ಅಕ್ರಮ ಮರಳು ಸಾಗಾಣಿಕೆ ಟಿಪ್ಪರ್ ವಶ : ಪ್ರಕರಣ ದಾಖಲು
ಸಿಂಧನೂರು.ಆ.೧೩
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ನ್ನು ಬಳಗಾನೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ದಿದ್ದಿಗಿ ಹತ್ತಿರ ಅಕ್ರಮ ಮರಳು ತುಂಬಿಕೊಂಡು ಬರುತ್ತಿದ್ದ ಕೆಎ-೩೬ , ಸಿ-೪೯೭೬ ಟಿಪ್ಪರ್‌ನ್ನು ಪರಿಶೀಲಿಸಿದ ಪೊಲೀಸರು, ರಾಯಲ್ಟಿ ಇಲ್ಲದೇ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿರುವುದನ್ನು ಖಚಿತ ಪಡಿಸಿಕೊಂಡು ಟಿಪ್ಪರ್‌ನ್ನು ವಶಕ್ಕೆ ಪಡೆದು ಠಾಣೆಗೆ ತೆಗೆದುಕೊಂಡು ಹೋಗಿ ದೂರು ದಾಖಲಿಸಿಕೊಂಡಿದ್ದಾರೆ.