ಅಫಜಲಪುರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
ಅಫಜಲಪುರ:ಆ.13: ಪಟ್ಟಣದ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಕಳ್ಳತನವಾದ ವಾಹನಗಳು ಮತ್ತು ಚಿನ್ನವನ್ನು ಅಫಜಲಪುರ ಪೆÇಲೀಸರು ವಶಪಡಿಸಿಕೊಂಡಿದ್ದು ಆರೋಪಿತನನ್ನು ಕಾನೂನು ಕ್ರಮಕ್ಕೆ ಒಳಪಡಿಸಿದ ಘಟನೆ ಸೋಮವಾರ ಸಂಜೆ ಜರುಗಿದೆ.
ಕಲಬುರಗಿ ಎಸ್.ಪಿ ಅಡ್ಡೂರು ಶ್ರೀನಿವಾಸುಲು ಹೆಚ್ಚುವರಿ ಎಸ್.ಪಿ ಎನ್ ಶ್ರೀನಿಧಿ, ಡಿ.ವೈ.ಎಸ್.ಪಿ ಗೋಪಿ ಬಿ.ಆರ್, ಸಿ.ಪಿ.ಐ ಚೆನ್ನಯ್ಯ ಹಿರೇಮಠ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಸೋಮಲಿಂಗ ಒಡೆಯರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಸವರಾಜ, ಮಲ್ಲಿಕಾರ್ಜುನ ಭಾಸಗಿ, ಕಾಶಿನಾಥ, ಮಲ್ಲಿಕಾರ್ಜುನ ಹಿಪ್ಪರಗಿ, ಸುನೀಲ, ಸಂತೋಷ, ಶಿವಪ್ಪ, ವಿಶ್ವನಾಥ, ಯಲಗೊಂಡ, ಸಿದ್ದಾರಾಮ, ಮಲ್ಲಿನಾಥ, ಇಮಾಮ, ಶಂಕರ, ಚಂದ್ರಕಾಂತ, ಸುರೇಶ, ರಾಜು ಹೊನ್ನಕಂಠಿ ಒಳಗೊಂಡ ತಂಡವು ನಿರಂತರ ಕಾರ್ಯಾಚರಣೆ ನಡೆಸಿ ಮುಜಾಫರ್ ತಂ. ಮುನೀರ ಅಹ್ಮದ್ ಮಲ್ಲಿಕಸಾಬ ಕೊರಬು(23) ಎಂಬ ಆರೋಪಿಯನ್ನು ಬಂಧಿಸಿ ಬಂಧಿತನಿಂದ ಕಳ್ಳತನವಾದ ಬುಲೆರೊ ವಾಹನ, ಚಿನ್ನ, ವಿವಿಧ ಕಂಪನಿಯ 11 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳತನವಾದ ಎಲ್ಲಾ ವಸ್ತುಗಳ ಮೌಲ್ಯ ಸುಮಾರು 11 ಲಕ್ಷ 23 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಸಿಬ್ಬಂದಿಗಳ ಕಾರ್ಯಾಚರಣೆಗೆ ಇಲಾಖೆಯ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.