ರಾಷ್ಟ್ರ ದ್ವಜ ನಮ್ಮ ಹೆಮ್ಮೆ -ಜೆ.ದೇವರಾಜಗೌಡ
ಸಿರವಾರ.ಅ೧೩- ನಮ್ಮ ದೇಶ, ರಾಷ್ಟ್ರ ದ್ವಜ ನಮ್ಮ ಹೆಮ್ಮೆಯಾಗಿದೆ, ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿ ಮನೆ, ಕಛೇರಿಗಳ ಮೇಲೆ ರಾಷ್ಟ್ರ ದ್ವಜ ಹಾರಿಸುವ ಮೂಲಕ ಗೌರವ ನೀಡುವುದಕ್ಕಾಗಿ ದ್ವಜಾರೋಹಣ ಮಾಡಲಾಗಿದೆ ಎಂದು ಬಿಜೆಪಿ ಸಿರವಾರ ತಾಲೂಕ ಅದ್ಯಕ್ಷ ಜೆ.ದೇವರಾಜಗೌಡ ಹೇಳಿದರು. ಪಟ್ಟಣದಲ್ಲಿರುವ ಬಿಜೆಪಿಯ ಕಛೇರಿಯ ಮೇಲೆ ದ್ವಜಾರೋಹಣ ಮಾಡುವ ಮೂಲಕ ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.