ಶ್ರೀ ಹರಿನಾಮ ಸಂಕೀರ್ತನ ಸಪ್ತಾಹ
ಮುನವಳ್ಳಿ,ಆ13: ಪಟ್ಟಣದ ಮಲಪ್ರಭಾ ನದಿ ದಂಡೆಯಲ್ಲಿರುವ ಶ್ರೀ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ ಅಗಸ್ಟ್ 15 ರಿಂದ ಅಗಸ್ಟ್ 22 ರವರೆಗೆ ಶ್ರೀ ಹರಿನಾಮ ಸಂಕೀರ್ತನ ಸಪ್ತಾಹ ಸೋಹಳಾ ಜರಗುವುದು.
ದಿ.15 ರಂದು ಪೋತಿ ಸ್ಥಾಪನೆಯೊಂದಿಗೆ ಪ್ರಾರಂಭಗೊಂಡು ಪ್ರತಿ ದಿನ ಪ್ರವಚನ, ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಸಾಮೂಹಿಕ ಪಾರಾಯಣ, ಶ್ರೀ ಪಾಂಡವ ಪ್ರತಾಪ ಗ್ರಂಥ, ಶ್ರೀ ಹರಿಕೀರ್ತನೆ, ವೀಣಾ ಜಾಗರಣೆ ಹಾಗೂ ಕಾಕಡಾರತಿ ಜರಗುವುದು. ಸಂತಮಂಡಳಿ ತಮ್ಮ ತಾಳ ಮೃದಂಗ ಸಹಿತ ಆಗಮಿಸಿ ಶ್ರೀ ಪಾಂಡುರಂಗನ ಕೃಪೆಗೆ ಪಾತ್ರರಾಗಲು ದೇವಸ್ಥಾನದವರು ಪ್ರಕಟಣೆಯಲ್ಲಿ ತಿಳಿಸಿರುವರು.