ಬಸವೇಶ್ವರ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ
ಸಿರವಾರ.ಅ೧೩- ವಿದ್ಯಾರ್ಥಿ ಜೀವನದಲ್ಲಿ ಪದವಿ ಹಂತ ಪ್ರಮುಖವಾಗಿದೆ. ಇಲಿಂದ ಕೇಲವರು ಉದ್ಯೋಗಕ್ಕೆ ಹೋಗುತ್ತಾರೆ, ಕೇಲವರು ಓದು ಮುಂದು ವರಿಸುತ್ತಾರೆ, ಈ ಹಂತದಲ್ಲಿ ಕಲಿತ ವಿದ್ಯೆ ಜೀವನದ ಊದಕ್ಕೂ ಸಹಕಾರಿಯಾಗುತ್ತದೆ ಎಂದು ಮಾನ್ವಿ ಶಾಸಕರಾದ ಜಿ.ಹಂಪಯ್ಯನಾಯಕ ಹೇಳಿದರು. ಪಟ್ಟಣದ ಬಸವೇಶ್ವರ ಪದವಿ ಕಾಲೇಜಿನ ಬಿಎ, ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ ಬಿಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸದಾ ಗುರಿಯತ್ತ ತಮ್ಮ ಚಿತ್ತವನ್ನು ನೀಡಬೇಕು, ಪದವಿ ಮುಗಿದ ತಕ್ಷಣ ಕೆಲವು ಉದ್ಯೋಗದತ್ತ ಮುಖ ಮಾಡಿದರೆ, ಮತ್ತೆ ಕೆಲವರು ಉನ್ನತ ವಿದ್ಯಾಭ್ಯಾಸದ ಹೋಗುತ್ತಾರೆ. ಇದರ ಜತೆಗೆ ಜತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ನೀವು ಏಷ್ಟೇ ಉನ್ನತ ಹುದ್ಧೆಗೆ ಹೋದರು ನಿಮ್ಮ ಹಿರಿಯರನ್ನು ವಿದ್ಯೆ ಕಲಿಸಿದ ಗುರುಗಳನ್ನು, ಸಂಸ್ಥೆಯನ್ನು ಮರೆಯಬಾರದು, ನೀವು ಯಾವುದಾದರೂ ಹುದ್ದೆಗೆ ನೇಮಕವಾದಾಗ ಉಪನ್ಯಾಸಕರು ಮಾಡಿದ ಪಾಠಕ್ಕೆ ಸಾರ್ಥಕವಾಗುತ್ತದೆ ಎಂದರು.
ಸಾನಿದ್ಯ ವಹಿಸಿದ ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ತಮ್ಮ ಆಶಿರ್ವಚನದಲ್ಲಿ ವಿದ್ಯಾರ್ಥಿ ಜೀವನದ ಶಿಸ್ತು ಬಹಳ ಮುಖ್ಯ, ಗುರು ಹಿರಿಯರಿಗೆ ಗೌರವ ನೀಡುವದನ್ನು ಕಲಿಯಬೇಕು. ಹೆತ್ತವರು, ಉಪನ್ಯಾಸಕ ನಿಮಗಾಗಿ ಏಷ್ಟು ಕಷ್ಟ ಪಡುತ್ತಿದ್ದಾರೆಂಬುದನ್ನು ತಿಳಿದು ಅಭ್ಯಾಸ ಮಾಡಿ, ನಿರ್ಲಕ್ಷ್ಯ ಮಾಡಿದರೆ, ಜೀವನ ವ್ಯರ್ಥ ಎಂದರು. ಈ ಸಂದರ್ಭದಲ್ಲಿ ಗ್ಯಾರೆಂಟಿ ಸಮಿತಿ ಅದ್ಯಕ್ಷ ಬ್ರೀಜೇಶ ಪಾಟೀಲ್, ಯುವ ಮುಖಂಡರಾದ ರಮೇಶದರ್ಶನಕರ್, ಶಿವಶರಣಸಾಹುಕಾರ ಅರಕೇರಿ, ಪ. ಸದಸ್ಯ ವೈ.ಭೂಪನಗೌಡ, ಪಿಎಸ್‌ಐ ಗುರುಚಂದ್ರ ಯಾದವ, ಸಂಸ್ಥೆಯನಿರ್ಧೇಶಕರಾದ ಎಂ.ವೆಂಗಲ್ ರೆಡ್ಡಿ, ಮು.ಗು.ರಾಜಶೇಖರ ದಿನ್ನಿ, ಇಂದಿರಾಗಾಂದಿ ವಸತಿ ಶಾಲೆಯ ಪ್ರಾಚಾರ್ಯ ರಾಮಪ್ಪನಾಯಕ, ಪ್ರಾಚಾರ್ಯ ಡಾ.ಧರ್ಮಣ, ರಮೇಶ ಪವಾರ್, ವೈಜನಾಥ, ಉಪನ್ಯಾಸಕರು ಇದ್ದರು.