ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮ
ಸಿರವಾರ.ಅ೧೩: ದಲಿತರು, ಶೋಷಿತರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸದೃಡರಾಗಲು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಾರಿದ ಚಿಂತನೆಗಳನ್ನು ಅಳವಡಿಸಿಕೊಂಡು ಅನುಸರಿಸಬೇಕಾಗಿದೆ ಎಂದು ಸಿರವಾರ ತಾಲೂಕ ವಸತಿ ನೋಡಲ್ ಅಧಿಕಾರಿ ಗೋಪಲ್ ಬಡಿಗೇರ್ ಮಾನ್ವಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಜಕ್ಕಲದಿನ್ನಿ ಗ್ರಾಮದ ಸರಸ್ವತಿ – ರಮೇಶ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ, ೯೯ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್ಸಿ, ಎಸ್ಟಿ, ಹಿಂದುಳಿದ ಸಮುದಾಯಗಳು ಮೌಡ್ಯಾಚರಣೆಗಳನ್ನು ಬಿಡಬೇಕು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಗೌರವಯುತ ಉದ್ಯೋಗ ಪಡೆಯಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕಾಧ್ಯಕ್ಷ ಎಂ.ಗುಂಡಪ್ಪ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿ ಬಹುಜನರು ಸ್ವಾವಲಂಬಿಯಾಗಿ ಮತ್ತು ಸ್ವಾಭಿಮಾನದಿಂದ ಬದುಕಲು ಸಂವಿಧಾನಬದ್ಧವಾಗಿ ಹಕ್ಕುಗಳನ್ನು ಕೊಟ್ಟವರು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಎಂದರು.
ಪ್ರಾಸ್ತಾವಿಕವಾಗಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಉಪನ್ಯಾಸಕ ರಾಘವೇಂದ್ರ ಮಾನ್ವಿ ಮಾತನಾಡಿದರು. ರಮೇಶ ಜಕ್ಕಲದಿನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಹುಜನ ಸಂಘರ್ಷ ಸಮಿತಿ ಅರಕೇರಾ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಮರಕಂದಿನ್ನಿ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಜಯರಾಜ ಗುತ್ತೆದಾರ ಜಕ್ಕಲದಿನ್ನಿ, ಬಸಂಸ ಸದಸ್ಯ ಬಸವರಾಜ ಮರಕಂದಿನ್ನಿ, ಮಲ್ಲಪ್ಪ ಮಡಿವಾಳ, ಬಸ್ಸಮ್ಮ, ಸುನಿತಾ, ಹನುಮಂತಿ, ಗ್ಯಾನಪ್ಪ, ನಿಂಗಮ್ಮ, ಈರಮ್ಮ, ಮೌನೇಶ ರಾಮಪ್ಪ, ದೇವರಾಜ, ಆದೆಪ್ಪ ಮರಕಂದಿನ್ನಿ ಸೇರಿದಂತೆ ಮಕ್ಕಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.