಿ ಮಹೇಶ ಶೆಟ್ಟರ, ಅಶಪಾಕ ಹವಾಲ್ದಾರ, ದೇವಗಾಂವ ಚಂದ್ರಗೌಡ ಪಾಟೀಲ, ಕೃಷ್ಣಾ ಬಾಳೆಕುಂದ್ರಿ, ಕಾಲೇಜಿನ ಸರ್ವ ಪ್ರಾಧ್ಯಾಪಕರು, ವಿವಿಧ ಕಾಲೇಜಿನ ತಂಡದ ವಿದ್ಯಾರ್ಥಿಗಳು, ಸಿಡಿಸಿ ಸದಸ್ಯರುಗಳು ಆಟ ವಿಕ್ಷಣೆಗೆ ಸಾರ್ವಜನಿಕರಿದ್ದರು. ನಿರೂಪಣೆ ಡಾ. ಶಿವಾಜಿ ಗೋಡಾಜಿ, ಸ್ವಾಗತ ದೈಹಿಕ ಶಿಕ್ಷಕ ನಿರ್ದೇಶಕ ಎಲ್.ಪಿ.ಬೂದನ್ನವರ ನೆರವೇರಿಸಿದರು.